ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್‍ಗೆ ದಂಡ ವಿಧಿಸಿ, ಪರಿಹಾರ ನೀಡಲು ಆದೇಶ

ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್‍ನ ಪಾಲುದಾರರಾದ ಶಿವನಗೌಡ ಪಾಟೀಲ ಎಂಬುವವರು ಇಟಿಗಟ್ಟಿ ಗ್ರಾಮದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ಇಟಿಗಟ್ಟಿ ಲೇಔಟನಲ್ಲಿ, ಹುಬ್ಬಳ್ಳಿಯ ಅಧ್ಯಾಪಕ ನಗರ ನಿವಾಸಿ ನಾಗರತ್ನ ಮುಂಡರಗಿ ಮತ್ತು ಧಾರವಾಡದ ಸತ್ತೂರ ನಿವಾಸಿ ಮೋಹನ ಡೊಂಬರ ಎಂಬುವವರು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ಪೃಥ್ವಿ ಡವಲಪರ್ಸ್‍ಜೊತೆ ಪ್ಲಾಟ ನಂ.9, 10 ಮತ್ತು 11ರ ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಒಂದೊಂದು ಸೈಟಿಗೆ ರೂ.5,63,600/- ರೂಪಾಯಿ ಹಣ ಸಂದಾಯ ಮಾಡಿದ್ದರು.

Written by - Zee Kannada News Desk | Last Updated : Feb 3, 2024, 11:17 PM IST
  • ಹಣ ಸಂದಾಯವಾದ ದಿನಾಂಕದಿಂದ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ಪೂರ್ತಿ ಹಣಕೊಡಲು ಆಯೋಗ ಆದೇಶಿಸಿದೆ.
  • ತಲಾ ರೂ.50,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಪೃಥ್ವಿ ಡವಲಪರ್ಸ್‍ಗೆ ನಿರ್ದೇಶಿಸಿದೆ.
ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್‍ಗೆ ದಂಡ ವಿಧಿಸಿ, ಪರಿಹಾರ ನೀಡಲು ಆದೇಶ title=

ಧಾರವಾಡ : ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್‍ನ ಪಾಲುದಾರರಾದ ಶಿವನಗೌಡ ಪಾಟೀಲ ಎಂಬುವವರು ಇಟಿಗಟ್ಟಿ ಗ್ರಾಮದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ಇಟಿಗಟ್ಟಿ ಲೇಔಟನಲ್ಲಿ, ಹುಬ್ಬಳ್ಳಿಯ ಅಧ್ಯಾಪಕ ನಗರ ನಿವಾಸಿ ನಾಗರತ್ನ ಮುಂಡರಗಿ ಮತ್ತು ಧಾರವಾಡದ ಸತ್ತೂರ ನಿವಾಸಿ ಮೋಹನ ಡೊಂಬರ ಎಂಬುವವರು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ಪೃಥ್ವಿ ಡವಲಪರ್ಸ್‍ಜೊತೆ ಪ್ಲಾಟ ನಂ.9, 10 ಮತ್ತು 11ರ ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಒಂದೊಂದು ಸೈಟಿಗೆ ರೂ.5,63,600/- ರೂಪಾಯಿ ಹಣ ಸಂದಾಯ ಮಾಡಿದ್ದರು.

ಇದನ್ನೂ ಓದಿ: Wi-Fi Router: ರಾತ್ರಿ ಮಲಗುವ ಮುನ್ನ Wi-Fi ರೂಟರ್ ಆಫ್ ಮಾಡಲ್ವಾ? ಇದೆಷ್ಟು ಡೇಂಜರಸ್ ಗೊತ್ತಾ?

ಸಾಕಷ್ಟು ಕಾಲಾವಕಾಶ ಕಳೆದರೂ ಬಿಲ್ಡರ ಲೇಔಟ್ ನಿರ್ಮಾಣ ಮಾಡದೇ, ತಮಗೆ ಬುಕ್ ಮಾಡಿದ ಸೈಟ್ ಕೊಡದೇ ಸೇವಾ ನೂನ್ಯತೆ ಎಸಗಿ ಮತ್ತು ಮೋಸ ಮಾಡಿದ್ದಾರೆ ಅಂತಾ ಹೇಳಿ ಇಬ್ಬರೂ ದೂರುದಾರರು ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಗ್ರಾಹಕರ ಆಯೋಗಕ್ಕೆ sಸೇಪ್ಟಂಬರ್ 4,2023 ರಂದು ಈ ದೂರುಗಳನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಕವಿಪವಿ ವೆಬಿನಾರ್: ಯಾವುದೇ ಮಾಧ್ಯಮದ ಭವಿಷ್ಯ ಆತಂಕದಲ್ಲಿಲ್ಲ; ಸಂಪಾದಕರ ಅಭಿಮತ

ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ಸದಸ್ಯರಾದ ವಿ.ಅ.ಬೋಳಶೆಟ್ಟಿ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲ್ಯಾಟುಗಳನ್ನು ಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.

ಈ ಬಗ್ಗೆ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್‍ನ ಪಾಲುದಾರರಾದ ಶಿವನಗೌಡ ಪಾಟೀಲ ಅವರು ದೂರುದಾರರಿಂದ ಪಡೆದ ಒಟ್ಟು ಹಣ ರೂ.18,70,800/-ಕ್ಕೆ ಶೆ8% ರಂತೆ ಹಣ ಸಂದಾಯವಾದ ದಿನಾಂಕ ದಿಂದ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ಪೂರ್ತಿ ಹಣಕೊಡಲು ಆಯೋಗ ಆದೇಶಿಸಿದೆ. ಜೊತೆಗೆ ದೂರುದಾರರು ಅನುಭವಿಸಿದ ಮಾನಸಿಕ ತೊಂದರೆ ಹಾಗೂ ಅನಾನುಕೂಲತೆಗಾಗಿ ತಲಾ ರೂ.50,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಪೃಥ್ವಿ ಡವಲಪರ್ಸ್‍ಗೆ ನಿರ್ದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News