ಪ್ರಕಾಶನ ಲೋಕದ ದಿಗ್ಗಜ ಆರ್.ಎಸ್.ರಾಜಾರಾಮ ಇನ್ನಿಲ್ಲ

RS Rajaram Passed Away: 1941ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ರಾಜಾರಾಮ ಅವರು ಮಂಗಳೂರು ಮತ್ತು ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು.ಹೈಸ್ಕೂಲ್ ಓದುವಾಗಲೇ ಮಾರ್ಕ್ಸ್ ವಾದಿ ಸಾಹಿತ್ಯ ಒದಿ ಪ್ರಭಾವಿತರಾದ ಇವರು ಮಂಗಳೂರಿನ ಕಮ್ಯುನಿಸ್ಟ್ ಚಳುವಳಿಗಾರರ ಸಂಪರ್ಕಕ್ಕೆ ಬಂದು ರೈತ ಕಾರ್ಮಿಕರ ಚಳುವಳಿಗಳಲ್ಲಿ ತೊಡಗಿಸಿಕೊಂಡರು

Written by - Manjunath N | Last Updated : Aug 17, 2024, 12:59 PM IST
  • 1941ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ರಾಜಾರಾಮ ಅವರು ಮಂಗಳೂರು ಮತ್ತು ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು.
  • ಇವರು ಮಂಗಳೂರಿನ ಕಮ್ಯುನಿಸ್ಟ್ ಚಳುವಳಿಗಾರರ ಸಂಪರ್ಕಕ್ಕೆ ಬಂದು ರೈತ ಕಾರ್ಮಿಕರ ಚಳುವಳಿಗಳಲ್ಲಿ ತೊಡಗಿಸಿಕೊಂಡರು
ಪ್ರಕಾಶನ ಲೋಕದ ದಿಗ್ಗಜ ಆರ್.ಎಸ್.ರಾಜಾರಾಮ ಇನ್ನಿಲ್ಲ title=

ಬೆಂಗಳೂರು: ಕರ್ನಾಟಕದ ಪುಸ್ತಕ ಪ್ರಕಾಶನ ಲೋಕಕ್ಕೆ ಹೊಸ ಮಾರ್ಗ, ವೈಚಾರಿಕ ದೃಷ್ಟಿಕೋನ ಒದಗಿಸಿದ ಚಿಂತಕ ಪ್ರಕಾಶಕ ಆರ್ ಎಸ್ ರಾಜಾರಾಮ ಇಂದು ಬೆಳಿಗ್ಗೆ ಬೆಂಗಳೂರಿನ ಅಬ್ಬಿಗೆರೆಯ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.ಅವರಿಗೆ 84 ವರ್ಷಗಳಾಗಿದ್ದವು.

1941ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ರಾಜಾರಾಮ ಅವರು ಮಂಗಳೂರು ಮತ್ತು ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು.ಹೈಸ್ಕೂಲ್ ಓದುವಾಗಲೇ ಮಾರ್ಕ್ಸ್ ವಾದಿ ಸಾಹಿತ್ಯ ಒದಿ ಪ್ರಭಾವಿತರಾದ ಇವರು ಮಂಗಳೂರಿನ ಕಮ್ಯುನಿಸ್ಟ್ ಚಳುವಳಿಗಾರರ ಸಂಪರ್ಕಕ್ಕೆ ಬಂದು ರೈತ ಕಾರ್ಮಿಕರ ಚಳುವಳಿಗಳಲ್ಲಿ ತೊಡಗಿಸಿಕೊಂಡರು.May be an image of 1 person, smiling and text

ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಶ್ರೀ ಬಿ.ವಿ.ಕಕ್ಕಿಲ್ಲಾಯ ಅವರ ಸೂಚನೆಯ ಮೇರೆಗೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಸಂಸ್ಥೆಯಲ್ಲಿ ಶ್ರೀ ಎಸ್ ಆರ್ ಭಟ್ ಅವರಿಗೆ ಸಹಾಯಕರಾಗಿ 1960 ರಲ್ಲಿ ಸೇರಿಕೊಂಡರು.ಮುಂದೆ ತಮ್ಮ ಕ್ರಿಯಾಶೀಲತೆಯಿಂದ ನವಕರ್ನಾಟಕ ಪ್ರಕಾಶನದ ವಿವಿಧ ಹುದ್ದೆಗಳಿಗೆ ಏರಿ ವ್ಯವಸ್ಥಾಪಕ ನಿರ್ದೇಶಕರಾದರು.ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನವಕರ್ನಾಟಕ ಪ್ರಕಾಶನ ಸಂಸ್ಥೆಯನ್ನು ಮುನ್ನಡೆಸಿದ ರಾಜಾರಾಮ,ತಾವೂ ಬೆಳೆದು ಸಂಸ್ಥೆಯನ್ನೂ ಬೆಳೆಸಿ, ಕನ್ನಡ ಸಾಹಿತ್ಯ  ಲೋಕಕ್ಕೆ ಜನಪರ , ವೈಚಾರಿಕ, ವೈಜ್ಞಾನಿಕ ಮಾರ್ಗ ನಿರ್ಮಿಸಿದರು.

ಕನ್ನಡ ಪುಸ್ತಕ ಪ್ರಕಾಶನದ ಮಾರ್ಗದಲ್ಲಿ ಮಾದರಿಯಾದ, ಮೈಲುಗಲ್ಲಾದ ರಾಜಾರಾಮ ಇಂದು ಚಿರನಿದ್ರೆಗೆ ಜಾರಿದ್ದಾರೆ.ಪುತ್ರ ಡಾ.ಹರ್ಷ,ಪುತ್ರಿ ಪೂರ್ಣ,ಸೊಸೆ ಡಾ.ಪ್ರಿಯಾ, ಅಳಿಯ ರಾಘವೇಂದ್ರ , ಮೊಮ್ಮಕ್ಕಳು ,ಅಸಂಖ್ಯ ಬಂಧು ಬಳಗವನ್ನು,ಹಿತೈಷಿಗಳನ್ನು, ಸಂಗಾತಿಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ನಾಳೆ ದಿ. 18-8-2024ರಂದು ನಡೆಸಲಾಗುವುದು.ನಾಳೆಯವರೆಗೆ ಬೆಂಗಳೂರಿನ ಅವರ ಮನೆಯಲ್ಲಿ ಅವರ ಅಂತಿಮ ದರ್ಶನ ಪಡೆಯಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News