ಅಧಿಕ ಬೆಲೆಗೆ ಮಾಸ್ಕ್-ಸ್ಯಾನಿಟೈಸರ್ ಮಾರಾಟ : 1,82,000 ರೂ.ದಂಡ ವಸೂಲಿ

ಪಡಿತದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುವ ವೇಳೆಯಲ್ಲಿ ಒಟ್ಟು 299 ನ್ಯಾಯಬೆಲೆ ಅಂಗಡಿಗಳ ಮೇಲೆ ತಪಾಸಣೆ ನಡೆಸಿ ತೂಕದಲ್ಲಿ ಕಡಿಮೆ ಪಡಿತರವನ್ನು ವಿತರಣೆ ಮಾಡಿದ 14 ನ್ಯಾಯಬೆಲೆ ಅಂಗಡಿಗಳ ಮೇಲೆ ಮೊಕದ್ದಮ್ಮೆ ಹೂಡಿ 58,000 ರೂ.ಗಳ ದಂಡ ವಸೂಲಿ ಮಾಡಲಾಗಿದೆ.

Last Updated : Apr 25, 2020, 11:40 AM IST
ಅಧಿಕ ಬೆಲೆಗೆ ಮಾಸ್ಕ್-ಸ್ಯಾನಿಟೈಸರ್ ಮಾರಾಟ : 1,82,000 ರೂ.ದಂಡ ವಸೂಲಿ title=

ಮೈಸೂರು:  ಕರೋನಾವೈರಸ್ ಕೋವಿಡ್-19 (Covid-19) ತಡೆಗಟ್ಟುವ ಹಿನ್ನಲೆಯಲ್ಲಿ ದೇಶದದ್ಯಾಂತ ಲಾಕ್​ಡೌನ್ (Lockdown) ಇರುವ ಸಂಬಂಧ ಮೈಸೂರು ಕಾನೂನೂ ಮಾಪನಶಾಸ್ತ್ರ ಇಲಾಖೆಯು ಜಿಲ್ಲಾದ್ಯಂತ ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್ (Mask) ಮತ್ತು ಸ್ಯಾನಿಟೈಸರ್‍ (Sanitizer) ಗಳನ್ನು ನಿಗಧಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ 330 ಸ್ಟೋರ್‍ಗಳನ್ನು ತಪಾಸಣೆ ಮಾಡಿ, ಆಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಒಟ್ಟು 34 ಮೆಡಿಕಲ್ ಸ್ಟೋರ್‍ಗಳ ಮೇಲೆ ಕಾನೂನು ಮೊಕದಮ್ಮೆ ಹೊಡಿ 1,82,000 ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರಾದ ಕೆ.ಎಂ.ಮಹದೇವಸ್ವಾಮಿ ತಿಳಿಸಿದ್ದಾರೆ.

ಗಾಳಿಯಿಂದಲೂ ಬರಬಹುದು ಕರೋನಾ ವೈರಸ್: ಸಂಶೋಧನೆ

ಪಡಿತದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುವ ವೇಳೆಯಲ್ಲಿ ಒಟ್ಟು 299 ನ್ಯಾಯಬೆಲೆ ಅಂಗಡಿಗಳ ಮೇಲೆ ತಪಾಸಣೆ ನಡೆಸಿ ತೂಕದಲ್ಲಿ ಕಡಿಮೆ ಪಡಿತರವನ್ನು ವಿತರಣೆ ಮಾಡಿದ 14 ನ್ಯಾಯಬೆಲೆ ಅಂಗಡಿಗಳ ಮೇಲೆ ಮೊಕದ್ದಮ್ಮೆ ಹೂಡಿ 58,000 ರೂ.ಗಳ ದಂಡ ವಸೂಲಿ ಮಾಡಿ ಸದರಿಯವರ ಮೇಲಿನ ಸೂಕ್ತ ಕ್ರಮಕ್ಕಾಗಿ ಜಂಟಿ ನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗೆ ವರದಿಯನ್ನು ನೀಡಲಾಗಿದ್ದು, ಉಳಿದ ನ್ಯಾಯಬೆಲೆ ಅಂಗಡಿಗಳ ತಪಾಸಣೆ ನಡೆಸಿ 94 ನ್ಯಾಯಬೆಲೆ ಅಂಗಡಿಗಳ  ವಿರುದ್ದ ಮೊಕದ್ದಮೆ ದಾಖಲಾಸಿ 81,500 ರೂಗಳ ದಂಡವನ್ನು ವಿಧಿಸಲಾಗಿದೆ.

ಕಾರ್ಮಿಕರಿಗೆ ಗುಡ್ ನ್ಯೂಸ್: ಕೈಗಾರಿಕೆ ಪ್ರಾರಂಭಕ್ಕೆ ಲಾಕ್​ಡೌನ್‍ನಿಂದ ವಿನಾಯಿತಿ

ದಿನಸಿ ಪದಾರ್ಥ ಹಾಗೂ ಇತರೆ ದಿನನಿತ್ಯದ ವಸ್ತುಗಳನ್ನು ಪ್ರಾವಿಜನ್ ಸ್ಟೋರ್, ಮಾಲ್‍ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ 85 ಅಂಗಡಿಗಳ ತಪಾಸಣೆ ನಡೆಸಿ 7 ಅಂಗಡಿಗಳ ವಿರುದ್ದ ಮೊಕದ್ದಮೆ ದಾಖಲಿಸಿ 38,500 ರೂಪಾಯಿ ದಂಡವನ್ನು ವಿಧಿಸಲಾಗಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಕಡಿಮೆ ತೂಕ ವಿತರಣೆ ಮಾಡುತ್ತಿದ್ದರೆ ಮತ್ತು ಪೂಟ್ಟಣ ರೂಪದಲ್ಲಿರುವ ಯಾವುದೇ ಆಹಾರ ಪದಾರ್ಥಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿದರೆ ಕಾನೂನು ಮಾಪನಶಾಸ್ತ್ರ ನಿರೀಕ್ಷಕರಾದ ಜಿ.ಮಹಂತೇಶ್ 8884442580 ಅನ್ನು ಸಂಪರ್ಕಿಸಬಹುದು ಎಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News