ಬಾಗಲಕೋಟೆ ಚಿಮ್ಮಡದಲ್ಲಿ ಗಂಧದ ಮರ ಕದ್ದ ಖತರ್ನಾಕ್ ಕಳ್ಳರು..!

ಬೆಲೆಬಾಳುವ ಶ್ರೀಗಂಧದ ಮರವನ್ನ ಕಳ್ಳರ ತಂಡ ತಂಡ ರಾತ್ರೋ ರಾತ್ರಿ, ಕಟಾವು ಮಾಡಿ ಹೊತ್ತೊಕೊಂಡು ಹೀಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ನಡೆದಿದೆ.

Written by - Zee Kannada News Desk | Last Updated : Apr 28, 2022, 06:54 PM IST
  • ಚಿಮ್ಮಡ ಗ್ರಾಮದ ಧರೆಪ್ಪ ಉಳ್ಳಾಗಡ್ಡಿ ಎಂಬುವರ ತೋಟದಲ್ಲಿ ಕೆಲವು ದಿನಗಳ ಹಿಂದೆ ರಾತ್ರಿ ಈ ಘಟನೆ ನಡೆದಿದ್ದು,
  • ಯಾರೂ ಇಲ್ಲದ ಸಮಯದಲ್ಲಿ ಬೃಹತ್ ಗಾತ್ರದ ಶ್ರೀಗಂಧ ಮರವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಚಿಮ್ಮಡದಲ್ಲಿ ಗಂಧದ ಮರ ಕದ್ದ ಖತರ್ನಾಕ್ ಕಳ್ಳರು..! title=

ಬಾಗಲಕೋಟೆ: ಬೆಲೆಬಾಳುವ ಶ್ರೀಗಂಧದ ಮರವನ್ನ ಕಳ್ಳರ ತಂಡ ತಂಡ ರಾತ್ರೋ ರಾತ್ರಿ, ಕಟಾವು ಮಾಡಿ ಹೊತ್ತೊಕೊಂಡು ಹೀಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ : Diabetes Symptoms: ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಡಯಾಬಿಟಿಸ್‌ ಪರೀಕ್ಷೆ ಮಾಡಿಸಿಕೊಳ್ಳಿ!

ಚಿಮ್ಮಡ ಗ್ರಾಮದ ಧರೆಪ್ಪ ಉಳ್ಳಾಗಡ್ಡಿ ಎಂಬುವರ ತೋಟದಲ್ಲಿ ಕೆಲವು ದಿನಗಳ ಹಿಂದೆ ರಾತ್ರಿ ಈ ಘಟನೆ ನಡೆದಿದ್ದು, ಯಾರೂ ಇಲ್ಲದ ಸಮಯದಲ್ಲಿ ಬೃಹತ್ ಗಾತ್ರದ ಶ್ರೀಗಂಧ ಮರವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಸುಮಾರು 10 ವರ್ಷದ ಶ್ರೀಗಂಧದ ಮರ ಕಳವಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.ಇದೇ ಸಂದರ್ಭ ಕ್ರೈಂ ಪಿಎಸ್‌ಐ ಪುರಂದರ ಪೂಜಾರಿ, ಅರಣ್ಯಾಧಿಕಾರಿ ಮಲ್ಲೇಶ ನಾವಿ, ಲಕ್ಷ್ಮಣ ಪಾಟೀಲ ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ : ಆರೋಗ್ಯಕರವಾಗಿ ತೂಕ ತಿಳಿಸಲು ನಿಮ್ಮ ಬೆಳಗಿನ ಉಪಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ

ಈಚೆಗೆ ಗಂಧದ ಮರ ಸೇರಿದಂತೆ ಮನೆಗಳ್ಳತನ ಜಾಸ್ತಿ ನಡೆಯುತ್ತಿದ್ದು, ಕಳ್ಳತನ ಮಾಡುವ ಡಕಾಯಿತಿ ತಂಡವನ್ನು ತಕ್ಷಣವೇ ಪತ್ತೆ ಹೆಚ್ಚುವಂತೆ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News