ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿ ವೇತನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂಓದಿ-Weather Update: ಕರ್ನಾಟಕದ ಈ ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ.. ಗುಡುಗು ಮಿಂಚಿನ ಆರ್ಭಟ!
ಕೇಂದ್ರ ಸರ್ಕಾರ ಪೋಸ್ಟ್ ಮೆಟ್ರಿಕ್ ಸ್ಕಾಲರ್ ಶಿಪ್ ಹಣ ಬಿಡುಗಡೆಯಿಲ್ಲ.ಕೇಂದ್ರ,ರಾಜ್ಯದ ಪಾಲಿನಲ್ಲಿ ಸ್ಕಾಲರ್ ಶಿಪ್ ನೀಡಲಾಗುತ್ತದೆ. ೨೦೨೨/೨೩ ಸಾಲಿನಲ್ಲಿ ೫೦೪.೪೧ ಕೋಟಿ ಬಿಡುಗಡೆ ಆಗಿದ್ದು, ೨೦೨೩/೨೪ ರ ಹಣ ಇನ್ನೂ ಬಿಡುಗಡೆಯಾಗಿಲ್ಲ. ಕೇಂದ್ರ,ರಾಜ್ಯದ ಪಾಲು ೫೦೪.೪೧ ಕೋಟಿ ಆಗಿದೆ. ಈ ಪೈಕಿ ರಾಜ್ಯದ ಪಾಲು ೨೩೦,ಕೇಂದ್ರದ್ದು ೨೭೧ ಕೋಟಿ ಆಗಿದೆ.೨೩೦ ರಲ್ಲಿ ರಾಜ್ಯ ಸರ್ಕಾರದಿಂದ ೧೫೩ ಕೋಟಿ ರಿಲೀಸ್ ಆಗಿದೆ.ಆದ್ರೆ ಕೇಂದ್ರದಿಂದ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ ಎಂದು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.
ಇದನ್ನೂಓದಿ-ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ: ಜೆಡಿಎಸ್
ಕೇಂದ್ರ ರಾಜ್ಯ ಖಾತೆ ಸಚಿವ ಎ ನಾರಾಯಣಸ್ವಾಮಿ ಇಂದು ಈ ಕುರಿತು ವಿಧಾನಸೌಧದಲ್ಲಿ ಮಾತನ್ನಾಡಿ ಸುಮಾರು ೪೫,೭೧೯ ಅರ್ಜಿಗಳು ಸಲ್ಲಿಕೆಯಾಗಿವೆ, ಈಗ ಅರ್ಜಿಗಳನ್ನು ಪರಿಶೀಲಿಸಿ ಹಣ ಬಿಡುಗಡೆ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಕರ್ನಾಟಕ ರಾಜ್ಯದ ಎಸ್ ಇ ಪಿ ಟಿಎಸ್ ಪಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಹಮ್ಮಿಕೊಳ್ಳಲಾಗಿತ್ತು,ಸ್ಕಾಲರ್ ಶಿಪ್ ಗಳ ಬಗ್ಗೆಯೂ ಗಂಭೀರ ಚರ್ಚೆ ಆಗಿದೆ.ಸ್ಕಾಲರ್ ಶಿಪ್ ಬಿಡುಗಡೆ ಕೂಡ ಆಗಿದೆ,ಆದರೂ ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿಗಳು ಹಾಕಿದ್ದ ಅರ್ಜಿ ಸ್ಕೃಟಿನಿ ತಡವಾಗ್ತಾ ಇದೆ.ಅದನ್ನ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ.ಕಡ್ಡಾಯವಾಗಿ ಜಾಗೃತಿ ಸಭೆ ಮಾಡಲು ತಿಳಿಸಲಾಗಿದೆ.ಇಲಾಖೆಯಿಂದ ಈಕ್ಟಿಟಿ ಶೇರ್ ಗಳನ್ನ ಎಸಿ ಹಾಗೂ ಎಸ್ ಟಿ ನಿಗಮಗಳಿಗೆ ಹಣ ನೀಡಲಾಗ್ತಿದೆ.ಕೆಲವು ರಾಜ್ಯಗಳು ಅದನ್ನು ತೆಗೆದುಕೊಂಡಿಲ್ಲ,ದೇಶದಲ್ಲಿ ಹಾಗೂ ರಾಜ್ಯದಲ್ಲಿ ದಲಿತರು ನಾಲ್ಕು ಐದು ಪರ್ಸೆಂಟ್ ಉದ್ದಿಮೆ ಪ್ರಾರಂಭ ಮಾಡ್ತಾರೋ ಅವ್ರಿಗೆ ಸಿಬಿಲ್ ಸ್ಕೋರ್ ನೋಡುವಂತಿಲ್ಲ ಅಂತ ಬ್ಯಾಂಕುಗಳಿಗೆ ತಿಳಿಸಲಾಗಿದೆ.ಯೋಜನೆಗಳನ್ನ ಬ್ಯಾಂಕ್ ಗಳ ಮುಂದೆ ಡಿಸ್ ಪ್ಲೇ ಮಾಡ್ತಾ ಇಲ್ಲ ಅದನ್ನು ಮಾಡಲು ತಿಳಿಸಲಾಗಿದೆ, ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.