ಮೈಸೂರು: ಮೈಸೂರಿಗೆ ಬರುವ ಪ್ರತಿ ಪ್ರಯಾಣಿಕರ ನೆನಪು ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ನಗರದ ವಿಮಾನ ನಿಲ್ದಾಣದಲ್ಲಿ ಆಕರ್ಷಕ ಸೆಲ್ಫಿ ಸ್ಟಾಟ್ ನಿರ್ಮಾಣ ಮಾಡಲಾಗುವುದು ಎಂದು ಮಂಡಕಳ್ಳಿ ವಿಮಾನ ನಿಲ್ದಾಣ (Mandakalli Airport) ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದ್ದಾರೆ.
ನಾನು ಹುಟ್ಟಿ ಬೆಳೆದ ಮೈಸೂರಿಗೆ ಭೇಟಿ ನೀಡುವವರ ಮನಸ್ಸಿನಲ್ಲಿ ಮರೆಯಲಾರದ ನೆನಪೊಂದು ಉಳಿಯುವಂತೆ ಮಾಡಬೇಕೆಂದು ಆಲೋಚಿಸಿದ ಮಹಿಳೆಯೊಬ್ಬರ ಚಿಂತನೆಯಿಂದಾಗಿ ಸೆಲ್ಪಿ ಸ್ಪಾಟ್ (Selfie Spot) ನಿರ್ಮಾಣವಾಗುತ್ತಿದೆ.
ಗೌರಿ-ಗಣೇಶ ಹಬ್ಬ: ಇಂದಿನಿಂದ 4 ದಿನ ಮೈಸೂರಿನ ಹೆಸರಾಂತ ಮಾರುಕಟ್ಟೆ ಬೇರೆಡೆ ಸ್ಥಳಾಂತರ
ಮೈಸೂರಲ್ಲಿ ಜನಿಸಿ ಅಮೆರಿಕದಲ್ಲಿ ನೆಲೆಸಿರುವ ಸೌಜನ್ಯ ಎಂಬುವರು ನಮ್ಮೂರಿಗೆ ಬರುವವರು ಮತ್ತೆ ಹಿಂತಿರುಗುವಾಗ ನೆನಪಿನಲ್ಲಿ ಉಳಿಯುವಂತೆ ಏನಾದರೂ ಮಾಡಬೇಕೆಂದು ಆಲೋಚಿಸಿ ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಆರ್. ಮಂಜುನಾಥ್ ಅವರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ನಿಲ್ದಾಣದಲ್ಲಿ ಸೆಲ್ಫಿ ಸ್ಪಾಟ್ ನಿರ್ಮಿಸುವ ವಿಷಯ ಪ್ರಸ್ತಾಪವಾಯಿತು.
ಪ್ರಪಂಚದಲ್ಲಿ ಅತೀ ವೇಗವಾಗಿ ಓಡುವ ಅಫ್ರಿಕನ್ ಚೀತಾ ಮೈಸೂರಿಗೆ ಆಗಮನ
ಅಂತೆಯೇ ನಿಲ್ದಾಣದ ಟರ್ಮಿನಲ್ ಬ್ಲಾಕ್ ಬಳಿ ಅಂಬಾರಿ ಆನೆಯನ್ನು ಹೋಲುವ ಆಂಗ್ಲ ಭಾಷೆಯ ಎಂ. ಅಕ್ಷರವನ್ನು ಹೋಲುವ ಸೆಲ್ಫಿ ಪಾಯಿಂಟ್ ಮಾಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಈಗಾಗಲೇ ಈ ಪ್ರತಿರೂಪದ ಕಲಾಕೃತಿಯನ್ನು ಸಿದ್ಧಗೊಳಿಸಲಾಗುತ್ತಿದೆ. ಸದ್ಯದಲ್ಲಿಯೆ ಸೆಲ್ಫಿ ಪಾಯಿಂಟ್ ಉದ್ಘಾಟನೆಗೊಳ್ಳಲಿದೆ. ಮೈಸೂರು (Mysore) ಎಂದೊಡನೆ ಕಲ್ಪನೆಗೆ ಮೂಡುವುದು ದಸರಾ ಜಂಬೂ ಸವಾರಿ. ಆನೆ ಮೇಲೆ ಸಾಗುವ ಅಂಬಾರಿಯು ಸಾಂಸ್ಕೃತಿಕ ನಗರಿಯ ಪ್ರಮುಖ ಸಂಕೇತವಾಗಿದೆ.
ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ
ವಿಮಾನ ನಿಲ್ದಾಣದ ಆವರಣದಲ್ಲಿ ಆಂಗ್ಲ ಭಾಷೆಯ ಎಂ ಅಕ್ಷರದ ಆಕಾರದಲ್ಲಿ ಆನೆ ಮೇಲಿನ ಅಂಬಾರಿಯ ಪ್ರತಿರೂಪವನ್ನು ಸ್ಥಾಪಿಸಿ ಆ ಜಾಗವನ್ನು ಆಕರ್ಷಕ ಸೆಲ್ಫಿ ಪಾಯಿಂಟ್ ಆಗಿ ಮಾಡಲು ಸಿದ್ಧತೆ ನಡೆದಿದೆ.
ವಿಶ್ವ ಪ್ರಸಿದ್ಧ ವಿಜಯದಶಮಿ ಮೆರವಣಿಗೆಯಲ್ಲಿ ಸಾಗುವ ಚಿನ್ನದ ಅಂಬಾರಿಯನ್ನು ಹೋಲುವ ಈ ಪ್ರತಿರೂಪದ ಸೆಲ್ಫಿ ತೆಗೆದುಕೊಂಡಲ್ಲಿ ಇಡೀ ನಿಲ್ದಾಣದ ಚಿತ್ರಣವೂ ಬರುತ್ತದೆ. 15 ಅಡಿ ಅಗಲ, 9 ಅಡಿ ಎತ್ತರದ ವರ್ಣ ರಂಜಿತ ರಿಪ್ಲಿಕಾವನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದ್ದಾರೆ.