ಸಿದ್ದರಾಮಯ್ಯ ಇಲ್ಲಿ ಸೈಲೆಂಟ್,ಅಲ್ಲಿ ವೈಲೆಂಟ್ : ಆರ್ ಅಶೋಕ್ ಲೇವಡಿ

ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಅವರು ಸಹ ಮಠಗಳಿಗೆ ಹೋಗುತ್ತಾರೆ.ಅಲ್ಲಿಯೇ ಮಠಾಧೀಶರನ್ನು ಪ್ರಶ್ನೆ ಮಾಡಬಹುದಿತ್ತು.ಇಲ್ಲಿ ಬಂದು ಮಠಾಧೀಶರ ಬಟ್ಟೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.

Written by - RACHAPPA SUTTUR | Edited by - Manjunath N | Last Updated : Mar 25, 2022, 09:13 PM IST
  • ಅವರದ್ದು "ಅಲ್ಲಿ ಸೈಲಂಟ್,ಇಲ್ಲಿ ವೈಲಂಟ್" ಸ್ವಭಾವ ಎಂದು ವ್ಯಂಗ್ಯವಾಡಿದರು.
  • ಮಠಾಧೀಶರ ವಸ್ತ್ರದ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರ ಅಭಿಪ್ರಾಯಕ್ಕೆ ಸಚಿವ ಅಶೋಕ್ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಇಲ್ಲಿ ಸೈಲೆಂಟ್,ಅಲ್ಲಿ ವೈಲೆಂಟ್ : ಆರ್ ಅಶೋಕ್ ಲೇವಡಿ title=
file photo

ಬೆಂಗಳೂರು : ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಅವರು ಸಹ ಮಠಗಳಿಗೆ ಹೋಗುತ್ತಾರೆ.ಅಲ್ಲಿಯೇ ಮಠಾಧೀಶರನ್ನು ಪ್ರಶ್ನೆ ಮಾಡಬಹುದಿತ್ತು.ಇಲ್ಲಿ ಬಂದು ಮಠಾಧೀಶರ ಬಟ್ಟೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.

ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರದ್ದು "ಅಲ್ಲಿ ಸೈಲಂಟ್,ಇಲ್ಲಿ ವೈಲೆಂಟ್" ಸ್ವಭಾವ ಎಂದು ವ್ಯಂಗ್ಯವಾಡಿದರು.ಮಠಾಧೀಶರ ವಸ್ತ್ರದ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರ ಅಭಿಪ್ರಾಯಕ್ಕೆ ಸಚಿವ ಅಶೋಕ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ-ಜೇಮ್ಸ್ ಸಿನಿಮಾ ಎತ್ತಂಗಡಿ ಮಾಡದಂತೆ ಪ್ರತಿಭಟನೆ - RRR ಪೋಸ್ಟರ್ ಕಿತ್ತುಹಾಕಿ ಕರವೇ ಆಕ್ರೋಶ

ಕಾಂಗ್ರೆಸ್ ಪೂರ್ಣ ಬೆಂಬಲದಿಂದಲೇ ಹಿಜಾಬ್ ಪ್ರಕರಣ ಇಷ್ಟು ಬೆಳೆದಿರುವುದು.ಕೋರ್ಟ್ ಆದೇಶದಿಂದ ಈಗ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ.ಅದಕ್ಕಾಗಿ ಸಮಾಜ ಸೇವೆ ಮಾಡುವ ಮಠಾಧೀಶರ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ನವರಿಗೆ ಸಂವಿಧಾನ ಬಗ್ಗೆ ನಂಬಿಕೆ ಇದ್ದರೆ ಮಕ್ಕಳಿಗೆ ತಿಳಿ ಹೇಳಬೇಕಿತ್ತು.ಹಿಜಾಬ್ ವಿರುದ್ದ ತೀರ್ಪು ಬಂದರೂ ಸಹ,ಮಕ್ಕಳು ಹಾಗೂ ಪೋಷಕರಿಗೆ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲ.ಇದಕ್ಕೆ ಕಾರಣ ಅಲ್ಪಸಂಖ್ಯಾತರ ಓಟು ತಪ್ಪುತ್ತದೆ ಎನ್ನುವ ಭಯ. ಧರ್ಮ ಮುಖ್ಯ,ಶಿಕ್ಷಣ ಮುಖ್ಯವಲ್ಲ ಎನ್ನುವ ಮಕ್ಕಳಿಗೆ ಬುದ್ದಿ ಹೇಳಬೇಕು.ಅವರ ಜೀವನವನ್ನು ಸರಿದಾರಿಗೆ ತರುವ ಕೆಲಸ ಆಗಬೇಕು. ಅವರದೇ ಪಕ್ಷದ ಶಾಸಕನ ಮನೆಗೆ ಬೆಂಕಿ ಇಟ್ಟಾಗಲೂ ಕಾಂಗ್ರೆಸ್ ಮುಖಂಡರು ಮಾತೇ ಆಡಲಿಲ್ಲ.ಈಗ ಸಾಮಾಜಿಕ ನ್ಯಾಯದ ಕುರಿತು ಮಾತನಾಡುತ್ತಾರೆ.ದೇಶ ಮುಖ್ಯ ಅನ್ನುವ ಮನಸ್ಥಿತಿ ಕಾಂಗ್ರೆಸ್ ನವರಿಗೆ ಇಲ್ಲ.

ಇದನ್ನೂ ಓದಿ : Siddaramaiah : ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ : ಸಿದ್ದರಾಮಯ್ಯ

ನಮಗೆ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಬೇಕಾದ ಅವಶ್ಯಕತೆ ಇಲ್ಲ.ಯಾರನ್ನೂ ಓಲೈಸುವ ಮಾತೇ ಇಲ್ಲ.ಅಭಿವೃದ್ಧಿ ಕಾರ್ಯ ಮುಂದಿಟ್ಟು ಕೊಂಡು ಚುನಾವಣೆಗೆ ಹೋಗುತ್ತೇವೆ.ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆದ್ದಿದ್ದು ಅಭಿವೃದ್ಧಿ ಕಾರ್ಯಗಳಿಂದ.ಧರ್ಮದ ರಾಜಕೀಯ ಮಾಡಿ ಅಲ್ಲ" ಎಂದು ಅಶೋಕ್ (R Ashok) ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News