Siddaramaiah: ʼಬಿಜೆಪಿ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪಕ್ಷʼ-ಮಾಜಿ ಸಿಎಂ ಸಿದ್ದರಾಮಯ್ಯ

Siddaramaiah​: ತಿ.ನರಸೀಪುರದಲ್ಲಿ ಸಂವಿಧಾನವನ್ನು ಕುರಿತು ಮಾತಾನಾಡಿದ ಸಿದ್ದರಾಮಯ್ಯ, ಸಂವಿಧಾನವನ್ನು ವಿರೋಧ ಮಾಡುವರೆಂದರೆ ಆರ್ ಎಸ್ಎಸ್ ಹಾಗೂ  ಹಿಂದೂ ಮಹಾಸಭಾದವರು ಮತ್ತು ಸನಾತನ ಧರ್ಮದ ಪೋಷಕರು.

Written by - Zee Kannada News Desk | Last Updated : Mar 6, 2023, 06:09 PM IST
  • ಬಿಜೆಪಿ ಬಿಟ್ಟುಕಾಂಗ್ರೆಸ್ ಸೇರಿದ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಗತ
  • ಮೇಲು ಕೀಳು ಬೇಧಭಾವ ಬೇಡ ಎಂದೇ ಬಸವಣ್ಣ ಅನುಭವ ಮಂಟಪ ಸ್ಥಾಪನೆ
  • ಎಸ್ ಇ ಪಿ ಮತ್ತು ಟಿ ಎಸ್ ಪಿ ಅನುದಾನವನ್ನು ಕಡಿತ
Siddaramaiah: ʼಬಿಜೆಪಿ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪಕ್ಷʼ-ಮಾಜಿ ಸಿಎಂ ಸಿದ್ದರಾಮಯ್ಯ title=

ಮೈಸೂರು: ತಿ.ನರಸೀಪುರದಲ್ಲಿ ಸಂವಿಧಾನವನ್ನು ಕುರಿತು ಮಾತಾನಾಡಿದ ಸಿದ್ದರಾಮಯ್ಯ, ಸಂವಿಧಾನವನ್ನು ವಿರೋಧ ಮಾಡುವರೆಂದರೆ ಆರ್ ಎಸ್ಎಸ್ ಮತ್ತು ಹಿಂದೂ ಮಹಾಸಭಾದವರು,ಸನಾತನ ಧರ್ಮದ ಪೋಷಕರು.ಅಂಬೇಡ್ಕರ್ ಹಿಂದೂ ಧರ್ಮವನ್ನು ಯಾಕೆ ಬಿಟ್ರು ಗೊತ್ತಿದೇಯಾ  ಹಿಂದೂ ಆಗಿ ಹುಟ್ಟಿದ ಅವರು ಸುಧಾರಣೆ ತರುವಲ್ಲಿ ವಿಫಲರಾದರು ಹಾಗಾಗಿ ಬೌದ್ಧ ಧರ್ಮ ಸ್ವೀಕರಿಸಿದರು.ಅವರಿಗೆ ಮನಸ್ಮೃತಿ ಆಧಾರದ ಸಂವಿಧಾನ ಬಯಸಿದವರೆಂದು ಹೇಳಿದರು. 

ಯಾವ ಧರ್ಮದಲ್ಲಿ ಮನುಷ್ಯ ಮನುಷ್ಯನನ್ನ ವಿರೋಧ ಮಾಡು ಅಂತ ಹೇಳುತ್ತೆ ಆದ್ದರಿಂದ ಮೇಲು ಕೀಳು ಬೇಧಭಾವ ಬೇಡ ಎಂದೇ ಎಲ್ಲಾ ಸಮಾನರು ಅಂತಾನೆ ಬಸವಣ್ಣ ಅನುಭವ ಮಂಟಪ ಮಾಡಿದರು. ಸಿ ಟಿ ರವಿ ಸಿದ್ದರಾಮುಲ್ಲ ಖಾನ್ ಎಂದು ಕರಿತ್ತಾನೆ ಅವರ ಭಾಷಣ ಕೇಳಿ ಚಪ್ಪಾಳೆ ತಟ್ಟುವ ನಾವು ಶೂದ್ರರು ನಾನು ಬದುಕಿರುವವರೆಗೆ ಆರ್ ಎಸ್ಎಸ್ ವಿರೋಧ ಮಾಡುತ್ತೇನೆಂದು  ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. 

ಇದನ್ನೂ ಓದಿ: 15 ವರ್ಷದ ಕೆಳಗಿನ ಮಕ್ಕಳಿಗೆ H3N2 ಅಪಾಯ ಹೆಚ್ಚು ! ಸರ್ಕಾರದಿಂದ ಮಾರ್ಗ ಸೂಚಿ ಜಾರಿ

ಎಸ್ ಇ ಪಿ ಮತ್ತು  ಟಿ ಎಸ್ ಪಿ ಅನುದಾನವನ್ನು ಬಜೆಟ್ ನಲ್ಲಿ ಕಡಿಮೆ ಮಾಡಿದ್ದಾರಲ್ಲ ಯಾರಾದರು ಕೇಳಿದ್ದೀರಾ.? ಗೋವಿಂದ ಕಾರಾಜೋಳ, ಶ್ರೀನಿವಾಸ್ ಪ್ರಸಾದ್ ಅಳಿಯ ಶಾಸಕ ಇದರ ಬಗ್ಗೆ  ಕೇಳಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪಕ್ಷ  ಬಿಟ್ಟು ಕಾಂಗ್ರೆಸ್ ಸೇರಿದ ಶಾಸಕರಿಗೆ  ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ: Janardhana Reddy: ನಾವು 30 ಕ್ಷೇತ್ರಗಳಲ್ಲಿ ಗೆಲುತ್ತೇವೆ : ಜನಾರ್ದನ ರೆಡ್ಡಿ

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News