ಬೆಂಗಳೂರು: ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಲಾಪಕ್ಕೆ ಬಿಡಿಎ ವತಿಯಿಂದ ಪ್ರತ್ಯೇಕ ನಿವೇಶನ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಿವುಡರ ದಿನಾಚರಣೆಯಲ್ಲಿ ಪಾಲ್ಗೊಂಡು ಡಾ.ಜಿ. ಪರಮೇಶ್ವರ್ ಮಾತನಾಡಿದರು.
ಹುಟ್ಟಿನಿಂದಲೇ ಬರುವ ಅಂಗ ವೈಫಲ್ಯಕ್ಕೆ ಯಾರೂ ಹೊಣೆಯಲ್ಲ. ಆದರೆ ವಿಶಿಷ್ಟ ಚೇತನರೊಂದಿಗೆ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು ನಮ್ಮ ಜವಾಬ್ದಾರಿ ಎಂದು ಪರಮೇಶ್ವರ್ ಹೇಳಿದರು.
ಹುಟ್ಟಿನಿಂದಲೇ ಬರುವ ಅಂಗ ವೈಫಲ್ಯಕ್ಕೆ ಯಾರೂ ಹೊಣೆಯಲ್ಲ.
ಆದರೆ ವಿಶಿಷ್ಟ ಚೇತನರೊಂದಿಗೆ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು ನಮ್ಮ ಜವಾಬ್ದಾರಿ.
ವಿಶ್ವ ಕಿವುಡ ದಿನಾಚರಣೆ ಅಂಗವಾಗಿ ಇಂದು ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘ ನಡೆಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಅವರೆಲ್ಲಾ ಬೇಡಿಕೆಗಳನ್ನು ಈಡೇರಿಸಲಿದ್ದೇನೆ. pic.twitter.com/ywIy9TH8s0— Dr. G Parameshwara (@DrParameshwara) September 28, 2018
ಶ್ರವಣ ದೋಷ ಹೊಂದಿರುವವರಿಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳಲು ತೊಂದರೆಯಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ವತಿಯಿಂದ ಸುಸಜ್ಜಿತ ಶ್ರವಣ ಮಾಪನ ಕೊಡಿಸುವ ಕೆಲಸ ಮಾಡಲಾಗುವುದು. ಇವರು ಸ್ವ ಉದ್ಯೋಗ ಮಾಡಲು ಹಣಕಾಸು ಇಲಾಖೆಗೆ ಈ ಪ್ರಸ್ತಾವ ಕಳುಹಿಸಿಕೊಡಲಿದ್ದೇನೆ. ಜತೆಗೆ, ಕ್ರೀಡಾ ಇಲಾಖೆಯಿಂದ ಸಹಾಯಧನವನ್ನು ತಕ್ಷಣವೇ ಬಿಡುಗಡೆ ಮಾಡಲಿದ್ದೇನೆ ಎಂದರು. ಜೊತೆಗೆ ಇತರೆ ಬೇಡಿಕೆಗಳನ್ನು ಸಹ ಈಡೇರಿಸಲಿದ್ದೇನೆ ಎಂದು ಅವರು ಭರವಸೆ ನೀಡಿದರು.