ಬೆಂಗಳೂರು: ಕರ್ನಾಟಕದಲ್ಲಿ ಕಮಲ ಅರಳಲು ಮೂಲ ಕಾರಣವಾಗಿದ್ದ ಗಣಿದಣಿ ಜನಾರ್ದನ ರೆಡ್ಡಿ ಇದಿಗ ಹೊಸ ಪಕ್ಷ ಕಟ್ಟಿದ್ದಾರೆ. ಜೈಲಿನ ಸೆರೆವಾಸ, ಹಿಂದೆ ನಿಂತು ಮಾತನಾಡಿದ್ದ ಪ್ರತಿಪಕ್ಷಗಳ ನಾಯಕರನ್ನೆಲ್ಲ ನೆನೆದಲ್ಲದೆ ಬೆನ್ನ ಹಿಂದೆ ಚೂರಿ ಹಾಕಿದವರನ್ನೆಲ್ಲ ಮನದಲ್ಲಿಟ್ಟಿದ್ದೇನೆ ಅನ್ನೋ ಸೂಚನೆ ಹೊರಗಾಕ್ಕಿದ್ದಾರೆ. ಆಡಳಿತ ಪಕ್ಷ ಸೇರಿ ಎಲ್ಲರಿಗೂ ಕೊಂಕ ಕಟ್ಟಿ ನಿಂತು ನೂತಕ ಪಕ್ಷದೊಂದಿಗೆ ರಾಜ್ಯ ಪ್ರವಾಸಕ್ಕೆ ಇಳಿಯಲಿದ್ದಾರೆ.
ಹೌದು.. ಬಿಜೆಪಿಗೆ ಸೆಡ್ಡು ಹೊಡೆದ ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ತನ್ನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಬಸವಣ್ಣ ಹಾದಿಯಲ್ಲಿ ನಡೆಯಲು ಸಂಕಲ್ಪ ಮಾಡಿದ್ದೇನೆ ಎನ್ನುವ ಮೂಲಕ ಪ್ರಾರಂಭಿಸಿದ ಅವರು. ಜಾತಿ, ಮತ, ಬೇಧ, ಭಾವ ಇಲ್ಲದೇ ಮೇಲು ಕೇಳು ಇಲ್ಲದ ಹಾಗೆ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ. ಬಸವಣ್ಣನವರ ಸ್ಮರಣೆ ಮಾಡುತ್ತಾ ಸಾರ್ವಜನಿಕ ಬದುಕಿಗೆ ಬರುತ್ತಿದ್ದೇನೆ. ಬಿಜೆಪಿ ಜೊತೆ ಸಂಪೂರ್ಣವಾಗಿ ಬಾಂಧವ್ಯವನ್ನು ಕಡಿದುಕೊಳ್ಳುತ್ತಿದ್ದೇನೆ. ಈ ಕಾರಣಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನಿರ್ಮಾಣ ಮಾಡ್ತಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: Mahesh Babu : ತಂದೆ-ತಾಯಿಯ ಸಾವಿಗೆ ʼಮಹೇಶ್ ಬಾಬುʼ ಜಾತಕ ದೋಷ ಕಾರಣ..!
ಕಷ್ಟದಲ್ಲಿದ್ದಾಗ BSY, ಶಟ್ರು ಬಿಟ್ರೆ ನನ್ನ ಕೈ ಯಾರು ಹಿಡಿಯಲಿಲ್ಲ;
ನನ್ನ ಹೆಲಿಕ್ಯಾಪ್ಟರ್ ಕೂಡ ಅನಾಥವಾಗಿರಲಿಲ್ಲ;
ಅಕ್ರಮ ಗಣಿಗಾರಿಕೆ ಆರೋಪದಡಿ ನಾನು ಜೈಲಿಗೋದಾಗ, ನನ್ನ ಕುಟುಂಬ ಅನಾಥವಾಗಿದ್ದಾಗ ಯಡಿಯೂರಪ್ಪ, ಜಗದೀಶ್ ಶೆಟ್ಟರು ಬಿಟ್ರೆ ಇನ್ಯಾರು ನನ್ನ ಕೈ ಹಿಡಿಯಲಿಲ್ಲ ಎಂದು ರೆಡ್ಡಿ ಅಸಮಧಾನ ಹೊರಹಾಕಿದ್ರು. ಬಿ.ಎಸ್ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಇಬ್ಬರು ಬಂದು ನನಗೆ ಧೈರ್ಯ ತುಂಬಿದ್ದರು. ಅದಕ್ಕಾಗಿ ನಾನು ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಆದರೆ ನನ್ನವರೇ ಅಂತ ನಾನು ಎಲ್ಲರನ್ನು ಮೆರೆಸಿ ಮೋಸ ಹೋದೆ. ಇದನ್ನ ನನ್ನ ಸ್ನೇಹಿತರು ಈಗಲೂ ಹೇಳ್ತಾರೆ. ನನ್ನ ಜೊತೆ ಕಷ್ಟದಲ್ಲಿ ಯಾರು ಬಂದಿಲ್ಲ. ನಾನು ಚೆನ್ನಾಗಿ ಇದ್ದಾಗ ಎಲ್ಲರೂ ನನ್ನನ್ನು ಹೊಗಳಿದರು. ಆದರೆ ಕಷ್ಟದಲ್ಲಿ ಇದ್ದಾಗ ಯಾರು ಬಂದಿಲ್ಲ ಎಂದು ಕಿಡಿಕಾರಿದರು. ಜೊತೆಗೆ ನಾನು ಇಲ್ಲದಿದ್ದಾಗ ನನ್ನ ಹೆಲಿಕ್ಯಾಪ್ಟರ್ ಕೂಡ ಅನಾಥವಾಗಿರಲಿಲ್ಲ ಎಂದು ಟೀಕಾಕಾರರಿಗೆ ಉತ್ತರಿಸಿದರು.
ಗಂಗಾವತಿ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ;
ಮುಂದುವರೆದಭಾಗವಾಗಿ ನನ್ನ ಜೊತೆ ತನ್ನ ಆಪ್ತ ಗೆಳೆಯ ಶ್ರೀರಾಮುಲು ಅವರಿಗೆ ಬರುವಂತೆ ಹೇಳಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಮುಂದಿನ ದಿನಗಳಲ್ಲಿ ನನ್ನ ಪತ್ನಿ ಅರುಣಾ ಲಕ್ಷ್ಮಿ ಅವರು ಸಹ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ಮುನ್ನಡೆಯುವೆ. ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ ಎಂದರು. ಹೊಸ ಪಕ್ಷವನ್ನು ಘೋಷಿಸಿದ ಬೆನ್ನಲ್ಲೆ ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸುವುದನ್ನು ಖಚಿತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಬಿಜೆಪಿ ಬುಡಕ್ಕೆ ಬೆಂಕಿ ಇಟ್ಟಿದ್ದಾರೆ.
ಇದನ್ನೂ ಓದಿ: ಕ್ರಿಸ್ಮಸ್ ಸಂಭ್ರಮದಲ್ಲಿ ಚರ್ಚ್‌ಗೆ ತೆರಳುತ್ತಿದ್ದ ಯುವಕ ಮಸಣಕ್ಕೆ..!
ಒಟ್ಟಾರೆ... ರಾಜ್ಯ ಬಿಜೆಪಿಗೆ ಇದೀಗ ಸಂಕಷ್ಟ ಎದುರಾಗಿದೆ. ರಾಜಕೀಯ ವಲಯದಿಂದ ಕಣ್ಮರೆಯಾಗಿದ್ದ ಬಿಜೆಪಿಯ ಮಾಜಿ ಸಚಿವ ಜನಾರ್ದನರೆಡ್ಡಿ ಈಗ ಮತ್ತೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ನೂತನ ಪಕ್ಷದ ಕೆಲಸ ಸದ್ಯದಲ್ಲೇ ಶುರುಮಾಡಲಿದ್ದಾರೆ. ಈ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಮೂಲಕ ರಾಜಕೀಯದ ಚದುರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.