'ಸ್ವಾಮೀಜಿಗಳ ವಿವರವನ್ನು ಒಂದೇ ವಾಕ್ಯಕ್ಕೆ ಸೀಮಿತ ಗೊಳಿಸಿರುವುದು,ಇಡೀ ಕನ್ನಡ ನಾಡಿಗೆ ಬಗೆದ ದ್ರೋಹ'

ಕನ್ನಡ ನಾಡಿನಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ, ಸೇವಾ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕ್ರಾಂತಿಯನ್ನು ಮಾಡಿದ, ಮಠ-ಮಾನ್ಯಗಳು, ಸಂತ ಶ್ರೇಷ್ಠರು, ಸ್ವಾಮೀಜಿಗಳ ವಿವರಗಳನ್ನು ಶಾಲಾ ಪಠ್ಯ‌ ಪುಸ್ತಕಗಳಿಂದ ತೆಗೆದುಹಾಕಿ ಕೇವಲ ಒಂದೇ ವಾಕ್ಯಕ್ಕೆ ಸೀಮಿತ ಗೊಳಿಸಿರುವುದು ಕರ್ನಾಟಕದ ಸರ್ವ ಸಮಾಜಕ್ಕೂ ಮಾಡಿರುವ ಅವಮಾನ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದೆ.

Written by - Zee Kannada News Desk | Last Updated : Jun 9, 2022, 12:40 AM IST
  • ಆರೋಗ್ಯ,ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತುಕೊಟ್ಟು ನಾಡಿಗೆ ತನ್ನದೇ ರೀತಿಯಲ್ಲಿ ಸೇವೆಗೈದ ಬಾಲಗಂಗಾಧರನಾಥ ಶ್ರೀಗಳು ಮತ್ತು ಶಿವಕುಮಾರ ಸ್ವಾಮಿಗಳ ವಿವರಣೆಯನ್ನು ಕಡಿತಗೊಳಿಸಿ ಒಂದೇ ಸಾಲಿಗೆ ಸೀಮಿತಗೊಳಿಸಿರುವುದು ಅಕ್ಷಮ್ಯ
'ಸ್ವಾಮೀಜಿಗಳ ವಿವರವನ್ನು ಒಂದೇ ವಾಕ್ಯಕ್ಕೆ ಸೀಮಿತ ಗೊಳಿಸಿರುವುದು,ಇಡೀ ಕನ್ನಡ ನಾಡಿಗೆ ಬಗೆದ ದ್ರೋಹ' title=

ಬೆಂಗಳೂರು: ಕನ್ನಡ ನಾಡಿನಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ, ಸೇವಾ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕ್ರಾಂತಿಯನ್ನು ಮಾಡಿದ, ಮಠ-ಮಾನ್ಯಗಳು, ಸಂತ ಶ್ರೇಷ್ಠರು, ಸ್ವಾಮೀಜಿಗಳ ವಿವರಗಳನ್ನು ಶಾಲಾ ಪಠ್ಯ‌ ಪುಸ್ತಕಗಳಿಂದ ತೆಗೆದುಹಾಕಿ ಕೇವಲ ಒಂದೇ ವಾಕ್ಯಕ್ಕೆ ಸೀಮಿತ ಗೊಳಿಸಿರುವುದು ಕರ್ನಾಟಕದ ಸರ್ವ ಸಮಾಜಕ್ಕೂ ಮಾಡಿರುವ ಅವಮಾನ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದೆ.

ಜನಮಾನಸದಲ್ಲಿ ನಡೆದಾಡುವ ದೇವರುಗಳು ಎಂದೇ ಹೆಸರಾದ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು, ಆದಿಚುಂಚನಗಿರಿಯ ಬಾಲಗಂಗಾಧರನಾಥ ಶ್ರೀಗಳು, ಸಿರಿಗೆರೆಯ ಶ್ರೀಗಳು ಹಾಗೂ ಮುರುಘ ರಾಜೇಂದ್ರ ಶ್ರೀಗಳ ಬಗೆಗಿನ ವಿವರಣೆ ಕಡಿತ ಮಾಡಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕೃತ್ಯ ಹಾಗೂ ಅದನ್ನು ಬೆಂಬಲಿಸುತ್ತಿರುವ ಬಿಜೆಪಿ ಸರ್ಕಾರದ ನಡೆ ಅಕ್ಷಮ್ಯ ಎಂದು ಟೀಕಿಸಿದೆ.

ಇದನ್ನೂ ಓದಿ: Viral Video: ರಣವೀರ್ ಸಿಂಗ್ ಕಾಲು ಹಿಡಿದ ರಾಖಿ ಸಾವಂತ್ ಮಾಡಿದ್ದೇನು..?

ಆರೋಗ್ಯ,ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತುಕೊಟ್ಟು ನಾಡಿಗೆ ತನ್ನದೇ ರೀತಿಯಲ್ಲಿ ಸೇವೆಗೈದ ಬಾಲಗಂಗಾಧರನಾಥ ಶ್ರೀಗಳು ಮತ್ತು ಶಿವಕುಮಾರ ಸ್ವಾಮಿಗಳ ವಿವರಣೆಯನ್ನು ಕಡಿತಗೊಳಿಸಿ ಒಂದೇ ಸಾಲಿಗೆ ಸೀಮಿತಗೊಳಿಸಿರುವುದು ಅಕ್ಷಮ್ಯ. ಇದು ಬಿಜೆಪಿ ಈ ನಾಡಿನ ಮಠಗಳಿಗೆ ಅಥವಾ ಮಠಾಧೀಶರಿಗೆ ಮಾಡಿದ ಅವಮಾನವಲ್ಲ, ಇಡೀ ಕನ್ನಡ ನಾಡಿಗೆ ಬಗೆದ ದ್ರೋಹ.

ಭಕ್ತಿಪಂಥದ ಮೂಲಕ ಕೇವಲ ಪೂಜೆಗೈಯ್ಯುವುದಷ್ಟೇ ಅಲ್ಲ ನಾಡಿನ ಜನರ ಬಾಳನ್ನೂ ಕೂಡ ಹಸನುಗೊಳಿಸಬಹುದು ಎಂದು ಪ್ರತ್ಯಕ್ಷವಾಗಿ ತೋರಿಸಿದ ನಡೆದಾಡುವ ದೇವರು ಶಿವಕುಮಾರ ಸ್ವಾಮಿಗಳು, ಬಾಲಗಂಗಾಧರ ಶ್ರೀಗಳು ಮುಂತಾದ ಮಹನೀಯರ ಬಗ್ಗೆ ತಿಳಿದುಕೊಳ್ಳದೆ ಈ ನಾಡಿನ ಮಕ್ಕಳು ಮತ್ಯಾರ ಬಗ್ಗೆ ತಿಳಿದುಕೊಳ್ಳಬೇಕು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ : Suspected terrorist arrested: ಯುವಕರ ಬ್ರೈನ್​ ವಾಶ್ ಮಾಡುತ್ತಿದ್ದ ತಾಲೀಬ್​ ಹುಸೇನ್!?

ಬಾಲಗಂಗಾಧರ ಶ್ರೀಗಳಾಗಲಿ ಅಥವಾ ಶಿವಕುಮಾರ ಸ್ವಾಮೀಜಿಗಳಾಗಲಿ ಅವರ ಬದುಕೇ ಸ್ಫೂರ್ತಿಯ ಚಿಲುಮೆ ಇದ್ದಂತೆ. ಅವರನ್ನು ಓದಿದವರು ಅವರ ರೀತಿಯೇ ಸಮಾಜದಲ್ಲಿ ಕಾಯಕ ಯೋಗಿಗಳಾಗಿ ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವ ಸಂಕಲ್ಪ ಹೊತ್ತುಕೊಳ್ಳುತ್ತಾರೆ. ಮಕ್ಕಳು ಸಮಾಜದ ಆಸ್ತಿಗಳಾಗಿ ರೂಪುಗೊಳ್ಳುತ್ತಾರೆ.

ಅಂಥಹ ಸಮಾಜಪ್ರೇರಕ ಶಕ್ತಿಗಳ ಬಗ್ಗೆ ಹೆಚ್ಚೆಚ್ಚು ತಿಳಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರಬೇಕೆ ಹೊರತು ಅದನ್ನು ಮರೆಮಾಚುವುದಲ್ಲ. ಹಾಗೇನಾದರೂ ಅವರ ಸಾಧನೆಗಳನ್ನು ಈ ನಾಡಿಗೆ ನೀಡಿದ ಕೊಡುಗೆಗಳನ್ನು ಮಕ್ಕಳ ಮನಸ್ಸಿನಿಂದ ಮರೆಮಾಚಿದ್ದೇ ಆದರೆ ಅದು ನಾವು ಈ ನಾಡಿಗೆ ಬಗೆವ ಪರಮದ್ರೋಹ ಎಂದು ಟೀಕಾಪ್ರಹಾರ ನಡೆಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News