ದೆಹಲಿಯಲ್ಲಿ ಟಿಕೇಟ್ ಹಂಚಿಕೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ

ಚುನಾವಣಾ ಸಿದ್ದತೆ ಬಗ್ಗೆ ಹಿರಿಯ ನಾಯಕರೊಂದಿಗೆ ನೇತೃತ್ವದಲ್ಲಿ ಚರ್ಚೆ ನಡೆಸಿದ್ದೇವೆ- ಸಿದ್ದರಾಮಯ್ಯ.

Last Updated : Oct 13, 2017, 10:58 AM IST
ದೆಹಲಿಯಲ್ಲಿ ಟಿಕೇಟ್ ಹಂಚಿಕೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ title=

ನವದೆಹಲಿ:  ರಾಹುಲ್ ಗಾಂಧಿ ಜೊತೆಗಿನ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಸಿದ್ದತೆ ಬಗ್ಗೆ ಹಿರಿಯ ನಾಯಕರೊಂದಿಗೆ ನೇತೃತ್ವದಲ್ಲಿ ಚರ್ಚೆ ನಡೆಸಿದ್ದೇವೆ. ಈ ಬಾರಿ ಟಿಕೇಟ್ ಹಂಚಿಕೆಯನ್ನು ಮುಂಚಿತವಾಗಿ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ ಮೇಲೆ ಟಿಕೇಟ್ ಹಂಚಿಕೆ ಮಾಡಲಾಗುವುದು ಎಂದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣಾ ಸಿದ್ದತೆ ಬಗ್ಗೆ ಹಿರಿಯ ನಾಯಕರೊಂದಿಗೆ ನೇತೃತ್ವದಲ್ಲಿ ಚರ್ಚೆ ನಡೆಸಿದ್ದೇವೆ. ಈಗಾಗಲೇ 54000 ಬೂತ್ ಕಮಿಟಿಗಳನ್ನು ಮಾಡಲಾಗಿದೆ. ಒಂದೂವರೆ ಕೋಟಿ ಪುಸ್ತಕಗಳನ್ನು ಮುದ್ರಣ ಮಾಡಲಾಗಿದೆ. ಸರ್ಕಾರದ ಸಾಧನೆಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಬೂತ್ ಗಳಲ್ಲಿ ಪುಸ್ತಕಗಳನ್ನು ಕಾರ್ಯಕರ್ತರು ಹಂಚಿಕೆ ಮಾಡಲಿದ್ದಾರೆ. ರಾಜ್ಯದ್ಯಾಂತ ಡಿಸೆಂಬರ್ ನಿಂದ ಜನವರಿವರೆಗೆ ಪ್ರವಾಸ ಮಾಡಲಿದ್ದೇನೆ ಎಂದು ಹೇಳಿದರು.

ನಂತರ ಮಹಾದಾಯಿ ನದಿ ವಿವಾದದ ಬಗ್ಗೆ ಪ್ರಸ್ತಾಪಿಸಿದ ಅವರು, 'ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದು ಸಾಕಾಗಿದೆ. ಮಾತುಕತೆಗೆ ಅವರು ಒಪ್ಪುತ್ತಿಲ್ಲ. ರಾಜ್ಯದ ಬಿಜೆಪಿ ನಾಯಕರು ಪರಿಕ್ಕರ್ ಅವರನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಿಲ್ಲ' ಎಂದು ಹೇಳಿದರು.

ನಾನು ಗೋವಾಗೆ ಹೋಗಿ ಮಾತುಕತೆ ನಡೆಸಲು ಸಿದ್ದ. ಅಥವಾ ಅವರೇ ಕರ್ನಾಟಕಕ್ಕೆ ಬರಲಿ.‌ ಹಿಂದೆ ಇದೇ ವಿಷಯವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಪ್ರಧಾನಿ ಬಳಿ ಕರೆದುಕೊಂಡು ಹೋಗಿದ್ದೆ. ಅಲ್ಲಿ ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕರೂ ಮಾತನಾಡಲಿಲ್ಲ ಎಂದರು.

ನಂತರ ತಮ್ಮ ಕಾಂಗ್ರೇಸ್ ನಾಯಕರ ವಿರುದ್ಧ, ರಾಜ್ಯ ಬಿಜೆಪಿ ನಾಯಕರು ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರ ಮಾತನ್ನು ಯಾರು ಕೂಡ ಕೇಳುವುದಿಲ್ಲ. ಬಿಜೆಪಿಯವರೇ ಭ್ಟಷ್ಟರು. ಅವರು ಮಾತನಾಡಿದರೆ ಭೂತದ ಬಾಯಲ್ಲಿ ಭಗವದ್ಗೀತ ಹೇಳಿದಂತೆ. ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದವರು ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಈ ರೀತಿ ಸುಳ್ಳು ಹೇಳಿದರೆ ಜನರು ನಂಬುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾನು ಕೂಡ ವಿರೋಧಪಕ್ಷದ ನಾಯಕನಾಗಿದ್ದೆ, ಎಂದು ಕೂಡ‌ ಇವರಂತೆ ಆಧಾರರಹಿತ ಆರೋಪ ಮಾಡಿರಲಿಲ್ಲ ಎಂದರು.

ಬಿಜೆಪಿ ನಾಯಕರಿಗೆ ಸೋಲುವ ಹತಾಶೆ ಭಾವನೆ ಕಾಡುತ್ತಿದೆ. ಆದುದರಿಂದ ಈ ರೀತಿಯ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ನನ್ನ ಇಮೇಜ್ ಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಕ್ಕೆ ಡಿನೋಟಿಫಿಕೇಷನ್ ಮಾಡಲು ಅಧಿಕಾರ ಇದೆ. ಆದರೂ ನನು ಒಂದೇ ಒಂದು ಡಿನೋಟಿಫಿಕೇಷನ್ ಮಾಡಿಲ್ಲ. ಪರಿಶೀಲಿಸಿ ಎಂದು ಬರೆದಿರುವ ಕಡತವನ್ನೇ ಆಧಾರವಾಗಿಟ್ಟುಕೊಂಡು ನನ್ನ ಮೇಲೆ ಬಿಜೆಪಿ ನಾಯಲ ಬಿ.ಜೆ. ಪಟ್ಟಸ್ವಾಮಿ ಆರೋಪ ಮಾಡಿದ್ದಾರೆ. ನಿಜಕ್ಕೂ ಅವರಿಗೆ ಕಾಮನ್ ಸೆನ್ಸ್ ಇಲ್ಲ. ಪರಿಶೀಲನೆಗೂ ಡಿನೋಟಿಫಿಕೇಷನ್ ಗೂ ವ್ಯತ್ಯಾಸವೇ ಗೊತ್ತಿಲ್ಲ ಎಂದು ಬೆಜೆಪಿ ನಾಯಕರ ವಿರುದ್ಧ ಗುಡುಗಿದರು.

Trending News