ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ ಮಾಡಿ ಆಸ್ಪತ್ರೆ ಸೇರಿದ ಉಗ್ರ

2006ರ ಅಕ್ಟೋಬರ್ 26ರಲ್ಲಿ   ಉಗ್ರ ಮೊಹಮ್ಮದ್ ಫಹಾದ್ ನನ್ನು ಬಂಧಿಸಲಾಗಿತ್ತು.  ಈತ ಪಾಕಿಸ್ತಾನದ ಮೂಲದವನು. ಕೆಆರ್ ಎಸ್ ಡ್ಯಾಂ ಸೇರಿದಂತೆ ದೇಶದ ವಿವಿಧ ಕಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ.   

Written by - Zee Kannada News Desk | Last Updated : May 11, 2022, 03:35 PM IST
  • ಧಾರವಾಡ ಕೇಂದ್ರ ಕಾರಾಗೃಹದಲ್ಲಿನ ಉಗ್ರನ ಹುಚ್ಚಾಟ
  • ಬೇಡಿಕೆಯಿಟ್ಟು ಕಳೆದ ಏಳು ದಿನಗಳಿಂದ ಉಪವಾಸ
  • ಕಿಮ್ಸ್ ಬಂಧಿಖಾನೆ ವಾರ್ಡ್ ನಲ್ಲಿ ಚಿಕಿತ್ಸೆ
 ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ ಮಾಡಿ ಆಸ್ಪತ್ರೆ ಸೇರಿದ ಉಗ್ರ title=
terrorist hospitalised

ಹುಬ್ಬಳ್ಳಿ : ಧಾರವಾಡ ಕೇಂದ್ರ ಕಾರಾಗೃಹದಲ್ಲಿನ ಉಗ್ರ ಹುಚ್ಚಾಟ ಮೆರೆದಿದ್ದಾನೆ. ವಿವಿಧ ಬೇಡಿಕೆಯಿಟ್ಟು ಕಳೆದ ಏಳು ದಿನಗಳಿಂದ ಉಪವಾಸ ನಡೆಸಿದ್ದಾನೆ. ಕಳೆದ ಏಳು ದಿನಗಳಿಂದ ಈ ರೀತಿ ಉಪವಾಸ ಮಾಡಿ ಇದೀಗ ಆಸ್ಪತ್ರೆ ಸೇರಿದ್ದಾನೆ ಉಗ್ರ ಮೊಹಮ್ಮದ್ ಫಹಾದ್.  ಈತನನ್ನು ಕಳೆದ ವರ್ಷ ಮೈಸೂರಿನಿಂದ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. 

2006ರ ಅಕ್ಟೋಬರ್ 26ರಲ್ಲಿ ಉಗ್ರ ಮೊಹಮ್ಮದ್ ಫಹಾದ್ ನನ್ನು ಬಂಧಿಸಲಾಗಿತ್ತು. ಈತ ಪಾಕಿಸ್ತಾನದ ಮೂಲದವನು. ಕೆಆರ್ ಎಸ್ ಡ್ಯಾಂ ಸೇರಿದಂತೆ ದೇಶದ ವಿವಿಧ ಕಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ. ಈರೀತಿ ದೇಶದ ವಿವಿಧ ಕಡೆಗಳಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿತ್ತು. ಬಂಧನದ ನಂತರ ಆತನನ್ನು ಮೈಸೂರು ಜೈಲಿನಲ್ಲಿ ಇರಿಸಲಾಗಿತ್ತು. 

ಇದನ್ನೂ ಓದಿ : PSI ನೇಮಕಾತಿ ಹಗರಣ: ಕೊನೆಗೂ ಪತ್ತೆಯಾಯ್ತು ಆರೋಪಿ ದಿವ್ಯಾ ಹಾಗರಗಿ ಮೊಬೈಲ್‌!

2006ರ ಅಕ್ಟೋಬರ್ 26ರಲ್ಲಿ ಬಂಧಿಯಾಗಿದ್ದ ಮೊಹಮ್ಮದ್ ಫಹಾದ್ ನನ್ನು ಕಳೆದ ವರ್ಷ ಮೈಸೂರು ಜೈಲಿನಿಂದ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ಧಾರವಾಡ ಜೈಲಿನಲ್ಲಿದ್ದ  ಮೊಹಮ್ಮದ್ ಫಹಾದ್ ವಿವಿದ್ಹ್ ಬೇಡಿಕೆಗಳನ್ನು ಮುಂದಿತ್ತು ಉಪವಾಸ ನಡೆಸಿದ್ದ. ಈತ ಬೇಡಿಕೆಗಳೆಂದರೆ : 
1.ಪ್ರಕರಣದ ತನಿಖೆ ಶೀಘ್ರವಾಗಿ ಪೂರ್ಣ ಮಾಡಬೇಕು
2. ತನ್ನ ಸಹಚರರು ಇರುವ ಬೆಂಗಳೂರು ಅಥವಾ ಕಾಶ್ಮೀರ ಜೈಲಿಗೆ ಸ್ಥಳಾಂತರಿಸಬೇಕು
3. ಬೇರೆ ಖೈದಿಗಳ ಜೊತೆಗೆ ಬೆರೆಯುವ ಅವಕಾಶ ನೀಡಬೇಕು 
ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಪವಾಸ ನಡೆಸುತ್ತಿದ್ದ. ಕಳೆದ ಏಳು ದಿನಗಳಿಂದ ಉಪವಾಸ ಮಾಡಿ, ಮಾನಸಿಕ ಸ್ಥಿಮಿತ ಕಳೆದುಕೊಂಡಿಕೊಂಡಿರುವಂತೆ ಆಡುತ್ತಿದ್ದ. ಇದೀಗ ಈತನಿಗೆ ಕಿಮ್ಸ್ ಬಂಧಿಖಾನೆ ವಾರ್ಡ್ ನಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ.

ಇದನ್ನೂ ಓದಿ : 'ಸರ್ವಜನರ ಹಿತದ ವಿಷಯದಲ್ಲಿ ರಾಜಕೀಯ ಮಾಡದೆ ಕಾಂತರಾಜ್ ಆಯೋಗದ ವರದಿಯನ್ನು ಒಪ್ಪಿಕೊಳ್ಳಲಿ'

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News