"ರಾಮನಗರ ಜಿಲ್ಲೆ ಎಂದರೆ ಕನಕಪುರ ರಿಪಬ್ಲಿಕ್ ಎಂದು ಡಿಕೆ ಸಹೋದರರು ಭಾವಿಸಿದಂತಿದೆ"

BJP tweet:ಕಾಂಗ್ರೆಸ್ ನದ್ದು ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಬಿಜೆಪಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದೆ. 

Edited by - Zee Kannada News Desk | Last Updated : Jan 3, 2022, 06:35 PM IST
  • ಕಾಂಗ್ರೆಸ್ ಸಂಸ್ಕೃತಿ ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇರೆ ಬೇಕಿಲ್ಲ
  • ರಾಮನಗರ ಜಿಲ್ಲೆ ಎಂದರೆ "ಕನಕಪುರ ರಿಪಬ್ಲಿಕ್" ಎಂದು ಡಿಕೆ ಸಹೋದರರು ಭಾವಿಸಿದಂತಿದೆ
  • ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ ಬಿಜೆಪಿ
"ರಾಮನಗರ ಜಿಲ್ಲೆ ಎಂದರೆ ಕನಕಪುರ ರಿಪಬ್ಲಿಕ್ ಎಂದು ಡಿಕೆ ಸಹೋದರರು ಭಾವಿಸಿದಂತಿದೆ" title=
ಡಿಕೆ ಸಹೋದರರು

ಬೆಂಗಳೂರು: ಕಾಂಗ್ರೆಸ್ ಸಂಸ್ಕೃತಿ (Congress Culture) ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇರೆ ಬೇಕಿಲ್ಲ. ಒಬ್ಬ ಸಂಸದರಿಗೆ ರಾಜ್ಯದ ಮುಖ್ಯಮಂತ್ರಿ (Cheif minister) ಇರುವ ವೇದಿಕೆಯಲ್ಲಿ ಹೇಗೆ ವರ್ತಿಸಬೇಕೆಂಬ ಪರಿಜ್ಞಾನವಿಲ್ಲದಿರುವುದು ವಿಪರ್ಯಾಸ. ಯಥಾ ರಾಜ ತಥಾ ಪ್ರಜಾ ಎಂಬಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವರ್ತಿಸುತ್ತಿರುವುದು ಖಂಡನೀಯ ಎಂದು ಬಜೆಪಿ ಅಸಮಾಧಾನ ಹೊರಹಾಕಿದೆ.

 

 

ಸಿಎಂ ಬಸವರಾಜ ಬೊಮ್ಮಾಯಿ (CM Bommai) ಎದುರೇ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ (MP DK Suresh) ಕೈ ಕೈ ಮಿಲಾಯಿಸಲು ಮುಂದಾದ ಘಟನೆ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ನಡೆದಿದೆ.  ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.

 

 

ರಾಮನಗರ ಜಿಲ್ಲೆ ಎಂದರೆ "ಕನಕಪುರ ರಿಪಬ್ಲಿಕ್" (Kanakapura Republic) ಎಂದು ಡಿಕೆ ಸಹೋದರರು (DK brothers) ಭಾವಿಸಿದಂತಿದೆ. ನಿಮ್ಮ ಅಟ್ಟಹಾಸ, ದೌರ್ಜನ್ಯ, ರಾಜಕೀಯ ಮೇಲಾಟವನ್ನು ಎಲ್ಲ ಕಾಲಕ್ಕೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಸಾರ್ವಜನಿಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಅವರ ವರ್ತನೆ ಅಕ್ಷಮ್ಯವಾದುದು ಎಂದು ಬಿಜೆಪಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಡಿ.ಕೆ.ಸುರೇಶ್ & ಅಶ್ವತ್ಥ್ ನಾರಾಯಣ್ ಫೈಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ. 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News