ಬೆಂಗಳೂರು:ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದಿದ್ದಎಂಎಸ್ ಧೋನಿ ಗ್ಲೋಬಲ್ ಸ್ಕೂಲ್‌ಗೂ ನೋಟಿಸ್ ನೀಡಿದೆ.2022-22 ವರ್ಷ ದಲ್ಲಿಸಿಂಗಸಂದ್ರದಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಆರಂಭವಾಗಿತ್ತು. ಪ್ರಸಕ್ತ ವರ್ಷ ಆ ಶಾಲೆಯಲ್ಲಿ 248 ಮಕ್ಕಳು ದಾಖಲಾತಿ ಪಡೆದಿದ್ದರು. ಸಿಬಿಎಸ್ ಸೇರಿದಂತೆ ಅನಧಿಕೃತ ಪಠ್ಯ ಬೋಧನೆಯಡಿ ಶಾಲೆಗೆ ನೋಟಿಸ್ ಜಾರಿಗೊಳಿಸಿದೆ.
ಪೋಷಕರಿಗೆ ಸಿಬಿಎಸ್ ಸಿ ಎಂದು ಹೇಳಿ ಆಡಳಿತ ಮಂಡಳಿ ತರಗತಿ ನಡೆಸುತ್ತಿದ್ದರು. ಯಾವುದೇ ರೀತಿಯ ಸಿಬಿಎಸ್ ಸಿ ಪಠ್ಯ ಕ್ರಮಕ್ಕೆ ಅನುಮತಿ ದೊರಕಿಲ್ಲ. ಸಿಬಿಎಸ್ಇ ಶಾಲೆ ಎಂದು ಹೇಳಿಕೊಂಡು ಆರ್ಕಿಡ್ ಶಾಲೆ ಆಡಳಿತ ಮಂಡಳಿ ಪೋಷಕರಿಂದ ಲಕ್ಷ ಲಕ್ಷ ಫೀಸ್ ವಸೂಲಿ ಮಾಡಿದೆ. ಆದ್ರೆ ಸಿಬಿಎಸ್ಇ ಪರೀಕ್ಷೆ ಬಿಟ್ಟು ಸ್ಟೇಟ್ ಸಿಲಬಸ್ ಪಾಠ ಮಾಡಲಾಗಿದೆ .
ಇದನ್ನೂ ಓದಿ: ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ 6-7 ಅಭ್ಯರ್ಥಿಗಳ ಬದಲಾವಣೆ ಸುಳಿವು ಕೊಟ್ಟ ಎಚ್ಡಿಕೆ
ಇದರಿಂದ ಅನುಮಾನಗೊಂಡ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ್ದು ಈ ವೇಳೆ ಆರ್ಕಿಡ್ ಸಿಬಿಎಸ್ಇ ಶಾಲೆಗಳ ಅಡಿಯಲ್ಲಿ ರಿಜಿಸ್ಟರ್ ಆಗದಿರುವುದು ಬಯಲಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ನೋಟಿಸ್ ಕಳಿಸಿದೆ.
ಬೆಂಗಳೂರಿನ 8 ಆರ್ಕಿಡ್ ಶಾಲೆಗೆಗಳಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಬೆಂಗಳೂರು ಉತ್ತರ ಜಿಲ್ಲೆಯ ಹೋನ್ನೆನಹಳ್ಳಿಯಲ್ಲಿರು ಆರ್ಕಿಡ್ ಶಾಲೆ, ಮೈಸೂರು ರಸ್ತೆ, ನಾಗರಭಾವಿ, ಪಣತೂರು, ಹೊಮ್ಮದೇವನಹಳ್ಳಿ ಹರಳೂರು, ಮಹಾಲಕ್ಷ್ಮಿ ಲೇಔಟ್, ಹೊರಮಾವು ಭಾಗದಲ್ಲಿರು ಆರ್ಕಿಡ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ:PM Modi Karnataka Tour: ನಾಳೆ ಪ್ರಧಾನಿ ಮೋದಿ ಬೆಂಗಳೂರು ಮತ್ತು ತುಮಕೂರು ಪ್ರವಾಸ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.