ಕವನದ ಮೂಲಕ ಮಾದಪ್ಪನ ಬೆಟ್ಟದ ಜನರ ಕಷ್ಟ ಹೇಳಿದ ಕವಿ- ಗಮನ‌ ಹರಿಸ್ತಾರ ಸಿಎಂ!? 

ಇದೇ 13 ರಂದು  ಚಾಮರಾಜನಗರ ಹಾಗೂ ಹನೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದು‌ ಮೂಲಸೌಕರ್ಯ ಕಲ್ಪಿಸುವಂತೆ ವ್ಯಕ್ತಿಯೊಬ್ಬರು ಮನವಿ ಮಾಡಿಕೊಂಡ ಘಟನೆ ಹನೂರು ತಾಲೂಕಿನ‌ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

Written by - Zee Kannada News Desk | Last Updated : Dec 11, 2022, 04:25 PM IST
  • ಮಹದೇಶ್ವರ ಬೆಟ್ಟದ ನಾಗೇಂದ್ರ ಎಂಬವರು ಕವನದ ಮೂಲಕ ಸಿಎಂಗೆ ಸ್ವಾಗತ ಕೋರಿ ಮೂಲ ಸೌಕರ್ಯ ಕೊಡುವಂತೆ ಒತ್ತಾಯಿಸಿದ್ದಾರೆ.‌
  • ಜೊತೆಗೆ, ಸೌಲಭ್ಯ ಕಲ್ಪಿಸಿದರಷ್ಟೇ ಮತ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
  • ಹುಲಿಯೋಜನೆ ಜಾರಿಯಾಗಬಾರದು, ಆಸ್ಪತ್ರೆ- ವಿದ್ಯುತ್, ರಸ್ತೆ, ಶಿಕ್ಷಣದ ಸೌಲಭ್ಯ ದೊರಕಿಸಿಕೊಡಿ ಎಂದು ಪ್ರಾಸ ಪದಗಳ ಮೂಲಕ ಕೇಳಿಕೊಂಡಿದ್ದಾರೆ.
ಕವನದ ಮೂಲಕ ಮಾದಪ್ಪನ ಬೆಟ್ಟದ ಜನರ ಕಷ್ಟ ಹೇಳಿದ ಕವಿ- ಗಮನ‌ ಹರಿಸ್ತಾರ ಸಿಎಂ!?  title=
file photo

ಚಾಮರಾಜನಗರ: ಇದೇ 13 ರಂದು  ಚಾಮರಾಜನಗರ ಹಾಗೂ ಹನೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದು‌ ಮೂಲಸೌಕರ್ಯ ಕಲ್ಪಿಸುವಂತೆ ವ್ಯಕ್ತಿಯೊಬ್ಬರು ಮನವಿ ಮಾಡಿಕೊಂಡ ಘಟನೆ ಹನೂರು ತಾಲೂಕಿನ‌ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಇದನ್ನೂ ಓದಿ : ನಾನು 4 ಮಕ್ಕಳಿಗೆ ಜನ್ಮ ನೀಡಲು ಕಾಂಗ್ರೆಸ್ ಪಕ್ಷವೇ ಕಾರಣ”

ಮಹದೇಶ್ವರ ಬೆಟ್ಟದ ನಾಗೇಂದ್ರ ಎಂಬವರು  ಕವನದ ಮೂಲಕ ಸಿಎಂಗೆ ಸ್ವಾಗತ ಕೋರಿ ಮೂಲ ಸೌಕರ್ಯ ಕೊಡುವಂತೆ ಒತ್ತಾಯಿಸಿದ್ದಾರೆ.‌ ಜೊತೆಗೆ, ಸೌಲಭ್ಯ ಕಲ್ಪಿಸಿದರಷ್ಟೇ ಮತ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.  ಹುಲಿಯೋಜನೆ ಜಾರಿಯಾಗಬಾರದು, ಆಸ್ಪತ್ರೆ- ವಿದ್ಯುತ್, ರಸ್ತೆ, ಶಿಕ್ಷಣದ ಸೌಲಭ್ಯ ದೊರಕಿಸಿಕೊಡಿ ಎಂದು ಪ್ರಾಸ ಪದಗಳ ಮೂಲಕ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : Himachal Pradesh: ನೂತನ ಮುಖ್ಯಮಂತ್ರಿಯಾಗಿ ಇಂದು ಸುಖ್ವಿಂದರ್ ಸಿಂಗ್ ಸುಖು ಪ್ರಮಾಣವಚನ

ಇನ್ನು, ಕವನ‌ ವಾಚಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕವಿಯ ಒತ್ತಾಯವನ್ನು ಸಿಎಂ ಗಮನಿಸುವರೇ ಎಂದು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News