ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಬಂಡೀಪುರದ ‘ರಾಣಾ’ ಇನ್ನಿಲ್ಲ

ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಪರಾಕ್ರಮ ತೋರಿದ್ದ ‘ರಾಣಾ’ ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ಎಂದು ಖ್ಯಾತಿ ಗಳಿಸಿತ್ತು.

Written by - Puttaraj K Alur | Last Updated : Aug 2, 2022, 03:26 PM IST
  • ಅಪರಾಧ ಪತ್ತೆಯ ನಿಪುಣ ಬಂಡೀಪುರ ಹಂಟಿಂಗ್ ಸ್ಪೆಷಲಿಸ್ಟ್ ‘ರಾಣಾ’ ಇನ್ನಿಲ್ಲ
  • ಹಲವು ಪ್ರಕರಣಗಳನ್ನ ಭೇದಿಸಿ ಪರಾಕ್ರಮ ತೋರಿದ್ದ ‘ರಾಣಾ’ ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿತ್ತು
  • ಮೇಲುಕಾಮನಹಳ್ಳಿ ಸಫಾರಿ ಕ್ಯಾಂಪಾಸ್‍ನಲ್ಲಿ ಸಕಲ ಸರ್ಕಾರಿ ಗೌರವಯೊಂದಿಗೆ ಅಂತ್ಯ ಸಂಸ್ಕಾರ
ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಬಂಡೀಪುರದ ‘ರಾಣಾ’ ಇನ್ನಿಲ್ಲ title=
ಬಂಡೀಪುರದ ‘ರಾಣಾ’ ಇನ್ನಿಲ್ಲ

ಚಾಮರಾಜನಗರ: ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಅಪರಾಧ ಪತ್ತೆಯ ನಿಪುಣ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶ್ವಾನದ ದಳದ ‘ರಾಣಾ’ ಸೋಮವಾರ ರಾತ್ರಿ ಮೃತಪಟ್ಟಿದೆ.   

ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಪರಾಕ್ರಮ ತೋರಿದ್ದ ‘ರಾಣಾ’ ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ಎಂದು ಖ್ಯಾತಿ ಗಳಿಸಿತ್ತು. ಅರಣ್ಯ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ‘ರಾಣಾ’ ಸಾವನ್ನಪ್ಪಿದ್ದು ಅರಣ್ಯ ಇಲಾಖೆ ಮತ್ತು ಸಿಬ್ಬಂದಿಗೆ ಶೋಕ ತರಿಸಿದೆ.

ಇದನ್ನೂ ಓದಿ: ಒಂದೆಡೆ ‘ಜನತಾ ಜಲಧಾರೆ’ ಮತ್ತೊಂದೆಡೆ ಕಣ್ಣೀರಧಾರೆ: ಬಿಜೆಪಿ ವ್ಯಂಗ್ಯ

7 ವರ್ಷಗಳ ಕಾಲ ಬಂಡೀಪುರದಲ್ಲಿ ದರ್ಬಾರ್ ನಡೆಸಿದ 10 ವರ್ಷದ ‘ರಾಣಾ’ ಇನ್ನೂ ನೆನೆಪು ಮಾತ್ರ. 2015ರಲ್ಲಿ ಬಂಡೀಪುರಕ್ಕೆ ಬಂದಿದ ‘ರಾಣಾ’ 25ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿತ್ತು. ಕೇರಳ, ತಮಿಳುನಾಡಿನ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪತ್ತೆ ಕಾರ್ಯದಲ್ಲಿ ತೊಡಗಿದ ‘ರಾಣಾ’ ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು.

ಮೇಲುಕಾಮನಹಳ್ಳಿ ಸಫಾರಿ ಕ್ಯಾಂಪಾಸ್‍ನಲ್ಲಿ ‘ರಾಣಾ’ ಮೃತಪಟ್ಟಿದೆ. 11 ಗಂಟೆಗೆ ಸಕಲ ಸರ್ಕಾರಿ ಗೌರವಯೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಬಂಡೀಪುರದ ಸಿಎಫ್ ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

‘ರಾಣಾ’ನ ಕಾರ್ಯಚರಣೆಯ ಮಾಹಿತಿ ಇಲ್ಲಿದೆ

2016ರಲ್ಲಿ ಸಾಗವಾನಿ ಮರ ಕಳ್ಳಸಾಗಣೆ ಪತ್ತೆ

2016ರಲ್ಲಿ ತಮಿಳುನಾಡಿನ ಗುಡಲೂರು ಬಳಿ ನರಹಂತಕ ಹುಲಿಯನ್ನು ಪತ್ತೆ ಹಚ್ಚುವಲ್ಲಿ ಸಹಕಾರ

2016ರಲ್ಲಿ ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ ಚಿರತೆಗೆ ವಿಷ ಹಾಕಿದ ಆರೋಪಿಗಳ ಪತ್ತೆ

2017ರಲ್ಲಿ ಶ್ರೀರಂಗಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆ  

2017ರಲ್ಲಿ ಪ್ರಿನ್ಸ್ ಹುಲಿಯ ಕಳೇಬರ ಹುಡುಕಿ ಕೊಟ್ಟಿತ್ತು

2018ರಲ್ಲಿ ನಾಗರಹೊಳೆಯ ಡಿ.ಬಿ.ಕುಪ್ಪೆಯಲ್ಲಿ ಮೃತಪಟ್ಟ ಜಿಂಕೆಯ ಪತ್ತೆ 2018ರಲ್ಲಿ ಮೈಸೂರಿನ ಹಾರೋಹಳ್ಳಿಯ ಹುಲಿ ಸಾವು ಪ್ರಕರಣ, ನಾಗರಹೊಳೆಯ ಅಂತರಸಂತೆಯಲ್ಲಿ ದೋಣಿ ಕದ್ದ ಆರೋಪಿಗಳ ಪತ್ತೆ

2022ರಲ್ಲಿ ನಾಗರಹೊಳೆಯಲ್ಲಿ ಹುಲಿ ಬೇಟೆ ಆಡಿದು ಮೂವರು ಆರೋಪಿಗಳ ಪತ್ತೆ

ಇದಿಷ್ಟು ‘ರಾಣಾ’ನ ಸಾಧನೆಯಾಗಿದೆ ಎಂದು  CF ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ ವಿತರಣೆ-ಶಶಿಕಲಾ ಜೊಲ್ಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News