ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆಗೆ ಮತ್ತೆ ವಿಗ್ನ ಎದುರಾಗಿದೆ..!

BBMP Election : ಕಳೆದ ಬಾರಿ ಬಿಜೆಪಿ ಸರ್ಕಾರ ರಾತ್ರೋರಾತ್ರಿ ಶರವೇಗದಲ್ಲಿ ವಾರ್ಡ ವಿಂಗಡಣೆ ಪಟ್ಟಿಯನ್ನೂ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು, ಅದ್ರೆ  ಸುಪ್ರೀಂಕೋರ್ಟ ನಿರ್ದೇಶನದಂತೆ ವಿಂಗಡಣೆ ಮಾಡಿಲ್ಲವೆಂದು ಈಗಿನ ಕಾಂಗ್ರೇಸ್ ಸರ್ಕಾರ  ಸರಸಾಗಟಗಿ ಪಟ್ಟಿಯನ್ನೂ ತಿರಸ್ಕರಿಸಿ, ಹೊಸ ಸಮಿತಿ ರಚನೆ ಮಾಡಿ ಬಿಬಿಎಂಪಿಗೆ ಹೊಸ ಬದಲಾವಣೆ ತರೋದಕ್ಕೆ ಮುಂದಾಗಿದೆ.  

Written by - Savita M B | Last Updated : Jun 14, 2023, 04:44 PM IST
  • ಪಾಲಿಕೆ ಇಬ್ಬಾಗವಾಗುತ್ತ ಅನ್ನೋ ಪ್ರಶ್ನೆ ಕಾಂಗ್ರೇಸ್ ವಲಯದಲ್ಲಿ ಕೇಳಿ ಬರುತ್ತದೆ
  • ಕೆಂಪೇಗೌಡ, ಅಂಬೇಡ್ಕರ್, ಸಂಗೋಳಿರಾಯಣ್ಣ ಎಂಬ ಮೂರು ಭಾಗಗಳಗಿ ವಿಂಗಡಣೆ ಮಾಡಬಹುದು
  • ಬಿಬಿಎಂಪಿ ಪುನರ್ ರಚನೆಗೆ ಬಿಎಸ್ ಪಾಟೀಲ್ ನೇತೃತ್ವದಲ್ಲಿ ಮೂವರ ಸಮಿತಿ ರಚನೆ ಮಾಡಿ ಆದೇಶ ನೀಡಿದ್ದಾರೆ.
ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆಗೆ ಮತ್ತೆ ವಿಗ್ನ ಎದುರಾಗಿದೆ..!  title=

 Congress : ಪಾಲಿಕೆ ಇಬ್ಬಾಗವಾಗುತ್ತ ಅನ್ನೋ ಪ್ರಶ್ನೆ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತದೆ, ಬಿಬಿಎಂಪಿ ಇಬ್ಬಾಗ ಮಾಡಲು ಮುಂದಾಗಿದ್ದಾರೆ ಬೆಂಗಳೂರಿನ ಕಾಂಗ್ರೆಸ್ ಶಾಸಕರು, ಕಳೆದ ಶನಿವಾರ ಕರೆದಿದ್ದ ಬೆಂಗಳೂರಿನ ಕಾಂಗ್ರೇಸ್ ಶಾಸಕರ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಭೆಯಲ್ಲಿ ಬಿಬಿಎಂಪಿ ಇಬ್ಬಾಗದ ಬಗ್ಗೆ ಬಿಸಿಬಿಸಿ ಚರ್ಚೆ ಆಗಿ ಪಾಲಿಕೆಯನ್ನು ಮೂರು ಭಾಗಗಳಗಿ ವಿಂಗಡಣೆ ಮಾಡೋದು ಸರಿ ಎನ್ನೂವ ಮನೋಭವ ಶುರು ಆಗಿದೆ. 

ಕೆಂಪೇಗೌಡ, ಅಂಬೇಡ್ಕರ್, ಸಂಗೋಳಿರಾಯಣ್ಣ ಎಂಬ ಮೂರು ಭಾಗಗಳಗಿ ವಿಂಗಡಣೆ ಮಾಡೋದು, ಮೂರು ಭಾಗಗಳಲ್ಲಿ ಮೂರು ಮೇಯರ್ ನೇಮಕ ಮಾಡೋದು, ಹೀಗೆಂದು ಬೆಂಗಳೂರಿನ ಮೂವರು ಕಾಂಗ್ರೇಸ್ ಶಾಸಕರು ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.  ಹೇಳಿಕೆ ನೀಡಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯನವರು ಕಳೆದ ರಾತ್ರಿ ಬಿಬಿಎಂಪಿ ಪುನರ್ ರಚನೆಗೆ ಬಿಎಸ್ ಪಾಟೀಲ್ ನೇತೃತ್ವದಲ್ಲಿ ಮೂವರ ಸಮಿತಿ ರಚನೆ ಮಾಡಿ ಆದೇಶ ನೀಡಿದ್ದಾರೆ. 

ಇದನ್ನೂ ಓದಿ-ಕಿಚ್ಚನ ಬ್ಯಾನರ್‌ನಲ್ಲಿ ನ್ಯೂ ಪ್ರಾಜೆಕ್ಟ್‌; ಬಣ್ಣದ ಲೋಕಕ್ಕೆ ಹೊಸ ಪ್ರತಿಭೆಯ ಮಾಸ್‌ ಎಂಟ್ರಿ..!

ಇನ್ನೂ, ಈ ಬಗ್ಗೆ ವರದಿ ನೀಡುವಂತೆ ಬಿಎಸ್ ಪಾಟೀಲ್ , ಮಾಜಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ, ಹಾಗೂ  ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸದಸ್ಯ ರವಿಚಂದರ್ ಒಳಗೊಂಡ ಸಮಿತಿ ರಚಿಸಿದೆ, ಈ ಸಮಿತಿ ಇನ್ನೂ ಮೂರು ತಿಂಗಳಲ್ಲಿ ಪಾಲಿಕೆಯ ಇಭ್ಬಾಗದ ಬಗ್ಗೆ ಹಾಗೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವರದಿ ನೀಡಬಹುದು. 

ಇನ್ನೂ ಈ ಸಮಿತಿ ಯಾವ್ಯಾವ ಮಾನದಂಡಗಳ‌ ಮೇಲೆ ವರದಿ ನೀಡಬಹುದು ಅಂತ ನೋಡೋದದ್ರೆ.
- 243 ವಾರ್ಡ್ ಗಳನ್ನ 250 ವಾರ್ಡಗಳನ್ನಗಿ  ಪುನರ್ವಿಂಗಡಣೆ ಮಾಡಬಹುದು,,?
- 2011 ರ ಜನಗಣತಿ ಆಧರಾದ ಮೇಲೆ ಡಿಲಿಮಿಟೇಷನ್ ಪ್ರಕ್ರಿಯೆ ಮಾಡಬಹುದು,,?
- ಒಂದು ವಾರ್ಡಿಗೆ 35 ಸಾವಿರ ಜನಸಂಖ್ಯೆ ನಿಗಧಿ ಮಾಡಬಹುದು,,?
- ಮಹಿಳೆಯರಿಗೆ 50 - 50 ಮೀಸಲಾತಿಗೆ ಅವಕಾಶ ಕೊಡಬಹುದು,,?
- ನಗರದ ಅಭಿವೃದ್ಧಿಯ ದೃಷ್ಟಿಯಿಂದ ಪಾಲಿಕೆ ಹಿಭ್ಬಾಗ ಮಾಡಬಹುದು,,?
- ಬಿಬಿಎಂಪಿಯನ್ನೂ ಮೂರು ಭಾಗಗಳಗಿ ವಿಂಗಡಿಸ ಬಹುದು,,?
- ಮೂರು ಭಾಗಗಳಿಗೂ ಹೊಸ ಹೆಸರು ನಾಮಕಾರಣ ಮಾಡಬಹುದು,,?
- ಕೆಂಪೇಗೌಡ, ಸಾಂಗೋಳಿರಾಯಣ್ಣ,,ಅಂಬೇಡ್ಕರ್ ಅನ್ನೂ ಹೆಸರು ಕೊಡಬಹುದು,,?

ಇದನ್ನೂ ಓದಿ-Gandii Baat: ವಿವಾದ ಸೃಷ್ಟಿಸಿದ ಏಕ್ತಾ ಕಪೂರ್ 'ಗಂಧೀಬಾತ್​' ಪೋಸ್ಟರ್..‌ ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ​

ಇನ್ನೂ ,ಬಿಬಿಎಂಪಿ ಚುನಾವಣೆ ಆಸೆ ಇಟ್ಟುಕೊಂಡಿದ್ದ ಕೆಲ ಆಕಾಂಕ್ಷಿಗಳಿಗೆ ಮತ್ತೆ ತಣ್ಣಿರು ಎರಚ್ಚಿದಂತೆ ಆಗಿದೆ. ಇತ್ತ ಕಾಂಗ್ರೇಸ್ ಮೂಲಗಳ ಪ್ರಕಾರ ಲೋಕಸಭ ಚುನಾವಣೆ ಮುಗಿಯುವವರೆಗೆ ಚುನಾವಣೆ ನಡೆಸಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಇನ್ನೂ ಒಂದುವೇಳೆ ಬಿಬಿಎಂಪಿ ವಿಭಜನೆ ಮಾಡುದರೆ ಮುಂದಿನ ದಿನಗಳಲ್ಲಿ ಬಿಬಿಎಂಪಿ ಹಾಗೂ ಲೋಕಸಭ ಚುನಾವಣೆಗೆ ದೊಡ್ಡಮಾಟ್ಟದಲ್ಲಿ ಪೆಟ್ಟು ಬಿಳುತ್ತೆ. ಈ ಹಿಂದೆ ದೆಹಲಿಯನ್ನೂ ಇದೆ ರೀತಿ ಇಬ್ಬಾಗ ಮಾಡಿದ್ರು ಅದ್ರೆ ಅದು ಪೇಲ್ಯೂರು ಆಗಿದೆ ಅಂತ ಕಾಂಗ್ರೇಸ್ ಕೆಲ ಒಕ್ಕಲಿಗ ನಾಯಕರು ಈಗಾಗ್ಲೇ ಸಿಎಂ ಗಮನಕ್ಕೆ ತಂದಿದ್ದಾರೆ. 

ಒಂದು ವೇಳೆ ಪಾಲಿಕೆ ಇಭ್ಬಾಗವದ್ರೆ ಕೆಂಪೇಗೌಡರಿಗೆ ಅವಮಾನ ಮಾಡಿದ ಹಾಗೆ ಅಗುತ್ತೆ, ಯಾವುದೇ ಕಾರಣಕ್ಕೂ ಪಾಲಿಕೆ ಒಡೆಯೋದು ಬೇಡ ಅಂತ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕೆಂಪೇಗೌಡ ಕಟ್ಟಿದ ಬೆಂಗಳೂರನ್ನ ಹಿಬ್ಬಾಗ ಮಾಡೋದಕ್ಕೆ ಕಾಂಗ್ರೇಸ್ ಪಕ್ಷಕ್ಕೆ ಮುಂದಾಗಿರೋದು ನಿಜಕ್ಕೂ ವಿಪರ್ಯಾಸ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News