ಹಸೆಮಣೆ ಏರಿದ ದಿನವೇ ಪರೀಕ್ಷೆಗೆ ಹಾಜರಾದ ನವವಧು!

ಮುಂಜಾನೆ ತಾಳಿಕಟ್ಟಿಸಿಕೊಂಡ ನವವಿವಾಹಿತ ಪರೀಕ್ಷಾ ಕೊಠಡಿಗೆ ಬಂದು ಡಿಗ್ರಿ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶಿವಮೊಗ್ಗ ಭರ್ಮಪ್ಪ ನಗರದ ಸತ್ಯವತಿ ಎಂಬ ಯುವತಿ ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿದ್ದಾಳೆ.   

Written by - Savita M B | Last Updated : Sep 10, 2023, 03:18 PM IST
  • ಹಸೆಮಣೆ ಏರಿ ಪರೀಕ್ಷೆಗೆ ಹಾಜರಾದ ನವವಧು.
  • ಬೆಳಿಗ್ಗೆ ತಾಳಿ ಕಟ್ಟಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದ ನವವಧು.
  • ಶಿವಮೊಗ್ಗದ ಕಮಲಾ ನೆಹರು ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಸತ್ಯವತಿ
ಹಸೆಮಣೆ ಏರಿದ ದಿನವೇ ಪರೀಕ್ಷೆಗೆ ಹಾಜರಾದ ನವವಧು!  title=

ಶಿವಮೊಗ್ಗ : ಪರೀಕ್ಷೆ ನಂತರ ಪ್ರಿಯಕರ ತನ್ನದೇ ಬೈಕ್ ನಲ್ಲಿ ಯುವತಿಯನ್ನು ಪುನಃ ಮಧುವೆಯ ಅಂಗಳಕ್ಕೆ ಬಂದ ಜೋಡಿ ಉಳಿದ ಮದುವೆ ಶಾಸ್ತ್ರಗಳನ್ನು ಮುಗಿಸಿದ್ದಾರೆ. ಒಂದೆಡೆ ಪ್ರೀತಿಸಿದ ಯುವಕನನ್ನು ಮದುವೆಯಾಗುವ ಅಮೃತ ಘಳಿಗೆ ಮತ್ತೊಂದೆಡೆ ಅದೇ ದಿನ ಪರೀಕ್ಷೆ ಬರೆಯಬೇಕಾದ ಸಂದರ್ಭ ಎದುರಾದಾಗ ಆ ಯುವತಿ ಎರಡು ಪರೀಕ್ಷೆಗಳನ್ನು ಗೆದ್ದು ಬೀಗಿದ್ದಾಳೆ. 

ಹೌದು ಶಿವಮೊಗ್ಗ ನಗರದ ಬರ್ಮಪ್ಪ ಕೇರಿಯ ಯುವತಿ ಎರಡು ಪರೀಕ್ಷೆಗಳನ್ನು ಶೇಕ್ ಇಟ್ ಸತ್ಯವತಿ ಮಾಡಿದ್ದಾಳೆ. ಕಲ್ಯಾಣ ಮಂಟಪದಲ್ಲಿ ಪ್ರಿಯಕರನಿಂದ ತಾಳಿಕಟ್ಟಿಸಿಕೊಂಡು ಅದೇ ಪ್ರಿಯಕರನ ಬೈಕ್ ನಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾಳೆ. 

ಇದನ್ನೂ ಓದಿ-"ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ"

ಶಿವಮೊಗ್ಗದ ಕಮಲಾ ನೆಹರು ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಸತ್ಯವತಿ ಇಂದು ಎಕನಾಮಿಕ್ಸ್ ಪರೀಕ್ಷೆಯನ್ನು ಬರೆದಿದ್ದಾಳೆ. ಎರಡು ವರ್ಷದ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಪರಿಚಯವಾದ ಚೆನ್ನೈ ಮೂಲದ ಪ್ರಾನ್ಸಿಸ್ ಎಂಬ ಯುವಕನೊಂದಿಗೆ ಸತ್ಯವತಿಗೆ ಪ್ರೇಮಾಂಕುರವಾಗಿದೆ. 

ಎರಡು ವರ್ಷ ಇನ್ ಸ್ಟಾಗ್ರಾಂನಲ್ಲಿ ಚಾಟ್ ಮಾಡಿಕೊಂಡಿದ್ದ ಪ್ರೇಮಿಗಳು ನಂತರ ಮದುವೆಯಾಗುವ ನಿರ್ದಾರ ತಳೆದಿದ್ದಾರೆ. ಇಬ್ಬರು ತಮ್ಮ ಪೋಷಕರನ್ನು ಒಪ್ಪಿಸಿ ಸರಳ ವಿವಾಹವಾಗಿದ್ದಾರೆ. ಪ್ರಾನ್ಸಿಸ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,,ಹಿಂದು ಧಾರ್ಮಿಕ ಪದ್ಧತಿಯಂತೆ ವಿವಾಹವಾಗಿದ್ದಾರೆ. ಇವರ ದಾಂಪತ್ಯ ಜೀವನ ಚೆನ್ನಾಗಿರಲೆಂದು ಪೋಷಕರು ಬಂಧುಗಳು ಹರಸಿದ್ದಾರೆ.

ಇದನ್ನೂ ಓದಿ-ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News