Viral Video : ಪತ್ರಕರ್ತನಿಗೆ ಎಚ್ಚರಿಕೆ ನೀಡಿದ ಸ್ಮೃತಿ; ಕಾಂಗ್ರೆಸ್‌ ಟೀಕೆ

Smriti Irani : ಕೇಂದ್‌ ಸಚಿವೆ ಸ್ಮೃತಿ ಇರಾನಿ ಅವರು ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಗೆ ಬೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು ಪತ್ರಕರ್ತರೊಬ್ಬರ ಜೊತೆ ವಾದ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.   

Written by - Savita M B | Last Updated : Jun 11, 2023, 10:47 AM IST
  • ಸ್ಮೃತಿ ಇರಾನಿ ವಾಗ್ವಾದದ ವಿಡಿಯೋ ವೈರಲ್‌
  • ಅದೇ ವಿಡಿಯೋವನ್ನು ಕಾಂಗ್ರೆಸ್‌ ಹಂಚಿಕೊಂಡಿದೆ
  • ಸ್ಮೃತಿ ಅವರ ನಡವಳಿಕೆಯನ್ನು ಟೀಕಿಸಿದೆ
Viral Video : ಪತ್ರಕರ್ತನಿಗೆ ಎಚ್ಚರಿಕೆ ನೀಡಿದ ಸ್ಮೃತಿ; ಕಾಂಗ್ರೆಸ್‌ ಟೀಕೆ  title=

Congress : ಇದೇ ವಾಗ್ವಾದದ ವಿಡಿಯೋವನ್ನು ಕಾಂಗ್ರೆಸ್‌ ಹಂಚಿಕೊಂಡಿದ್ದು, ಸ್ಮೃತಿ ಅವರ ನಡಾವಳಿಕೆಯನ್ನು ಟೀಕಿಸಿದೆ. ಅಮೇಥಿಯಲ್ಲಿ ಜನರ ಜೊತೆ ಮಾತುಕತೆ ನಡೆಸುವ ವೇಳೆ ಅಗೌರವ ತೋರಲಾಯಿತು ಎಂದು ಸ್ಮೃತಿ ಪತ್ರಕರ್ತರೊಬ್ಬರ ಜೊತೆ ಮಾತಿನ ಚಕಮಕಿ ನಡೆಸಿದರು. ಅಮೇಥಿ ಜನರಿಗೆ ಅಗೌರವ ತೋರುವುದನ್ನು ಕಾಂಗ್ರೆಸ್‌ ಸಹಿಸಬಹುದು, ಆದರೆ ತಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. 

"ಅಮೇಥಿಯ ಜನರಿಗೆ ಅಗೌರವ ತೋರಬೇಡಿ ಎಂದು ನಾನು ಪತ್ರಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದು ನಿಮಗಹೆ ಅರ್ಥವಾಗುವುದಿಲ್ಲ. ಇಂತಹ ಅಗೌರವದ ವರ್ತನೆಯನ್ನು ಕಾಂಗ್ರೆಸ್‌ ಸಹಿಸಬಹುದು, ಆದರೆ ನಾನು ಸಹಿಸುವುದಿಲ್ಲ" ಎಂದು ಸ್ಮೃತಿ ಅವರು ವೈರಲ್‌ ಆಗಿರುವ ವಿಡಿಯೋದಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ-Kichcha Sudeep: ಅಂದು ಸುದೀಪ್ ಕೊಟ್ಟ 50 ರೂ. ಬದುಕನ್ನೇ ಬದಲಿಸಿತು! ಪ್ರೊಡ್ಯೂಸರ್ ಆದ ಫ್ಯಾನ್‌ ಯಾರು ಗೊತ್ತಾ?

ಪತ್ರಕರ್ತರು ಸಕ್ಕರೆಯು ಯಾವಾಗ ರೂ13ಕ್ಕೆ ದೊರೆಯುತ್ತದೆ? ಯಾವಾಗ ಅನಿಲ ದರ ಕಡಿಮೆಯಾಗುತ್ತದೆ? ಮಹಿಳಾ ಕುಸ್ತಿಪಟುಗಳ ಪ್ರಭಟನೆಗೆ ಮೌನವೇಕೆ ಎಂಬ ಪ್ರಶ್ನೆಗಳನ್ನು ಕೇಳಿರಬೇಕು ಅದಕ್ಕಾಗಿ ಸ್ಮೃತಿ ಇರಾನಿ ಕೆಂಡಾಮಂಡಲವಾಗಿದ್ದಾರೆ. ಸ್ಮೃತಿ ಅವರೇ ಇದು ಪ್ರೀತಿಯಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕಿದೆ" ಎಂದು ಕಾಂಗ್ರೆಸ್‌ ಸಿಡಿದಿದೆ. 

ಸ್ಮೃತಿ ಅವರು ಇದೇ ಕಾಂಗ್ರೆಸ್‌ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ್ದು, "ಈ ಬಗ್ಗೆ ರಾಹುಲಕ್‌ ಗಾಂಧಿ ಅವರೊಂದಿಗೆ ಯಾವಾಗ ಚರ್ಚೆ ನಡೆಸಬೇಕು ಹೇಳಿ? ಸಕ್ಕರೆ ಮಾತ್ರವಲ್ಲ ಗೋಧಿ ಮತ್ತು ಬೇಳೆಕಾಳುಗಳ ಬೆಲೆಯನ್ನೂ ಹೇಳುತ್ತೇನೆʼ ಎಂದು ಪ್ರತ್ಯುತ್ತರ ನೀಡಿದ್ದಾರೆ. ಸ್ಮೃತಿ ಅವರು ಸಹ ಅಮೇಥಿ ಜನರ ಜೊತೆ ಮಾತನಾಡಿದ ಸಂವಾದದ ವಿಡಿಯೋವೊಂದನ್ನು ಟ್ವೀಟನಲ್ಲಿ ಹಂಚಿಕೊಂಡಿದ್ದು, ಇದು ಪ್ರೀತಿ ಎಂದು ಬರೆದುಕೊಂಡಿದ್ದಾರೆ. 

ಸ್ಮೃತಿ ಅವರು ಗುರುವಾರ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಸ್ಮೃತಿ ಇರಾನಿ ಅವರು ಗುರುವಾರ ರಾಹುಲ್‌ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. "ಕಲ್ಲಿದ್ದಲು, ಮೇವು ಲೂಟಿ ಮಾಉವವರ ಜೊತೆ ಕೈಜೋಡಿಸಿದ್ದು ಎಂತಹ ಪ್ರೀತಿ? ಸೆಂಗೋಲ್‌ಗೆ ಅವಮಾನ ಮಾಡುವ ಪ್ರೀತಿ ಇದು, ನೂತನ ಸಂಸತ್‌ ಭವನವನ್ನು ಬಹಿಷ್ಕರಿಸುವುದು ಎಂತಹ ಪ್ರೀತಿ? ದಿ ಕೇರಳ ಸ್ಟೋರಿ ಸಿನಿಮಾ ಬಂದಾಗ ಮೌನವೇಕೆ? ಭಾರತವನ್ನು ಶಪಿಸುವವರನ್ನು ಕೈಕುಲುಕುವ ಮತ್ತು ಅಪ್ಪಿಕೊಳ್ಳುವುದು ಯಾವ ರೀತಿಯ ಪ್ರೀತಿ?" ಎಂದು ಟೀಕಿಸಿದ್ದರು.

ಇದನ್ನೂ ಓದಿ-Prabhu Deva: ರಾಗಿಣಿ ಮನೆಯಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ; ಇಲ್ಲಿವೆ ನೋಡಿ ಫೋಟೊಸ್..!‌

"ಮಾನವೀಯ ಹೆಸರಲ್ಲಿ ನಿಮ್ಮ ಮಾಲೀಕರಿಗೆ ಕರೆ ಮಾಡುತ್ತೇನೆ ಎಂದು ಬೆದರಿಕೆ ಹಾಕುವುದು ಸರಿಯಲ್ಲ. ಅಂಮೇಥಿಯ ಜನರು ಬದಲಾವಣೆಯ ಮನಸ್ಸು ಮಾಡಿದ್ದಾರೆ. ಅದರ ಸುಳಿವು ಸಹ ನಿಮಗೆ ದೊರೆತಿದೆ. ಈ ಭಯ ನಿಮ್ಮ ಮಾತಿನಲ್ಲಿ ವ್ಯಕ್ತವಾಗುತ್ತಿದೆ." ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರೀಯಾ ಶಿರ್ನೆಟ್‌ ಅವರು ವ್ಯಂಗ್ಯಮಾಡಿದ್ದಾರೆ. 

"ತಮ್ಮ ಲೋಕಸಭಾ ಕ್ಷೇತ್ರದ ಅಮೇಥಿಯ ಜನರಿಗೆ ಅಗೌರವ ತೋರಿದರೆ ನಿಮ್ಮ ಪತ್ರಿಕಾ ಮಾಲೀಕರಿಗೆ ಕರೆಮಾಡಿ ಯಾವ ಪತ್ರಕರ್ತರಿಗೂ ಜನರನ್ನು ಅಗೌರವಿಸುವ ಹಕ್ಕು ಇಲ್ಲ ಎಂದು ಹೇಳುತ್ತೇನೆ" ಎಂದು ವಿಡಿಯೋದಲ್ಲಿ ಸ್ಮೃತಿ ಇರಾನಿ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News