Bangalore : ಶಾಸಕರ ಅಸಮಾದಾನ ಶಮನಕ್ಕೆ ಇಂದು ಸಿಎಂ ಹಾಗೂ ಡಿಸಿಎಂ ಸಭೆ ನಡೆಸಿದ್ರು .ಈ ಸಭೆಯಲ್ಲಿ ಬೆಂಗಳೂರು ನಗರ,ಕೋಲಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಸಚಿವರು ಭಾಗಿಯಾಗಿದ್ರು.ಮೂರು ಜಿಲ್ಲೆಗಳ ಪೈಕಿ ಬೆಂಗಳೂರು ನಗರದ ಸಭೆ ಸಾಕಷ್ಟು ಮಹತ್ವವನ್ನ ಪಡೆದಿತ್ತು.
ಈ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಅನುದಾನ ಬಿಡುಗಡೆ ,ಗುತ್ತಿಗೆದಾರರ ಬಾಕಿ ಬಿಲ್ ಪಾವತಿ,ಹಿಂದಿನ ಸರ್ಕಾರದ ಅವಧಿಯ ಹಗರಣ ಗಳ ತನಿಖೆ,ಎಸ್ಐಟಿ,ವಾರ್ಡ ಮರು ವಿಂಗಡನೆ ಸೇರಿದಂತೆ ಕುಡಿಯುವ ನೀರು ಸೇರಿ ಹಲವು ವಿಚಾರಗಳ ಬಗ್ಗೆ ಸತತವಾಗಿ ಮೂರು ಘಂಟೆಗಳ ಕಾಲ ಚರ್ಚೆ ನಡೆಸಲಾಯ್ತು.
ಬೆಂಗಳೂರಿನ ಸಭೆಯಲ್ಲಿ ಸರ್ಕಾರಕ್ಕೆ ಸಂಕಷ್ಟವಾಗ್ತಿರುವ ಗುತ್ತಿಗೆದಾರರ ಬಾಕಿ ಬಿಲ್ ವಿಚಾರ ಪ್ರತಿಧ್ವನಿಸಿದೆ. ಕಾಮಗಾರಿಗಳ ಬಗ್ಗೆ ಆದಷ್ಟು ಶೀಘ್ರವಾಗಿ ತನಿಖೆ ನಡೆಸಿ ವರದಿ ಪಡೆದು ಕೊಂಡು ಕನಿಷ್ಠ 50% ಕಾಮಗಾರಿ ಬಿಲ್ಪಾವತಿಸೋಣ.ಗೊಂದಲಗಳಿರುವ,ಹಾಗೂ ಕಾಮಗಾರಿ ನಡೆಸದಿರುವ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳೋಣ.ಬಿಲ್ ಪಾವತಿ ಮಾಡದಿದ್ದರೆ ಮುಂಬರುವ ಬಿಬಿಎಂಪಿ ಎಲೆಕ್ಷನ್ ಗೆ ಡ್ಯಾಮೇಜ್ ಆಗಲಿವೆ.
ಹೀಗಾಗಿ ಸಾಧ್ಯವಾದಷ್ಟು ಶೀಘ್ರದಲ್ಲಿ ಬಾಕಿ ಬಿಲ್ ಪಾವತಿಸುವಂತೆ ಸಿಎಂ ಮುಂದೆ ಬೆಂಗಳೂರು ಶಾಸಕರು ಪ್ರಸ್ತಾಪ ಮಾಡಿದ್ದಾರೆ.ಎಸ್ಐಟಿ ವರದಿ ಪಡೆದು ಕ್ರಮ ಕೈಗೊಳ್ಳು ಭರವಸೆಯನ್ನು ಡಿಸಿಎಂ ನೀಡಿದ್ದಾರೆ ಎನ್ನಲಾಗಿದೆ.ಈಗಲೆ ಬಿಲ್ ಪಾವತಿ ಮಾಡಿದ್ರೆ ಬಿಜೆಪಿ ವಿರುದ್ದ ೪೦% ಕಮಿಷನ್ ಆರೋಪಕ್ಕೆ ಅರ್ಥ ಇರುವುದಿಲ್ಲ.
ಇದನ್ನೂ ಓದಿ-ಡಾ.ಜಿ.ಪರಮೇಶ್ವರ್ ತವರಲ್ಲಿ ಸಿಡಿದೆದ್ದ ಅನ್ನದಾತರು!
ತನಿಖಾ ವರದಿ ಬಂದ ಬಳಿಕ ಸರಿಯಾಗಿ ಕಾಮಗಾರಿ ನಡೆಸಿದವರಿಗೆ ಬಿಲ್ ಪಾವತಿಸಿ,ಕಳಪೆ ಕಾಮಗಾರಿ ನಡೆಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಂದು ಡಿಸಿಎಂ,ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಬಿಎಂಪಿ ಚುನಾವಣೆಯನ್ನ ಪ್ರತಿಷ್ಟೆಯನ್ನಾಗಿ ತೆಗೆದುಕೊಂಡಿರುವ ಡಿಸಿಕೆ ಶಾಸಕರಿಗೆ ಜವಾಬ್ದಾರಿ ನೀಡಿದ್ದಾರೆ.ಲೋಕಸಭಾ ಚುನಾವಣೆಗೂ ಮೊದಲೆ ಡಿಸೆಂಬರ್ ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗಿದೆ.
ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ಮತ್ತು ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಲಾಗಿದೆ.ಗ್ಯಾರಂಟಿ ಹಾಗೂ ಬ್ರಾಂಡ್ ಬೆಂಗಳೂರು ವಿಚಾರವನ್ನ ಮನೆ ಮನೆಗೆ ತಲುಪಿಸಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಬಿಬಿಎಂಪಿ ಗದ್ದುಗೆ ಏರುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ..
ಬೆಂಗಳೂರು ನಗರ ಜಿಲ್ಲೆ ಶಾಸಕರ ಸಭೆಗೆ ಸಚಿವ ಕೆ,.ಜೆ.ಜಾರ್ಜ ಮತ್ತು ಕೃಷ್ಣ ಬೈರೇಗೌಡ ಗೈರಾಗಿದ್ದರು.ಮುಂಬರುವ ಲೋಕಸಭೆ ಮತ್ತು ಬಿಬಿಎಂಪಿ ಚುನಾವಣೆಯನ್ನು ದೃಷ್ಠಿಯನ್ನು ಕೇಂದ್ರೀಕರಿಸಿ ಹೆಚ್ಚಿನ ಕೆಲಸ ಮಾಡಲು ಸರ್ಕಾರ ಮುಂದಾಗಿದೆ.ಅಂತೆಯೇ ಶಾಸಕರ ಬೇಡಿಕೆ,ಬಿಬಿಎಂಪಿ ಚುನಾವಣೆಗೂ ಅಗತ್ಯ ಅನುದಾನ ಸಹಕಾರ ನೀಡುವ ಭರವಸೆಯೂ ಸಭೆಯಲ್ಲಿ ಶಾಸಕರಿಗೆ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ-ಭ್ರಷ್ಟಾಚಾರದಲ್ಲಿ ಚೆಲುವರಾಯಸ್ವಾಮಿಗೆ ಮೊದಲ ಸ್ಥಾನ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.