ಈ ಬಾರಿಯದ್ದು ಹೈಬ್ರಿಡ್ ಸೂರ್ಯಗ್ರಹಣ ! 100 ವರ್ಷಗಳ ನಂತರ ಸಂಭವಿಸುತ್ತಿದೆ ಇಂಥಹ ಗ್ರಹಣ !

Hybrid Solar Eclipse 2023 : 2023 ರ ಮೊದಲ ಸೂರ್ಯಗ್ರಹಣವು ಬಹಳ ವಿಶೇಷವಾಗಿರುತ್ತದೆ.  ಏಕೆಂದರೆ ಅದು ಮೂರು ರೂಪಗಳಲ್ಲಿ ಗೋಚರಿಸುತ್ತದೆ. ಇಂತಹ ಸ್ಥಿತಿ ಸುಮಾರು 100 ವರ್ಷಗಳಿಗೊಮ್ಮೆ ಕಂಡುಬರುತ್ತದೆ.   

Written by - Ranjitha R K | Last Updated : Apr 10, 2023, 12:15 PM IST
  • ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವು ಪ್ರಮುಖ ಖಗೋಳ ಘಟನೆಗಳಾಗಿವೆ
  • 2023ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಲಿದೆ.
  • ಈ ಸೂರ್ಯಗ್ರಹಣವು ಹೈಬ್ರಿಡ್ ಸೂರ್ಯಗ್ರಹಣವಾಗಿರುತ್ತದೆ.
 ಈ ಬಾರಿಯದ್ದು  ಹೈಬ್ರಿಡ್ ಸೂರ್ಯಗ್ರಹಣ ! 100 ವರ್ಷಗಳ ನಂತರ ಸಂಭವಿಸುತ್ತಿದೆ ಇಂಥಹ ಗ್ರಹಣ !    title=

ಬೆಂಗಳೂರು : ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವು ಪ್ರಮುಖ ಖಗೋಳ ಘಟನೆಗಳಾಗಿವೆ. ಇದರೊಂದಿಗೆ, ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಗ್ರಹಣವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. 2023ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಲಿದೆ. ಈ ದಿನ ವೈಶಾಖ ಅಮವಾಸ್ಯೆಯೂ ಹೌದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸೂರ್ಯಗ್ರಹಣವು ಹೈಬ್ರಿಡ್ ಸೂರ್ಯಗ್ರಹಣವಾಗಿರುತ್ತದೆ. ಅಂದರೆ,  ಒಂದೇ ದಿನದಲ್ಲಿ 3 ರೂಪದಲ್ಲಿ ಸೂರ್ಯಗ್ರಹಣಗಳು ಗೋಚರಿಸುತ್ತವೆ.  ಈ ಕಾರಣಕಾಗಿಯೇ ವಿಜ್ಞಾನಿಗಳು ಈ ಸೂರ್ಯಗ್ರಹಣಕ್ಕೆ ಹೈಬ್ರಿಡ್ ಸೂರ್ಯಗ್ರಹಣ ಎಂದು  ಕರೆಯಲಾಗುತ್ತದೆ. 

ಭಾರತದಲ್ಲಿ ಸೂರ್ಯಗ್ರಹಣ 2023 ಸಮಯಗಳು :
ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್  20ರ ಗುರುವಾರ   ಗೋಚರಿಸಲಿದೆ. ಈ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 7:04 ರಿಂದ ಪ್ರಾರಂಭವಾಗಿ, ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. ಈ ರೀತಿಯಾಗಿ ಸೂರ್ಯಗ್ರಹಣದ ಅವಧಿ 5 ಗಂಟೆ 24 ನಿಮಿಷಗಳವರೆಗೆ ಇರಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದರಿಂದಾಗಿ ಈ ಸೂರ್ಯಗ್ರಹಣದ ಸೂತಕ ಅವಧಿಯು ಇಲ್ಲಿ ಮಾನ್ಯವಾಗಿಲ್ಲ. 

ಇದನ್ನೂ ಓದಿ : Astro Tips: ತಾಮ್ರದ ಉಂಗುರ ಧರಿಸಿದ್ರೆ ನಿಮ್ಮ ಅದೃಷ್ಟ ಬೆಳಗಲಿದೆ!

ಮೂರು ರೂಪಗಳಲ್ಲಿ ಗೋಚರಿಸಲಿದೆ ಸೂರ್ಯಗ್ರಹಣ  
2023 ರ ಮೊದಲ ಸೂರ್ಯಗ್ರಹಣವು ಬಹಳ ವಿಶೇಷವಾಗಿರುತ್ತದೆ.  ಏಕೆಂದರೆ ಅದು ಮೂರು ರೂಪಗಳಲ್ಲಿ ಗೋಚರಿಸುತ್ತದೆ. ಇದು ಭಾಗಶಃ, ಸಂಪೂರ್ಣ ಮತ್ತು ವೃತ್ತಾಕಾರದ ರೂಪದಲ್ಲಿ ಗೋಚರಿಸುತ್ತದೆ. ಚಂದ್ರನು ಸೂರ್ಯನ ಮುಂದೆ ಬಂದು ಅದರ ಬೆಳಕಿನ ಮೇಲೆ ಪ್ರಭಾವ ಬೀರಿದಾಗ ಅದನ್ನು ಭಾಗಶಃ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಚಂದ್ರನು ಸೂರ್ಯನ ಮಧ್ಯದಲ್ಲಿ ಬಂದು ಅದರ ಬೆಳಕನ್ನು ನಿರ್ಬಂಧಿಸಿದಾಗ, ಮಧ್ಯದಲ್ಲಿ ಕತ್ತಲೆ ಮತ್ತು ಬೆಳಕಿನ ಉಂಗುರವು ಹೊರಗಿನ ವೃತ್ತದಲ್ಲಿ ಮಾತ್ರ ಗೋಚರಿಸುತ್ತದೆ.  ಆಗ ಅದನ್ನು  ರಿಂಗ್ ಆಫ್ ಫೈರ್ ಎಂದು ಕರೆಯುತ್ತಾರೆ. ಮತ್ತೊಂದೆಡೆ, ಭೂಮಿ, ಸೂರ್ಯ ಮತ್ತು ಚಂದ್ರರು ಒಂದೇ ಸಾಲಿನಲ್ಲಿದ್ದಾಗ, ಭೂಮಿಯ ಒಂದು ಭಾಗವು ಸಂಪೂರ್ಣವಾಗಿ ಕತ್ತಲೆಯಲ್ಲಿ ಮುಳುಗುತ್ತದೆ. ಈ ಪರಿಸ್ಥಿತಿಯನ್ನು ಸಂಪೂರ್ಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.

ಹೈಬ್ರಿಡ್ ಸೂರ್ಯಗ್ರಹಣ ಹೀಗೆ ಸಂಭವಿಸುತ್ತದೆ  : 
ಈ ಬಾರಿ ಸೂರ್ಯಗ್ರಹಣದ ಸಂದರ್ಭದಲ್ಲಿ ಭಾಗಶಃ, ಸಂಪೂರ್ಣ ಮತ್ತು ವೃತ್ತಾಕಾರದ ಸೂರ್ಯಗ್ರಹಣವು ವಿವಿಧ ಸ್ಥಳಗಳಲ್ಲಿ ಗೋಚರಿಸುತ್ತದೆ. ಈ ರೀತಿಯಾಗಿ, ಒಂದೇ ಸೂರ್ಯಗ್ರಹಣದಲ್ಲಿ 3 ರೀತಿಯ ದೃಶ್ಯಗಳನ್ನು ಕಾಣಬಹುದು. ಈ ಕಾರಣದಿಂದಲೇ ಈ ಬಾರಿಯ ಗ್ರಹಣವನ್ನು ಹೈಬ್ರಿಡ್ ಸೌರ ಗ್ರಹಣ ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿ ಸುಮಾರು 100 ವರ್ಷಗಳಿಗೊಮ್ಮೆ ಕಂಡುಬರುತ್ತದೆ. ಭೂಮಿಯಿಂದ ಚಂದ್ರನ ಅಂತರವು ಬಹಳ ಜಾಸ್ತಿ ಅಥವಾ ಕಡಿಮೆ ಇಲ್ಲದಿರುವಾಗ ಇದು ಸಂಭವಿಸುತ್ತದೆ. 

ಇದನ್ನೂ ಓದಿ : 30 ದಿನ ಈ ರಾಶಿಯವರು ಬಹಳ ಜಾಗರೂಕರಾಗಿರಿ, ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a

Trending News