Akshaya Tritiya: ಇಂದಿನ ದಿನ ದಾನ ಮಾಡಿದರೆ ಪ್ರಾಪ್ತಿಯಾಗುತ್ತದೆ 10 ಪಟ್ಟು ಹೆಚ್ಚು ಪುಣ್ಯ, ಯಾವ ವಸ್ತುಗಳನ್ನು ದಾನ ಮಾಡಿದರೆ ಮಂಗಳಕರ

Akshaya Tritiya 2022: ಅಕ್ಷಯ ತೃತೀಯ ದಿನವು ಶಾಪಿಂಗ್ ಮತ್ತು ಮಂಗಳಕರ ಕೆಲಸಗಳಿಗೆ ಮಾತ್ರವಲ್ಲದೆ ದಾನಕ್ಕಾಗಿಯೂ ಬಹಳ ವಿಶೇಷವಾಗಿದೆ. ಈ ದಿನದಂದು ಮಾಡಿದ ದಾನವು ಹೆಚ್ಚಿನ ಫಲವನ್ನು ನೀಡುತ್ತದೆ.  ಆದ್ದರಿಂದ ಅಕ್ಷಯ ತೃತೀಯ ದಿನದಂದು ದಾನ ಮಾಡಲು ಮರೆಯದಿರಿ.  

Written by - Ranjitha R K | Last Updated : May 3, 2022, 09:16 AM IST
  • ಇಂದು ಅಕ್ಷಯ ತೃತೀಯ
  • ಇಂದು ಮಾಡುವ ದಾನಕ್ಕೆ ವಿಶೇಷ ಮಹತ್ವವಿದೆ
  • ಅಕ್ಷಯ ತೃತೀಯದಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ.
 Akshaya Tritiya: ಇಂದಿನ ದಿನ ದಾನ ಮಾಡಿದರೆ ಪ್ರಾಪ್ತಿಯಾಗುತ್ತದೆ 10 ಪಟ್ಟು ಹೆಚ್ಚು ಪುಣ್ಯ,  ಯಾವ ವಸ್ತುಗಳನ್ನು ದಾನ  ಮಾಡಿದರೆ ಮಂಗಳಕರ  title=
Akshaya Tritiya 2022 (file photo)

ಬೆಂಗಳೂರು : ಇಂದು ಅಂದರೆ ಮೇ 3 ರಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತಿದೆ. ಮದುವೆ, ಗೃಹಪ್ರವೇಶ, ಹೊಸ ಕೆಲಸ ಆರಂಭಿಸಲು, ಚಿನ್ನ ಬೆಳ್ಳಿ ಕಾರು ಖರೀದಿಗೆ ಈ ದಿನವನ್ನು ಬಹಳ ಶುಭ ಎಂದು ಹೇಳಲಾಗುತ್ತದೆ. ವೈಶಾಖ ಮಾಸದ ದೇವರು ವಿಷ್ಣುವಾಗಿರುವುದರಿಂದ, ಅಕ್ಷಯ ತೃತೀಯದಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಸ್ನಾನ ಮತ್ತು ದಾನಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅನೇಕ ಧಾರ್ಮಿಕ ಗ್ರಂಥಗಳಲ್ಲಿ, ಅಕ್ಷಯ ತೃತೀಯ ದಿನದಂದು ದಾನ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. 

ಅಕ್ಷಯ ತೃತೀಯದ ದಿನ ಮಾಡುವ ದಾನದಿನದ ಪುಣ್ಯ ಪ್ರಾಪ್ತಿ : 
ಮಹಾದಾನದ ಮಹತ್ವವನ್ನು ಸ್ಕಂದ ಪುರಾಣದ ಪ್ರಭಾಸ್ಖಂಡದಲ್ಲಿ ಹೇಳಲಾಗಿದೆ. ಇದರ ಪ್ರಕಾರ ಗೋವು, ಚಿನ್ನ, ಬೆಳ್ಳಿ, ರತ್ನಗಳು, ವಿದ್ಯೆ, ಎಳ್ಳು, ಆನೆ, ಕುದುರೆ, ಹಾಸಿಗೆ, ಬಟ್ಟೆ, ಭೂಮಿ, ಅನ್ನ, ಹಾಲು, ಛತ್ರಿ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುವುದು ತುಂಬಾ ಮಂಗಳಕರವಾಗಿದೆ. ಮತ್ತೊಂದೆಡೆ, ಈ ದಿನ ಏನನ್ನೂ ದಾನ ಮಾಡದವನು ಬಡವನಾಗುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಆದ್ದರಿಂದ, ನಿಮ್ಮ ಆದಾಯ ಏನೇ ಇರಲಿ ಇಂದಿನ ದಿನ ಮಾತ್ರ ಬಡವರಿಗೆ ಏನನ್ನಾದರೂ ದಾನ ಮಾಡಬೇಕು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ :  Akshaya Tritiya 2022: ಅಕ್ಷಯ ತೃತಿಯಾ ದಿನ ದೇವಿ ಲಕ್ಷ್ಮಿಯನ್ನು ಈ ರೀತಿ ಪ್ರಸನ್ನಗೊಳಿಸಿ, ವರ್ಷವಿಡಿ ಧನವೃಷ್ಟಿ ಗ್ಯಾರಂಟಿ

ಸಿಗುತ್ತದೆ ಬಹುಫಲ :
ಧಾರ್ಮಿಕ ಗ್ರಂಥಗಳಲ್ಲಿ ಕೆಲವು ದಾನಗಳನ್ನು ಉಲ್ಲೇಖಿಸಲಾಗಿದೆ.  ಈ ದಾನಗಳನ್ನು ಮಾಡಿದರೆ ಅದರ ಫಲ ಈ ಜನ್ಮದಲ್ಲಿಯೇ ಪ್ರಾಪ್ತಿಯಾಗುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಸಾಮಾನ್ಯವಾಗಿ ದಾನ ಧರ್ಮ ಮಾಡಿದರೆ ಅದರ ಫಲ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮತ್ತೊಂದೆಡೆ, ಕೆಲವು ದಿನಗಳಲ್ಲಿ ಮಾಡಿದ ದಾನವು ಸಾಮಾನ್ಯ ದಿನಗಳಿಗಿಂತ ಅನೇಕ ಪಟ್ಟು ಹೆಚ್ಚು ಫಲವನ್ನು ನೀಡುತ್ತದೆ. ಅಕ್ಷಯ ತೃತೀಯ ಕೂಡ ಅಂತಹ ದಿನವೇ. ಈ ದಿನ ಮಾಡಿದ ದಾನ 10 ಪಟ್ಟು ಹೆಚ್ಚು ಫಲ ನೀಡುತ್ತದೆ. ಈ ದಿನ ಬಾರ್ಲಿ, ಬೆಲ್ಲ, ಹೆಸರುಬೇಳೆ, ತುಪ್ಪ, ಉಪ್ಪು, ಎಳ್ಳು, ಸೌತೆಕಾಯಿ, ಹಲಸಿನಕಾಯಿ, ಮಾವು, ಹಿಟ್ಟು, ಬೇಳೆಕಾಳುಗಳು, ಬಟ್ಟೆ, ಇವುಗಳನ್ನು ದಾನ ಮಾಡುವುದು ತುಂಬಾ ಶ್ರೇಯಸ್ಕರ. ಈ ದಾನಗಳು ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ ಮತ್ತು ಜೀವನದಲ್ಲಿ ಎಲ್ಲದರಲ್ಲೂ ಯಶಸ್ಸು ಸಿಗುವಂತೆ ಮಾಡುತ್ತದೆ. 

ಇದನ್ನೂ ಓದಿ :  Akshaya Tritiya 2022: ಇತಿಹಾಸ, ಪೂಜಾ ವಿಧಾನ, ಚಿನ್ನ ಖರೀದಿಸುವ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮತ್ತು ನಂಬಿಕೆ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News