ಬೆಂಗಳೂರು: ಸಾಮಾನ್ಯವಾಗಿ ಆಹಾರ ಬೇಗ ಹಾಳಾಗದೇ ಇರಲಿ ಎಂದು ಫ್ರಿಡ್ಜ್‌ನಲ್ಲಿ ಅದನ್ನು ಸಂಗ್ರಹಿಸಲಾಗುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ರೆಫ್ರಿಜರೇಟರ್ ಅತ್ಯಗತ್ಯ. ಯಾವುದೇ ಋತುಮಾನವಿರಲಿ ಕೆಲವು ಆಹಾರಗಳನ್ನು ಫ್ರಿಜ್‌ನಲ್ಲಿಟ್ಟು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
ವೈದ್ಯರ ಪ್ರಕಾರ, ಕೆಲವು ಆಹಾರಗಳನ್ನು ಫ್ರಿಜ್‌ನಲ್ಲಿಟ್ಟು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಗುತವೆ. ಏಕೆಂದರೆ, ಫ್ರಿಜ್‌ನಲ್ಲಿಟ್ಟ ಆಹಾರಗಳ ರುಚಿ ಮತ್ತು ಗುಣಮಟ್ಟ ಎರಡೂ ಕೂಡ ಹಾಳಾಗುತ್ತವೆ. ಹಾಗಿದ್ದರೆ ಯಾವ ಆಹಾರಗಳನ್ನು ಫ್ರಿಜ್‌ನಲ್ಲಿಟ್ಟು ಸೇವಿಸಬಾರದು ಎಂದು ತಿಳಿಯೋಣ...
ಇದನ್ನೂ ಓದಿ- ನಿಮ್ಮನ್ನು ಶೀತ-ಕೆಮ್ಮಿನಿಂದ ದೂರವಿರಿಸುತ್ತೆ ಈ 5 ಹಣ್ಣುಗಳು
ಈ ಆಹಾರಗಳನ್ನು ಫ್ರಿಜ್‌ನಲ್ಲಿಟ್ಟು ತಿಂದರೆ ಆರೋಗ್ಯಕ್ಕೆ ಹಾನಿಕಾರಕ:
* ಬಾಳೆ ಹಣ್ಣು:
ಆರೋಗ್ಯ ತಜ್ಞರ ಪ್ರಕಾರ, ಅಪ್ಪಿತಪ್ಪಿಯೂ ಕೂಡ ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಏಕೆಂದರೆ, ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ಬಹು ಬೇಗ ಹಾಳಾಗುತ್ತದೆ. ಜೊತೆಗೆ ಅದರ ಬಣ್ಣವೂ ಬದಲಾಗುತ್ತದೆ. ಇದನ್ನು ಸೇವಿಸುವುದರಿಂದ ಆರೋಗ್ಯವೂ ಕೆಡುತ್ತದೆ.
* ಆಲೂಗಡ್ಡೆ:
ಕೆಲವರು ಆಲೂಗಡ್ಡೆಯೂ ಒಂದು ತರಕಾರಿಯೇ ಅಲ್ಲವೇ ಎಂದು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಆದರೆ, ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ. ಇದನ್ನು ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಡಯಾಬಿಟಿಸ್ ಸಮಸ್ಯೆ ಇರುವವರು ಮಿಸ್ ಆಗಿಯೂ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟ ಆಲೂಗಡ್ಡೆಯನ್ನು ಸೇವಿಸಲೇಬಾರದು.
ಇದನ್ನೂ ಓದಿ- Weight Loss Exercise: ತೂಕ ಇಳಿಸಲು ಯಾವ ಸಮಯದಲ್ಲಿ ವ್ಯಾಯಾಮ ಮಾಡಬೇಕು?
* ಜೇನು ತುಪ್ಪ:
ಜೇನುತುಪ್ಪವನ್ನು ಫ್ರಿಜ್‌ನಲ್ಲಿ ಇಡುವುದರಿಂದ ಅದರ ಸ್ವಾಭಾವಿಕ ರುಚಿ ಹಾಳಾಗುತ್ತದೆ. ಜೊತೆಗೆ ಇದನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಜೇನುತುಪ್ಪವನ್ನು ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಮಾತ್ರ ಆಧರಿಸಿದೆ. ಇದನ್ನು Zee ನ್ಯೂಸ್ ಕನ್ನಡ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.