ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಳಲ್ಲಿ ಹೋಳಿ ಹಬ್ಬವೂ ಒಂದು. ಈಗಾಗಲೇ ನಾಡಿನೆಲ್ಲೆಡೆ ಹೋಳಿ ಹಬ್ಬದ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ. ಇದೇ ತಿಂಗಳ 8 ರಂದು ಬಣ್ಣದ ಹಬ್ಬವನ್ನು ಅಂತ್ಯಂತ ಅರ್ಥಪೂರ್ಣವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಜನರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಅದರಂತೆ ನಮ್ಮ ದೇಶದಲ್ಲಿ ಹೋಳಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಹಾಗೂ ಸಂಪ್ರದಾಯ ಬದ್ದವಾಗಿ ಆಚರಿಸುವ ಸ್ಥಳಗಳಿವೆ. ಅವು ಯಾವುವು ಅಂತ ನಾವು ಹೇಳ್ತೀವಿ ನೋಡಿ.
ಭಾರತವು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ನಾಡು. ಇಲ್ಲಿ ಪ್ರತಿಯೊಂದು ಆಚರಣೆ, ಅಚಾರ, ಪದ್ದತಿಗಳಿಗೆ ತಮ್ಮದೆಯಾದ ಮಹತ್ವವಿದೆ. ಸದ್ಯ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲು ರಾಷ್ಟ್ರದಾದ್ಯಂತ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಎಲ್ಲಾ ಕಡೆ ಹೋಳಿ ಹಬ್ಬವನ್ನು ಸ್ವಾಗತಿಸಲು ಯುವಪಡೆ ಸಿದ್ದತೆ ನಡೆಸುತ್ತಿದೆ. ಈ ವರ್ಷ ಮಾರ್ಚ್ 8 ಬಣ್ಣದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಫಾಲ್ಗುಣ ಮಾಸದ ಪೂರ್ಣಿಮಾ (ಹುಣ್ಣಿಮೆಯ ದಿನ) ಸಂಜೆ ಪ್ರಾರಂಭವಾಗುತ್ತದೆ. ಹೋಳಿಯನ್ನು ಭಾರತದ ವಿವಿಧ ಭಾಗಗಳಲ್ಲಿ 'ವಸಂತ ಹಬ್ಬ' ಎಂದೂ ಸಹ ಆಚರಿಸಲಾಗುತ್ತದೆ.
ಬಣ್ಣಗಳಿಂದ ಕೂಡಿದ ಹೋಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಸಂತೋಷ ಮತ್ತು ಉಲ್ಲಾಸದಿಂದ ಬಣ್ಣಗಳ ಜೊತೆ ಆಡುವುದರ ಜೊತೆಗೆ ಮಂತ್ರಗಳನ್ನು ಪಠಿಸುವ ವಿಷಯದಲ್ಲಿ ಈ ದಿನವು ತುಂಬಾ ವಿಶೇಷವಾಗಿದೆ. ರಾಶಿಚಕ್ರದ ಪ್ರಕಾರ ಮಂತ್ರಗಳ ಪಠಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.