ಬೆಂಗಳೂರು : ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬ. ಸಂಕ್ರಾಂತಿ ಅಂದರೆ ಸೂರ್ಯ ತನ್ನ ಪಥಬದಲಿಸುವ ಕಾಲ. ಇದು ಜಾತಕ ಫಲ, ರಾಶಿ ಫಲಗಳ ಮೇಲೂ ಪರಿಣಾಮ ಬೀರುತ್ತದೆ. ಸಂಕ್ರಾಂತಿ ಹಬ್ಬದ ನಂತರ ಈ 5 ರಾಶಿಗೆ ಶುಭಯೋಗ ಆರಂಭವಾಗಲಿದೆ. ವರ್ಷಪೂರ್ತಿ ಈ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ವೃದ್ದಿಯಾಗಿ ಅಖಂಡ ಜಯವಾಗಲಿದೆ.
ಮೇಷ ರಾಶಿ:
ನಿಮ್ಮ ಕೆಲಸ ವ್ಯಾಪಾರದಲ್ಲಿ ಆದಾಯ ಹೆಚ್ಚಿರುತ್ತದೆ. ವೃತ್ತಿಜೀವನದಲ್ಲಿ ಏಳಿಗೆ ಕಾಣಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ವೈವಾಹಿಕ ಜೀವನಕ್ಕೆ ನೀವು ಹೆಚ್ಚು ಸಮಯ ಮೀಸಲಿಡಬೇಕಾಗುತ್ತದೆ. ಕುಟುಂಬದ ಖರ್ಚು ಹೆಚ್ಚಾಗಿ ಕಂಡುಬರುತ್ತದೆ. ಧನ ವ್ಯಯ ಉಂಟಾಗಬಹುದು. ವಿದ್ಯಾರ್ಥಿಗಳಲ್ಲಿ ಮನಸ್ಸಿನ ಉಲ್ಲಾಸ ಕಾಣಬಹುದು.
ವೃಷಭ ರಾಶಿ:
ವಿದ್ಯಾರ್ಥಿಗಳಿಗೆ ಗೆಳೆಯರ ಸಹವಾಸದಿಂದ ಓದಿನಲ್ಲಿ ಗಮನ ಹರಿಯುವುದಿಲ್ಲ. ಉದ್ಯೋಗಸ್ಥರಿಗೆ ಕೆಲಸದಲ್ಲಿ ಹಣಕಾಸಿನ ಲಾಭ ಮತ್ತು ಶತ್ರುಗಳ ಕಾಟ ಎರಡೂ ಇರುತ್ತದೆ. ಕುಟುಂಬದ ವೈ ಮನಸ್ಸುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ತಾಳ್ಮೆಯಿಂದ ವಿಚಾರ ಮಾಡಿ ನಿಮಗೆ ಒಳ್ಳೆಯ ಪ್ರತಿಫಲ ಬರಲಿದೆ. ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತದೆ.
ಮಿಥುನ ರಾಶಿ:
ವೈವಾಹಿಕ ಜೀವನದಲ್ಲಿ ಸ್ವಲ್ಪ ಜಗಳ ಬಂದರು ಸಾಮಾಜಿಕವಾಗಿ ಹಣಕಾಸಿನ ವಿಷಯದಲ್ಲಿ ನೀವು ಪ್ರಬಲತೆಯನ್ನು ಸಾಧಿಸುವಿರಿ. ಉದ್ಯೋಗಸ್ಥರಿಗೆ ಎಲ್ಲಿಲ್ಲದ ಅವಕಾಶಗಳು ಒಲಿದು ಬರಲಿವೆ. ನೀವು ಊಹಿಸದ ಆರ್ಥಿಕ ಪ್ರಯೋಜನಗಳ ಜೊತೆ ಹೊಸ ಉತ್ತೇಜನದಿಂದ ನಿಮ್ಮ ಮನಸ್ಸು ಉಲ್ಲಾಸಭರಿತವಾಗಿರುತ್ತದೆ. ಕುಟುಂಬದಲ್ಲಿ ಬೇಸರವಿರುತ್ತದೆ.
ಇದನ್ನೂ ಓದಿ: Makar Sankranti 2021: ಸುಖ-ಸಮೃದ್ಧಿಗಾಗಿ ಈ 5 ವಸ್ತುಗಳ ದಾನ ಮಾಡಿ
ಕರ್ಕಾಟಕ ರಾಶಿ :
ಉದ್ಯೋಗದಲ್ಲಿ ನೀವು ಅನುಭವಿಸುತ್ತಿರುವ ಕಷ್ಟಗಳಿಂದ ಹಂತಹಂತವಾಗಿ ಹೊರಬರುತ್ತೀರಿ. ಕುಟುಂಬದ ವಿಷಯಗಳಲ್ಲಿ ಅನುಭವಿಸಿದ ನೋವುಗಳು ದೂರವಾಗುತ್ತವೆ. ಆರೋಗ್ಯದ ಬಗ್ಗೆ ಜಾಗೂರುಕತೆಯಿಂದ ಇರಬೇಕು. ಅನಿರೀಕ್ಷಿತ ಪ್ರಯಾಣ ಕಿರಿಕಿರಿ ಉಂಟು ಮಾಡುತ್ತದೆ. ಧನಲಾಭವಾಗುವ ಲಕ್ಷಣವಿದೆ. ಕೈಗೊಂಡ ಕಾರ್ಯಗಳು ಸಂಪೂರ್ಣವಾಗುತ್ತದೆ.
ಸಿಂಹ ರಾಶಿ :
ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ಸಂತಸವಿರುತ್ತದೆ. ಕೆಲಸ ಕಾರ್ಯದಲ್ಲಿ ನಿರೀಕ್ಷಿತವಾಗಿ ಆದಾಯವು ಸಕಾಲದಲ್ಲಿ ಪ್ರವಹಿಸಿ ನೀವು ಸಂತುಷ್ಟರಾಗುವಿರಿ. ಅನಾರೋಗ್ಯ ಚೋರಭಯ ನಿಮ್ಮನ್ನು ಕಾಡುತ್ತದೆ. ಮನೆಯಲ್ಲಿ ಶುಭಕಾರ್ಯಗಳ ಕುರಿತು ಹೆಚ್ಚಾಗಿ ಚರ್ಚೆ ನಡೆಯಬಹುದು. ಶತ್ರುಗಳು ಸಿಗುತ್ತಾರೆ. ಮನೆ ಕಟ್ಟುವ ಭಾಗ್ಯ ಇದೆ.
ಕನ್ಯಾ ರಾಶಿ:
ಉದ್ಯೋಗದಲ್ಲಿ ಅಂದುಕೊಂಡಂತಹ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ದೇಹಾರೋಗ್ಯ, ಪ್ರಯಾಣದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕುಟುಂಬದಲ್ಲಿ ಮಾಡದೇ ಇರುವ ತಪ್ಪಿಗೆ ಅಪಮಾನವಾಗುತ್ತದೆ. ಅದೃಷ್ಟ ಬಲಕ್ಕಿಂತಲೂ ಸ್ವಯಂ ಪ್ರಯತ್ನ ನಡೆಸಬಹುದು. ವಿವಾಹವಾಗುವವರಿಗೆ ಬಹು ದಿನಗಳ ಯೋಚಿತ ಕಾರ್ಯಗಳು ಕೈಗೂಡುವುದು.
ತುಲಾ ರಾಶಿ:
ಉದ್ಯೋಗದಲ್ಲಿ ನೀವು ಮೊದಲೇ ಪ್ರಯತ್ನಿಸಿದ ಕೆಲಸಗಳು ಒಂದೊಂದಾಗಿ ಪೂರ್ಣ ಗೊಂಡು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುವಿರಿ. ಕುಟುಂಬದ ಎಲ್ಲಾ ಲೆಕ್ಕಾಚಾರ ಏರುಪೇರು ಆಗಬಹುದು. ದಾಂಪತ್ಯದಲ್ಲಿ ಮಡದಿಯೊಂದಿಗೆ ಸುಖ-ಸಂತೋಷದಿಂದ ಇರಬಹುದು. ಕಂಕಣ ಭಾಗ್ಯ ಕೂಡಿ ವಿವಾಹ ಕಾರ್ಯಕ್ರಮ ಜರುಗುವ ಸಮಯ ಬರಬಹುದು. ಹಣಕಾಸು ಸಮಸ್ಯೆಗಳು ಕಾಡಿಸುತ್ತದೆ.
ಇದನ್ನೂ ಓದಿ: Sankranthi : ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಯಾಕೆ ಬೀರುತ್ತಾರೆ ಗೊತ್ತಾ..?
ವೃಶ್ಚಿಕ ರಾಶಿ:
ಉದ್ಯೋಗಸ್ಥರು ಯಾವುದೇ ವಿವೇಚನೆ ಇಲ್ಲದೆ ಅತಿಯಾದ ಆತ್ಮವಿಶ್ವಾಸ ಹೊಂದುವವರು ಕಷ್ಟ ಪಡಬೇಕಾಗುತ್ತದೆ. ವಿದ್ಯಾಭ್ಯಾಸ ಕಲಿಕೆಯಲ್ಲಿ ಹೆಚ್ಚಿನ ಶ್ರಮ ಪ್ರತಿಫಲ ಕಾಣಿಸಿಕೊಳ್ಳುತ್ತದೆ. ಆರೋಗ್ಯದ ತೊಂದರೆಗಳು ಆಗಬಹುದು. ಶತ್ರುಗಳ ಪೀಡೆ ಇರುವಂತೆ ಕಾಣಿಸುತ್ತವೆ. ಮಕ್ಕಳ ವಿಷಯದಲ್ಲಿ ಹಿರಿಯರಿಂದ ಮನಸ್ತಾಪ ಉಂಟಾಗುತ್ತದೆ. ಪ್ರೇಮಿಗಳಲ್ಲಿ ಆಂತರಿಕ ವೈ ಮನಸ್ಸು ಇರುತ್ತದೆ.
ಧನಸ್ಸು ರಾಶಿ:
ಆರೋಗ್ಯ ಭಾಗದಲ್ಲಿ ಗ್ರಹಗಳ ದುಃಸ್ಥಿತಿಯಿಂದಾಗಿ ಸಂಕಷ್ಟದ ಪರಿಸ್ಥಿತಿ ಎದುರಾಗಬಹುದು. ಉದ್ಯೋಗಿಗಳಿಗೆ ವ್ಯಾಪಾರಿಗಳಿಗೆ ಹೆಚ್ಚು ಕೆಲಸ ಹೆಚ್ಚು ಲಾಭ ಒದಗಿ ಬರುತ್ತದೆ. ಕುಟುಂಬದವರಿಗೆ ಆರ್ಥಿಕವಾಗಿ ಸಹಕರಿಸಲು ಹಲವು ತಿರುಗಾಟಗಳು ನಡೆಸಬೇಕಾಗುತ್ತದೆ. ಮದುವೆ ವಿಷಯದಲ್ಲಿ ಹಲವು ಜನರು ಬಂದು ಹೋದರು ಬೇಗನೆ ಕೈಗೂಡುವುದಿಲ್ಲ. ವಿದ್ಯಾಭ್ಯಾಸ ನೆಮ್ಮದಿ ಸಿಗುತ್ತದೆ. ಹಣಕಾಸಿನಲ್ಲಿ ಉತ್ತಮ ಲಾಭವಿದೆ.
ಮಕರ ರಾಶಿ :
ಉದ್ಯೋಗದಲ್ಲಿ ನಿಮ್ಮ ಉನ್ನತಿಯನ್ನು ಕಂಡು ಅಸೂಯೆ ಪಡುತ್ತಾರೆ. ಕುಟುಂಬದಲ್ಲಿ ಕೆಲವೊಮ್ಮೆ ಮಾತಿನಿಂದ ನಿಷ್ಠುರಗಳು ಸಂಭವಿಸುತ್ತದೆ. ವಿದ್ಯಾಭ್ಯಾಸ ಕಲಿಯಲು ನಿರಾಯಾಸವಾಗಿ ಆಸಕ್ತಿ ಒದಗಿ ಬರುತ್ತದೆ. ವಿವಾಹದಲ್ಲಿ ಅಂದುಕೊಂಡಂತೆ ಸಂಬಂಧಗಳು ಸಿಗುವುದಿಲ್ಲ. ಹಣಕಾಸಿನಲ್ಲಿ ವಿಶೇಷ ಫಲಗಳು ಇರುತ್ತದೆ. ತಾಳ್ಮೆಯಿಂದ ಇರಬೇಕು.
ಕುಂಭ ರಾಶಿ:
ವಿದ್ಯಾಭ್ಯಾಸದಲ್ಲಿ ಉತ್ತಮ ಜವಾಬ್ದಾರಿ ಕಾಣಿಸಿಕೊಳ್ಳುತ್ತದೆ. ಮನೆ ಕಟ್ಟುವವರಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಹೆಚ್ಚು. ಪ್ರೀತಿ ಮಾಡುವವರು ಅಗಲುವಿಕೆಯಿಂದ ವಿಚಲಿತರಾಗುವ ಸಂದರ್ಭ ಬರುವುದು. ಮನೆಯಲ್ಲಿ ಪತ್ನಿ ಪುತ್ರಾದಿಗಳ ಸಹಕಾರದಿಂದ ಸಂಸಾರ ಸುಖಮಯವಾಗಿರುತ್ತದೆ. ಉದ್ಯೋಗಿಗಳು ಶುಭದಾಯಕವಾಗಿ ಎಲ್ಲಾ ಕೆಲಸ ಕಾರ್ಯಗಳು ನಿರ್ವಹಿಸುತ್ತಾರೆ. ಬಹಳ ಆಯಾಸದಿಂದ ಆರೋಗ್ಯದಲ್ಲಿ ನಿಶ್ಯಕ್ತಿ ಕಾಣಿಸುತ್ತದೆ ಮದುವೆ ಕಾರ್ಯಗಳು ವಿಳಂಬ. ಧನಕನಕ ಉತ್ತಮವಾಗಿರುತ್ತದೆ.
ಮೀನಾ ರಾಶಿ:
ಉದ್ಯೋಗದಲ್ಲಿ ನೀವು ಎಣಿಸಿಕೊಂಡ ಹಳೆಯ ಬಾಕಿ ಕೆಲಸಗಳು ಅತಿ ಶೀಘ್ರದಲ್ಲಿ ನೆರವೇರುವವು. ಬಂಧುಗಳಲ್ಲಿ ನೆರೆಹೊರೆಯವರಲ್ಲಿ ಉತ್ತಮ ಹೆಸರು ಪಡೆಯುವಿರಿ. ಮನೆಯಲ್ಲಿ ಶುಭ ವಾತವರಣವಿರುತ್ತದೆ. ಬರಬೇಕಾದ ಬಾಕಿ ಹಣಕಾಸು ವಾಪಸ್ಸು ಬರುವಂತಹ ಸೂಚನೆಗಳು ಕಂಡುಬರುತ್ತದೆ. ವಿವಾಹ ವಿಚಾರಗಳು ಮುಂದೂಡಲ್ಪಡುತ್ತದೆ.
ಇದನ್ನೂ ಓದಿ: Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳು
ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.