ನೀವು ರಾತ್ರಿಯಿಡೀ ಜೋರಾಗಿ ಗೊರಕೆ ಹೊಡೆಯುತ್ತೀರಾ? ನಿಲ್ಲಿಸಲು ಹೀಗೆ ಮಾಡಿ

ಗೊರಕೆ ಸಮಸ್ಯೆ ಹೆಚ್ಚಾಗಿ ವಯಸ್ಸಾದವರಲ್ಲಿ, ದಪ್ಪಗೆ ಇರುವವರಲ್ಲಿ ಕಂಡು ಬರುತ್ತದೆ. ಇನ್ನು ಅಧಿಕ ರಕ್ತದೊತ್ತಡ ಇರುವವರು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಾರೆ.

Written by - Puttaraj K Alur | Last Updated : Jan 26, 2022, 02:57 PM IST
  • ಗೊರಕೆ ಸಮಸ್ಯೆ ಹೆಚ್ಚಾಗಿ ವಯಸ್ಸಾದವರಲ್ಲಿ, ದಪ್ಪಗೆ ಇರುವವರಲ್ಲಿ ಕಂಡು ಬರುತ್ತದೆ
  • ಅಧಿಕ ರಕ್ತದೊತ್ತಡ ಇರುವವರು ನಿದ್ದೆಯಲ್ಲಿ ಜೋರಾಗಿ ಗೊರಕೆ ಹೊಡೆಯುತ್ತಾರೆ
  • ಗಾಳಿಯ ಚಲನೆಗೆ ಅಡಚಣೆ ಉಂಟಾದಾಗ ಗೊರಕೆ ಶಬ್ದವು ಉಂಟಾಗುತ್ತದೆ
ನೀವು ರಾತ್ರಿಯಿಡೀ ಜೋರಾಗಿ ಗೊರಕೆ ಹೊಡೆಯುತ್ತೀರಾ? ನಿಲ್ಲಿಸಲು ಹೀಗೆ ಮಾಡಿ title=
ಗೊರಕೆ ನಿಲ್ಲಿಸಲು ಈ ಕೆಲಸ ಮಾಡಿ

ನವದೆಹಲಿ: ಗೊರಕೆ(Snoring Problem)ಯ ಕಾರಣ ಇನ್ನೂ ಖಚಿತವಾಗಿ ತಿಳಿದಿಲ್ಲ, ಆದರೆ ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ನಾವು ಈ ರೀತಿಯ ಕಾಯಿಲೆಯಿಂದ ಮುಕ್ತರಾಗಬಹುದು. ಹೆಚ್ಚಿನವರು ರಾತ್ರಿ ಮಲಗುವಾಗ ಜೋರಾಗಿ ಗೊರಕೆ ಹೊಡೆಯುತ್ತಾರೆ. ಇದರಿಂದ ನಿಮ್ಮ ನಿದ್ದೆ ಕೆಡುವುದಲ್ಲದೆ ನಿಮ್ಮ ಜೊತೆ ಮಲಗುವವರ ನಿದ್ದೆಯೂ ಹಾಳಾಗುತ್ತದೆ. ಅಷ್ಟೇ ಅಲ್ಲ ಗೊರಕೆಯಿಂದ ಹಲವರ ಮದುವೆಯೂ ಮುರಿದು ಬಿದ್ದ ಘಟನೆಗಳು ನಡೆದಿವೆ.

ನಾವು ಏಕೆ ಗೊರಕೆ ಹೊಡೆಯುತ್ತೇವೆ?

ಗೊರಕೆ ಸಮಸ್ಯೆ(Snoring) ಹೆಚ್ಚಾಗಿ ವಯಸ್ಸಾದವರಲ್ಲಿ, ದಪ್ಪಗೆ ಇರುವವರಲ್ಲಿ ಕಂಡು ಬರುತ್ತದೆ. ಇನ್ನು ಅಧಿಕ ರಕ್ತದೊತ್ತಡ ಇರುವವರು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಾರೆ. ಗೊರಕೆ ಶಬ್ದವು ಉಸಿರಾಟದ ಕ್ರಿಯೆಯಲ್ಲಿ ಆಗುವ ಕಂಪನದಿಂದ ಉಂಟಾಗುವುದು. ಗಾಳಿಯ ಚಲನೆಗೆ ಅಡಚಣೆ ಉಂಟಾದಾಗ ಗೊರಕೆ ಶಬ್ದ ಉಂಟಾಗುವುದು. ಗಂಟಲಿನ ಸ್ನಾಯುಗಳ ಸೆಳೆತದಿಂದ, ಮೂಗಿನ ಹೊಳ್ಳೆಗಳಲ್ಲಿ ಉಂಟಾಗುವ ಅಡಚಣೆ, ದಪ್ಪಗಾದಾಗ ಗಂಟಲಿನ ಭಾಗದಲ್ಲಿ ಕೊಬ್ಬಿನಂಶ ಶೇಖರವಾಗುತ್ತದೆ, ಆಗ ಉಸಿರಾಟದ ಗಾಳಿಯ ಚಲನೆ ನಿಯಮಿತವಾಗಿರುವುದಿಲ್ಲ. ಇದರಿಂದಾಗಿ ಗೊರಕೆ ಉಂಟಾಗುತ್ತದೆ.

ಇದನ್ನೂ ಓದಿ: Dream interpretation: ಇಂತಹ ಕನಸುಗಳು ಧನ ಲಾಭದ ಸಂಕೇತಗಳನ್ನು ನೀಡುತ್ತವೆ

ಗೊರಕೆ ನಿಲ್ಲಿಸಲು ಈ ಕೆಲಸ ಮಾಡಿ

  • ಮೊದಲನೆಯದಾಗಿ ನೀವು ಮದ್ಯದಿಂದ ದೂರವಿರಬೇಕು. ಏಕೆಂದರೆ ಇದನ್ನು ಕುಡಿಯುವುದರಿಂದ ನಿದ್ರೆಯ ಸಮಯದಲ್ಲಿ ಸ್ನಾಯುಗಳು ಹೆಚ್ಚು ಸಡಿಲಗೊಳ್ಳುತ್ತವೆ, ಇದರಿಂದಾಗಿ ಶ್ವಾಸನಾಳಗಳು ಕಿರಿದಾಗುತ್ತವೆ. ಮಲಗುವ ಮುನ್ನ ಆದಷ್ಟು ಮದ್ಯಪಾನ ಮಾಡದಿರಲು ಪ್ರಯತ್ನಿಸಿ.
  • ಇದಲ್ಲದೇ ಮಲಗುವಾಗ ಒಂದು ಕಡೆ ಮಲಗಬೇಕು. ವರದಿಯ ಪ್ರಕಾರ ನೀವು ಸೊಂಟದ ಮೇಲೆ ನೇರವಾಗಿ ಮಲಗಿದಾಗ ನಿಮ್ಮ ನಾಲಿಗೆ ಮತ್ತು ಗಲ್ಲದ ಅಡಿಯ ಕೊಬ್ಬಿನ ಅಂಗಾಂಶ ಸಮಸ್ಯೆಯನ್ನುಂಟು ಮಾಡುತ್ತದೆ. ಇದು ನಿಮ್ಮ ಶ್ವಾಸನಾಳದಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಒಂದು ಬದಿಯಲ್ಲಿ ಮಲಗಲು ಸಲಹೆ ನೀಡಲಾಗುತ್ತದೆ.
  • ಗೊರಕೆಯನ್ನು ನಿಲ್ಲಿಸಲು(Snoring Stop Tips) ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳಿವೆ. ನೀವು ಮೂಗಿನ ಬ್ಯಾಂಡೇಜ್ ಅನ್ನು ಸಹ ತೆಗೆದುಕೊಳ್ಳಬಹುದು. ಆದರೆ ಇದು ಪರಿಣಾಮಕಾರಿ ಅಥವಾ ಇಲ್ಲವೇ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಬ್ಯಾಂಡೇಜ್‌ಗಳ ಹಿಂದಿನ ಕಲ್ಪನೆಯು ನಿಮ್ಮ ಮೂಗಿನ ಹೊಳ್ಳೆಗಳನ್ನು ತೆರೆದಿರುತ್ತದೆ. ನಿಮ್ಮ ಮೂಗಿನ ಮೂಲಕ ಗೊರಕೆ ಹೊಡೆಯುವಾಗ ಇದು ಕೆಲಸ ಮಾಡುತ್ತದೆ.

ಇದನ್ನೂ ಓದಿ: ಶನಿಯ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆ, 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

  • ನಿಮ್ಮ ಮೂಗನ್ನು ಸ್ವಚ್ಛವಾಗಿಡಿ, ಏಕೆಂದರೆ ನಿಮಗೆ ಶೀತ ಬಂದಾಗ ನಿಮ್ಮ ಮೂಗು ಮುಚ್ಚಿಹೋಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಗೊರಕೆ(How To Stop Snoring)ಯ ಸಾಧ್ಯತೆಗಳು ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಮಲಗುವ ಮೊದಲು ನಿಮ್ಮ ಮೂಗನ್ನು ಸ್ವಚ್ಛವಾಗಿರಿಸಿಕೊಳ್ಳಿ.
  • ..ಗೊರಕೆಗೆ ದೊಡ್ಡ ಕಾರಣವೆಂದರೆ ತೂಕ. ನೀವು ಅಧಿಕ ತೂಕ ಹೊಂದಿದ್ದರೆ ನಿಮ್ಮ ಗಲ್ಲದ ಬಳಿ ನೀವು ಹೆಚ್ಚು ಕೊಬ್ಬಿನ ಅಂಗಾಂಶವನ್ನು ಹೊಂದಿರಬಹುದು. ಇದು ವಾಯುಮಾರ್ಗವನ್ನು ಸಂಕುಚಿತಗೊಳಿಸುತ್ತದೆ ಮತ್ತು ಗಾಳಿಯ ಚಲನೆಯ ಹಾದಿಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News