Hair Care Tips : ಈ ಸಮಸ್ಯೆ ಇದ್ದವರು ಕೂದಲಿಗೆ ಎಣ್ಣೆ ಹಚ್ಚಲೇ ಬಾರದು ತಿಳಿದುಕೊಳ್ಳಿ ..!

Do Not Apply Hair Oil In These Situations: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವುದು ಒಳ್ಳೆಯದು. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಇದು  ಸೂಕ್ತ ಅಲ್ಲ. ಕೆಲವೊಂದು ಸಮಸ್ಯೆಗಳ ಸಂದರ್ಭದಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದನ್ನು ನಿಲ್ಲಿಸಬೇಕು. 

Written by - Ranjitha R K | Last Updated : Aug 22, 2022, 12:24 PM IST
  • ಕೂದಲಿಗೆ ಎಣ್ಣೆ ಹಚ್ಚುವುದು ಒಳ್ಳೆಯದು
  • ಆದರೆ ಕೆಲ ಸಂದರ್ಭಗಳಲ್ಲಿ ಇದು ಅಪಾಯಕಾರಿಯಾಗಬಹುದು
  • ಈ ಸಮಸ್ಯೆಗಳಿದ್ದರೆ ಎಣ್ಣೆ ಹಚ್ಚುವುದು ಒಳ್ಳೆಯದಲ್ಲ
Hair Care Tips : ಈ ಸಮಸ್ಯೆ ಇದ್ದವರು ಕೂದಲಿಗೆ ಎಣ್ಣೆ ಹಚ್ಚಲೇ ಬಾರದು ತಿಳಿದುಕೊಳ್ಳಿ ..! title=
hair care tips (file photo)

Do Not Apply Hair Oil In These Situations: ಕೂದಲು ಮತ್ತು  ಕೂದಲ ಬುಡಕ್ಕೆ ಎಣ್ಣೆ ಹಚ್ಚುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಕೂದಲು ದಪ್ಪವಾಗಿರುತ್ತದೆ ಮತ್ತು ಬಲಿಷ್ಠವಾಗಿರುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ, ಕೂದಲಿಗೆ ಎಣ್ಣೆಯನ್ನು ಹಚ್ಚಬಾರದು. ಏಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿಗೆ ಹಾನಿಯುಂಟಾಗುತ್ತದೆ.

ಈ ಸಮಯದಲ್ಲಿ ಕೂದಲಿಗೆ ಎಣ್ಣೆ ಹಚ್ಚಬೇಡಿ: 
ಹಣೆಯ ಮೇಲೆ ಮೊಡವೆಗಳಿದ್ದರೆ : 
ಒಂದು ವೇಳೆ ಹಣೆಯ ಮೇಲೆ ಮೊಡವೆಗಳಿದ್ದರೆ ತಲೆಗೆ ಎಣ್ಣೆಯನ್ನು ಹಚ್ಚುವ ತಪ್ಪನ್ನು ಎಂದಿಗೂ ಮಾಡಬೇಡಿ. ಎಣ್ಣೆಯನ್ನು ಹಚ್ಚುವುದರಿಂದ ಮೊಡವೆಗಳ ಸಂಖ್ಯೆ ಹೆಚ್ಚಾಗಬಹುದು. ನಿಮ್ಮ ನೆತ್ತಿ ಎಣ್ಣೆಯುಕ್ತವಾಗಿದ್ದರೆ, ಎಣ್ಣೆ  ಮುಖದ ಮೇಲೆ ಬರಬಹುದು ಮತ್ತು ಮೊಡವೆಗಳ ಜೊತೆಗೆ ಇತರ ಚರ್ಮ ಸಂಬಂಧಿತ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಈ ಸಮಸ್ಯೆಯನ್ನು ತಪ್ಪಿಸಲು, ಶಾಂಪೂ ಮತ್ತು ನೀರಿನ ಸಹಾಯದಿಂದ ಕಾಲಕಾಲಕ್ಕೆ ಕೂದಲನ್ನು ಸ್ವಚ್ಛಗೊಳಿಸಿ.  ಹೀಗೆ ಮಾಡುವುದರಿಂದ ಹಣೆ ಮತ್ತು ಮುಖದ ಮೇಲೆ ಹೆಚ್ಚುವರಿ ಎಣ್ಣೆ ಬರುವುದಿಲ್ಲ.

ಇದನ್ನೂ ಓದಿ : Healthy Diet Plan: ಹೃದಯ ಸಂಬಂಧಿ ಕಾಯಿಲೆಗಳಿಗೆ ಮೂಲ ಕಾರಣ ಕೆಟ್ಟ ಕೊಲೆಸ್ಟ್ರಾಲ್, ಈ ರೀತಿ ನಿಯಂತ್ರಿಸಿ

ಎಣ್ಣೆಯುಕ್ತ ನೆತ್ತಿ  : 
ನಿಮ್ಮ ನೆತ್ತಿಯು ಈಗಾಗಲೇ ಎಣ್ಣೆಯುಕ್ತವಾಗಿದ್ದರೆ, ಎಣ್ಣೆ ಹಚ್ಚುವುದನ್ನು ತಪ್ಪಿಸಬೇಕು. ನೆತ್ತಿಯ ಮೇಲೆ ಹೆಚ್ಚು ಎಣ್ಣೆ  ಹಚ್ಚುವುದು ಒಳ್ಳೆಯದಲ್ಲ. ಇದರಿಂದಾಗಿ ನೆತ್ತಿಯಲ್ಲಿ ತುರಿಕೆ ಸಮಸ್ಯೆ ಉಂಟಾಗಬಹುದು. ಏಕೆಂದರೆ ಎಣ್ಣೆಯುಕ್ತ ನೆತ್ತಿಯು ಕೂದಲು ಉದುರುವ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ನೆತ್ತಿಯ ಮೇಲೆ ಎಣ್ಣೆ ಇದ್ದರೆ, ಪ್ರತಿದಿನ ಎಣ್ಣೆ ಹಚ್ಚುವ ಬದಲು ವಾರಕ್ಕೆ ಒಮ್ಮೆ ಎಣ್ಣೆ ಹಚ್ಚಿದರೆ ಸಾಕಾಗುತ್ತದೆ. 

ತಲೆಹೊಟ್ಟು : 
ನಿಮ್ಮ ತಲೆಯಲ್ಲಿ ಡ್ಯಾಂಡ್ರಫ್ ಅಥವಾ ತಲೆಹೊಟ್ಟು ಇದ್ದರೆ, ಎಣ್ಣೆ ಹಚ್ಚುವ ತಪ್ಪನ್ನು ಮಾಡಲೇ ಬಾರದು. ತಲೆ ಹೊಟ್ಟು ಇದ್ದಾಗ ಮತ್ತೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ತಲೆಹೊಟ್ಟು ಹೆಚ್ಚಾಗುತ್ತದೆ. ಶಿಲೀಂಧ್ರಗಳ ಸೋಂಕಿನಿಂದ ತಲೆಹೊಟ್ಟು ಉಂಟಾಗುತ್ತದೆ. ಮತ್ತೊಂದೆಡೆ, ಬ್ಯಾಕ್ಟೀರಿಯಾದ ಪ್ರಮಾಣವು ಹೆಚ್ಚಾಗುತ್ತದೆ. ಇದಲ್ಲದೆ, ನೆತ್ತಿಯಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ಇದ್ದರೂ ಎಣ್ಣೆಯನ್ನು ಹಚ್ಚಬಾರದು. 

ಇದನ್ನೂ ಓದಿ : Seed For Better Health: ಉತ್ತಮ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿರಲಿ ಈ ವಿಶೇಷ ಬೀಜಗಳು

 

( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News