Maha Shivratri 2022: ಮಹಾಶಿವರಾತ್ರಿಯ ದಿನದಂದು ತಪ್ಪಿಯೂ ಶಿವಲಿಂಗಕ್ಕೆ ಈ ವಸ್ತುವನ್ನು ಅರ್ಪಿಸಬೇಡಿ

Maha Shivratri 2022 : ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿಗೆ ವಿಶೇಷ ಮಹತ್ವವಿದೆ. ಫಾಲ್ಗುಣ ಮಾಸದ ಮಹಾಶಿವರಾತ್ರಿಯ ದಿನ ಶಿವನಿಗೆ ವಿಶೇಷ ಪೂಜೆ  ಮಾಡಲಾಗುತ್ತದೆ.  

Written by - Zee Kannada News Desk | Last Updated : Feb 9, 2022, 04:26 PM IST
  • ಶಿವಲಿಂಗದ ಮೇಲೆ ಸಂಪಿಗೆ ಹೂವನ್ನು ಅರ್ಪಿಸಬಾರದು
  • ಶಿವಲಿಂಗದ ಮೇಲೆ ತುಳಸಿ ಎಲೆಗಳನ್ನು ಅರ್ಪಿಸಬೇಡಿ
  • ಮಾರ್ಚ್ 1 ರಂದು ಮಹಾಶಿವರಾತ್ರಿ ಆಚರಿಸಲಾಗುವುದು
 Maha Shivratri 2022: ಮಹಾಶಿವರಾತ್ರಿಯ ದಿನದಂದು  ತಪ್ಪಿಯೂ ಶಿವಲಿಂಗಕ್ಕೆ ಈ ವಸ್ತುವನ್ನು ಅರ್ಪಿಸಬೇಡಿ  title=
ಮಾರ್ಚ್ 1 ರಂದು ಮಹಾಶಿವರಾತ್ರಿ ಆಚರಿಸಲಾಗುವುದು (file photo)

ನವದೆಹಲಿ : Maha Shivratri 2022 : ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿಗೆ (Mahashivaratri) ವಿಶೇಷ ಮಹತ್ವವಿದೆ. ಅಂದಹಾಗೆ, ಪ್ರತಿ ತಿಂಗಳ ಚತುರ್ದಶಿ ದಿನವನ್ನು ಶಿವನಿಗೆ ಸಮರ್ಪಿಸಲಾಗುತ್ತದೆ. ಆದರೆ ಫಾಲ್ಗುಣ ಮಾಸದ ಮಹಾಶಿವರಾತ್ರಿಯ ದಿನ ಶಿವನಿಗೆ ವಿಶೇಷ ಪೂಜೆ (Shivaratri pooja) ಮಾಡಲಾಗುತ್ತದೆ. ಈ ವರ್ಷ ಮಹಾ ಶಿವರಾತ್ರಿಯನ್ನು  ಮಾರ್ಚ್ 01 ರಂದು ಆಚರಿಸಲಾಗುತ್ತದೆ. ಈ ದಿನ ರುದ್ರಾಭಿಷೇಕ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ. ಅಲ್ಲದೆ, ಶಿವಲಿಂಗದ ಮೇಲೆ ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ ರೋಗಗಳು ದೂರವಾಗುತ್ತವೆ ಎನ್ನುವುದು ನಂಬಿಕೆ.  ಆದರೆ  ಮಹಾಶಿವರಾತ್ರಿಯಂದು ಕೆಲವೊಂದು ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬಾರದು. 

ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಈ ವಸ್ತುವನ್ನು ಅರ್ಪಿಸಬೇಡಿ : 
ಮಹಾಶಿವರಾತ್ರಿಯ (Mahashivaratri) ದಿನದಂದು ಶಿವಲಿಂಗಕ್ಕೆ ತುಳಸಿ ಎಲೆಗಳನ್ನು ಅರ್ಪಿಸಬಾರದು. ಅಲ್ಲದೆ, ಈ ದಿನ ಶಿವಲಿಂಗಕ್ಕೆ (Shivalinga) ಪ್ಯಾಕೆಟ್ ಹಾಲನ್ನು ಹಾಕಬಾರದು. ಇನ್ನು ಶಿವಲಿಂಗದ ಮೇಲೆ ಸಂಪಿಗೆ ಹೂವನ್ನು ಅರ್ಪಿಸಬಾರದು.  ಇದರ ಹೊರತಾಗಿ ಶಿವಲಿಂಗಕ್ಕೆ ಒಡೆದ ಅಕ್ಕಿಯನ್ನು (Rice)ಕೂಡಾ  ಅರ್ಪಿಸಬಾರದು. ಅಷ್ಟು ಮಾತ್ರವಲ್ಲ, ಶಿವಲಿಂಗದ ಮೇಲೆ ಮುರಿದ ಬಿಲ್ವ ಪತ್ರೆ ಎಲೆಗಳನ್ನು ಅರ್ಪಿಸಬಾರದು. ಶಿವಲಿಂಗದ ಮೇಲೆ ಕುಂಕುಮ ತಿಲಕವನ್ನು ಹಚ್ಚುವುದನ್ನು ಕೂಡಾ ನಿಷೇಧಿಸಲಾಗಿದೆ. 

ಇದನ್ನೂ ಓದಿ : ಈ ದಿನದಂದು ತಪ್ಪಿಯೂ ಸಾಲ ಪಡೆಯುವುದು ಅಥವಾ ನೀಡುವುದು ಬೇಡವೇ ಬೇಡ

ಮಹಾಶಿವರಾತ್ರಿಯಂದು ಅಭಿಷೇಕ ಮಾಡುವುದು ಹೇಗೆ? 
ಶಾಸ್ತ್ರಗಳ ಪ್ರಕಾರ, ಮೊದಲು ಶಿವಲಿಂಗದ ಮೇಲೆ ಪಂಚಾಮೃತವನ್ನು ಅರ್ಪಿಸಬೇಕು. ಹಾಲು (Milk), ಗಂಗಾಜಲ, ಕುಂಕುಮ, ಜೇನುತುಪ್ಪ (Honey) ಮತ್ತು ನೀರನ್ನು ಬೆರೆಸಿ ಪಂಚಾಮೃತವನ್ನು ಮಾಡಲಾಗುತ್ತದೆ. ಮಹಾಶಿವರಾತ್ರಿಯಂದು ನಾಲ್ಕು ಪ್ರಹರಗಳಲ್ಲಿ ಶಿವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ಪ್ರಹರದಲ್ಲಿ ನೀರು, ಎರಡನೇ ಪ್ರಹರದಲ್ಲಿ ಮೊಸರು (Curd), ಮೂರನೇ ಪ್ರಹರದಲ್ಲಿ ತುಪ್ಪ ಮತ್ತು ನಾಲ್ಕನೇ ಪ್ರಹರದಲ್ಲಿ ಜೇನುತುಪ್ಪವನ್ನು ಹಾಕಿ ಅಭಿಷೇಕ ಮಾಡಬೇಕು. 

ಮಹಾ ಶಿವರಾತ್ರಿ ಶುಭ ಮುಹೂರ್ತ :
ಈ ಬಾರಿ ಮಹಾಶಿವರಾತ್ರಿ ಮಂಗಳವಾರ, ಮಾರ್ಚ್ 1, ಮಂಗಳವಾರ ಮುಂಜಾನೆ 3.16 ರಿಂದ ಪ್ರಾರಂಭವಾಗಲಿದೆ. ಚತುರ್ದಶಿ ತಿಥಿ ಮಾರ್ಚ್ 2 ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ಕೊನೆಗೊಳ್ಳಲಿದೆ. 

ಇದನ್ನೂ ಓದಿ : 4 ಗ್ರಹಗಳ ರಾಶಿಚಕ್ರದಲ್ಲಿ ಬದಲಾವಣೆಯಿಂದ ಎದುರಾಗಲಿದೆ ಈ ರಾಶಿಯವರಿಗೆ ಅಪಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News