ಬೆಂಗಳೂರು : ಇದು ಕರೋನಾ ಕಾಲ. ಈ ಸಮಯದಲ್ಲಿ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಇವತ್ತು ಕರೋನಾ (Coronavirus) ಕಾಲದಲ್ಲಿ ಅಡುಗೆ ಮಾಡುವಾಗ ಯಾವ ಮುನ್ನೆಚ್ಚರಿಕೆ ಇರಬೇಕು ಎಂಬುದನ್ನು ನೋಡೋಣ. ಅಡುಗೆ ಮನೆ (Kitchen) ಮತ್ತು ಅಡುಗೆಯನ್ನು ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಸಂಪೂರ್ಣವಾಗಿ ಮುಕ್ತವಾಗಿಡುವ ಉದ್ದೇಶದಿಂದ ನೀವು ಕೆಲವೊಂದು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಲೇ ಬೇಕು.
ಅಡುಗೆ ಮನೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳು ಏನು..?
1. ಅಡುಗೆ ಮನೆಗೆ ಬರುವಾಗ ಚೆನ್ನಾಗಿ ಕೈತೊಳೆದುಕೊಂಡು (Hand wash) ಬನ್ನಿ. ಕನಿಷ್ಠ 20 ಸೆಕೆಂಡ್ ಹರಿಯುವ ನೀರಿನಲ್ಲಿ ಹ್ಯಾಂಡ್ ವಾಶ್ ಮಾಡಿ.
2. ಅಡುಗೆ ಮನೆಯಲ್ಲಿ (Kitchen) ಖಂಡಿತವಾಗಿಯೂ ಮಾಸ್ಕ್ ಹಾಕಿ. ಅದರಲ್ಲೂ ಮುಖ್ಯವಾಗಿ ಯಾರಿಗೆ ಫ್ಲೂ ಇದ್ದರೆ ಖಂಡಿತವಾಗಿಯೂ ಮಾಸ್ಕ್ (Mask) ಹಾಕಬೇಕು. ಫ್ಲೂ ಖಂಡಿತವಾಗಿಯೂ ಕರೋನಾ ಆಗಿರಬೇಕೆಂದೇನಿಲ್ಲ. ಮಾಸ್ಕ್ ಉದ್ದೇಶ ಇಷ್ಟೇ. ನಿಮ್ಮ ಡ್ರಾಪ್ ಲೆಟ್ ಆಹಾರದ ಮೇಲೆ ಬೀಳಬಾರದು.
ಇದನ್ನೂ ಓದಿ : Watermelon : ಕಲ್ಲಂಗಡಿ ತಿಂದ ಮೇಲೆ ನೀರು ಏಕೆ ಕುಡಿಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ
3. ಅಡುಗೆ ಮನೆಯಲ್ಲಿ ತಾಜಾ ತರಕಾರಿಯನ್ನೇ (Vegetables) ತನ್ನಿ. ಮಾಂಸಾಹಾರಿಗಳಾಗಿದ್ದರೆ ಫ್ರಿಜ್ ನಲ್ಲಿಟ್ಟ ಚಿಕನ್ ಬೇಡ. ಆದಷ್ಟೂ ಆಹಾರ ವಸ್ತುಗಳು ಫ್ರೆಶ್ ಆಗಿರಲಿ.
4. ಹೊರಗಡೆಯಿಂದ ತಂದ ತರಕಾರಿಯನ್ನು ಚೆನ್ನಾಗಿ ತೊಳೆದ ನಂತರವೇ ಅಡುಗೆ ಮನೆಗೆ ತನ್ನಿ. ಅಡುಗೆಗೆ ಬಳಸಿ.
5. ತರಕಾರಿಯನ್ನು ಕಟ್ ಮಾಡಿ ತುಂಬಾ ಹೊತ್ತು ಹಾಗೇ ಇಡಬೇಡಿ. ಬಳಸಬೇಕಾದ ಹೊತ್ತಲ್ಲಿ ಮಾತ್ರ ತರಕಾರಿ ಕಟ್ ಮಾಡಿ.
6. ಅಡುಗೆ ಮಾಡುವ ಪಾತ್ರೆಯನ್ನು ಚೆನ್ನಾಗಿ ತೊಳೆಯಿರಿ.
7. ನಾನ್ ವೆಜ್ (Non veg) ತಂದಿದ್ದರೆ ಅದನ್ನು ಬಿಸಿನೀರಿನಲ್ಲಿ (hot water) ಚೆನ್ನಾಗಿ ತೊಳೆಯಿರಿ
ಇದನ್ನೂ ಓದಿ : Mucormycosis Causes: ಈ ಔಷಧಿಯ ಓವರ್ ಡೋಸ್ ಕೂಡ Black Fungus ಹರಡುವಿಕೆಗೆ ಕಾರಣವಂತೆ? ನೀವೂ ತೆಗೆದುಕೊಳ್ಳುತ್ತಿಲ್ಲ ತಾನೇ?
8. ಮಸಾಲೆ ಬಳಸುವ ಮೊದಲು ಚೆನ್ನಾಗಿ ಕೈತೊಳೆಯಿರಿ. ಆದಷ್ಟೂ ಕೈ ತೊಳೆಯುತ್ತಲೇ ಇರಿ.
9. ಚಾಪಿಂಗ್ ಬೋರ್ಡ್ (Chopping board) ಬಳಸುತ್ತಿದ್ದರೆ, ಅದನ್ನೂ ಚೆನ್ನಾಗಿ ತೊಳೆಯಿರಿ.
10. ಆಹಾರ ವಸ್ತುಗಳನ್ನು ಫ್ರಿಜ್ ನಲ್ಲಿ ತುಂಬಾ ದಿನ ಇಟ್ಟು ಬಳಿಕ ತಿನ್ನಬೇಡಿ
11. ಅಡುಗೆ ಮುಗಿದ ಮೇಲೆ ಬೇಕಿಂಗ್ ಸೋಡಾ (Baking soda) ಹಾಕಿ ಅಡುಗೆ ಮನೆ ಸ್ವಚ್ಛಮಾಡಿ
12. ಮುಖ್ಯವಾಗಿ ಅಡುಗೆ ಮನೆ ಬಟ್ಟೆಯನ್ನು ಚೆನ್ನಾಗಿ ತೊಳೆಯಿರಿ. ತಜ್ಞರ ಪ್ರಕಾರ ಅಡುಗೆ ಮನೆ ಕೀಟಾಣು, ಬ್ಯಾಕ್ಟಿರಿಯಾ ಹೆಚ್ಚಾಗಿ ಇದೇ ಬಟ್ಟೆಯಲ್ಲಿರುತ್ತದೆ.
ಇದನ್ನೂ ಓದಿ : ಹಲ್ಲುಜ್ಜುವುದು ಗೊತ್ತು.! ಸರಿಯಾಗಿ ಹಲ್ಲುಜ್ಜುವುದು ಹೇಗೆ ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.