Hair Care Tips: ಕೂದಲ ಬೆಳವಣಿಗೆಗೆ ಪ್ರತಿನಿತ್ಯ ಈ ಆಹಾರ ಸೇವಿಸಿರಿ

ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದ ಹೆಚ್ಚಿನ ಜನರು ಕೂದಲು ಬೆಳವಣಿಗೆಯ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ. ಕೂದಲು ವೇಗವಾಗಿ ಬೆಳೆಯಬೇಕೆಂದಿದ್ದರೆ ಈ ಪ್ರೊಟೀನ್ ಭರಿತ ವಸ್ತುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.

Written by - Puttaraj K Alur | Last Updated : Apr 3, 2023, 08:44 PM IST
  • ಪಾಲಕ್ ಸೊಪ್ಪನ್ನು ಪ್ರತಿದಿನ ಸೇವಿಸಿದರೆ ಕೂದಲು ವೇಗವಾಗಿ ಬೆಳೆಯುತ್ತದೆ
  • ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಕೂದಲ ಬೆಳವಣಿಗೆಗೆ ಸಹಕಾರಿ
  • ಕೂದಲಿನ ಬೆಳವಣಿಗೆ ಹೆಚ್ಚಿಸಲು ನೀವು ಒಣ ಹಣ್ಣುಗಳನ್ನು ಸೇವಿಸಬಹುದು
Hair Care Tips: ಕೂದಲ ಬೆಳವಣಿಗೆಗೆ ಪ್ರತಿನಿತ್ಯ ಈ ಆಹಾರ ಸೇವಿಸಿರಿ title=
ಕೂದಲ ಬೆಳವಣಿಗೆಗೆ ಆಹಾರ

ನವದೆಹಲಿ: ಕೂದಲಿಗೆ ಪ್ರೋಟೀನ್ ಬಹಳ ಮುಖ್ಯ. ಕೆಟ್ಟ ಜೀವನಶೈಲಿಯಿಂದ ಹೆಚ್ಚಿನ ಜನರು ಕೂದಲಿನ ಬೆಳವಣಿಗೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ಇದರ ಹಿಂದಿನ ಅಸಲಿ ಕಾರಣ ನಿಮ್ಮ ಆಹಾರ ಮತ್ತು ಪಾನೀಯವಾಗಿರಬಹುದು. ಹೀಗಾಗಿ ನಿಮ್ಮ ಕೂದಲು ವೇಗವಾಗಿ ಬೆಳೆಯಲು ಬಯಸಿದರೆ, ನಿಮ್ಮ ಆಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರಬೇಕು. ನಿಮ್ಮ ಕೂದಲು ವೇಗವಾಗಿ ಬೆಳೆಯಬೇಕೆಂದಿದ್ದರೆ ಈ ಪ್ರೊಟೀನ್ ಭರಿತ ವಸ್ತುಗಳನ್ನು ಆಹಾರದಲ್ಲಿ ಸೇರಿಸಿ.

ಕೂದಲ ಬೆಳವಣಿಗೆಗೆ ಪ್ರತಿದಿನ ಈ ಆಹಾರ ಸೇವಿಸಿ

ಮೊಟ್ಟೆಗಳು: ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದ್ದರಿಂದ ನೀವು ಕೂದಲಿನ ಉದ್ದವನ್ನು ವೇಗವಾಗಿ ಹೆಚ್ಚಿಸಲು ಬಯಸಿದರೆ, ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳಬಹುದು. ಮೊಟ್ಟೆಯ ಸೇವನೆಯಿಂದ ಕೂದಲಿನ ನೆತ್ತಿ ಸುಧಾರಿಸುತ್ತದೆ. ಇದು ಕೂದಲು ಉದುರುವುದನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ದಿನಕ್ಕೆ 2 ಮೊಟ್ಟೆಗಳನ್ನು ಸೇವಿಸಬೇಕು. ಇದರಿಂದ ಕೂದಲು ಆರೋಗ್ಯಕರ ಮತ್ತು ಸ್ಟ್ರಾಂಗ್ ಆಗುತ್ತದೆ.

ಇದನ್ನೂ ಓದಿ: Weight Loss Tips: ತೂಕ ಹೆಚ್ಚಾಗುವ ಚಿಂತೆಯೇ? ಹಾಗಾದ್ರೆ ಈ 5 ಪದಾರ್ಥ ಮುಟ್ಟಲೇಬೇಡಿ!

ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಪಾಲಕ್ ಸೊಪ್ಪನ್ನು ಪ್ರತಿದಿನ ಸೇವಿಸಿದರೆ ಕೂದಲು ವೇಗವಾಗಿ ಬೆಳೆಯುತ್ತದೆ. ಇದಲ್ಲದೇ ಕೂದಲು ಉದುರುವುದನ್ನು ತಪ್ಪಿಸಬಹುದು. ಇದಕ್ಕಾಗಿ ನೀವು ಪಾಲಕ್ ಸೊಪ್ಪನ್ನು ತಿನ್ನಬಹುದು ಅಥವಾ ಸೂಪ್ ಮಾಡಿಕೊಂಡು ಕುಡಿಯಬಹುದು. ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಕೂದಲಿನ ಬೆಳವಣಿಗೆಯ ಕೊರತೆಯಿಂದ ನೀವು ತೊಂದರೆಗೊಳಗಾಗಿದ್ದರೆ ಪಾಲಕ್ ತಿನ್ನಬೇಕು.

ಒಣ ಹಣ್ಣುಗಳು: ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ನೀವು ಒಣ ಹಣ್ಣುಗಳನ್ನು ಸೇವಿಸಬಹುದು. ಒಣ ಹಣ್ಣುಗಳು ಉತ್ತಮ ಪ್ರಮಾಣದ ಪ್ರೋಟೀನ್ ಹೊಂದಿರುತ್ತವೆ. ಡ್ರೈ ಫ್ರೂಟ್ಸ್ ಕೂದಲನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಕೂದಲು ದಟ್ಟವಾಗಿ, ಉದ್ದವಾಗಿ ಮತ್ತು ಆರೋಗ್ಯಕರವಾಗಿರುತ್ತದೆ. ಆದ್ದರಿಂದ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಲು ನೀವು ಆಹಾರದಲ್ಲಿ ಒಣ ಹಣ್ಣುಗಳನ್ನು ಸೇರಿಸಬೇಕು.

ಇದನ್ನೂ ಓದಿ: Insomnia: ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ರಾತ್ರಿ ಈ 3 ಪದಾರ್ಥ ಸೇವಿಸಬೇಡಿ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆ ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News