Weight Loss at Home: ಜಿಮ್‌ಗೆ ಹೋಗದೆ ಮನೆಯಲ್ಲಿಯೇ ಹೀಗೆ ತೂಕ ಇಳಿಸಿಕೊಳ್ಳಿ

ತೂಕ ಹೆಚ್ಚಾಗುವುದರಿಂದ ಎಲ್ಲಾ ರೀತಿಯ ಕಾಯಿಲೆಗಳು ನಿಮ್ಮನ್ನು ಆವರಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

Written by - Puttaraj K Alur | Last Updated : Apr 11, 2022, 09:08 PM IST
  • ನಿಂಬೆ ಪಾನಕದ ಸೇವನೆಯಿಂದ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು
  • ದಾಲ್ಚಿನ್ನಿಯು ತೂಕವನ್ನು ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ
  • ಆಪಲ್ ಸೈಡರ್ ವಿನೆಗರ್ ಸೇವನೆಯಿಂದಲೂ ತೂಕವನ್ನು ಕಳೆದುಕೊಳ್ಳಬಹುದು
Weight Loss at Home: ಜಿಮ್‌ಗೆ ಹೋಗದೆ ಮನೆಯಲ್ಲಿಯೇ ಹೀಗೆ ತೂಕ ಇಳಿಸಿಕೊಳ್ಳಿ title=
ತೂಕ ನಷ್ಟಕ್ಕೆ ದಾಲ್ಚಿನ್ನಿ ರಾಮಬಾಣ

ನವದೆಹಲಿ: ತೂಕ ಇಳಿಸಿಕೊಳ್ಳಲು (Weight Loss at Home) ಹೆಚ್ಚಿನ ಜನರು ಜಿಮ್‌ಗೆ ಸೇರುತ್ತಾರೆ. ಆದರೆ, ಬಿಡುವಿಲ್ಲದ ಕೆಲಸದ ನಡುವೆ ಇಂದು ಬಹುತೇಕ ಜನರು ಪ್ರತಿದಿನ ಜಿಮ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ತೂಕ ನಷ್ಟ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ನಾವು ನಿಮಗಾಗಿ ಕೆಲ ಉಪಯುಕ್ತ ಸಲಹೆಗಳನ್ನು ತಂದಿದ್ದೇವೆ. ಇದರಿಂದ ನೀವು ಮನೆಯಲ್ಲಿಯೇ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.

ಮನೆಮದ್ದುಗಳು ಪರಿಣಾಮಕಾರಿ

ತೂಕ ಹೆಚ್ಚಾಗುವುದರಿಂದ ಎಲ್ಲಾ ರೀತಿಯ ಕಾಯಿಲೆಗಳು ನಿಮ್ಮನ್ನು ಆವರಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಆಗ ಮಾತ್ರ ನೀವು ಫಿಟ್ ಆಗಿ ಇರಲು ಸಾಧ್ಯವಾಗುತ್ತದೆ. ಕೆಲವು ಮನೆಮದ್ದುಗಳು ತೂಕವನ್ನು ಕಳೆದುಕೊಳ್ಳಲು ರಾಮಬಾಣದಂತೆ ಕೆಲಸ ಮಾಡುತ್ತವೆ.  

ನಿಂಬೆ ಪಾನಕ ತೂಕ ಕಡಿಮೆ ಮಾಡುತ್ತದೆ

ನಿಂಬೆಹಣ್ಣು ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಬಹಳ ಸುಲಭವಾಗಿ ಸಿಗುತ್ತದೆ. ತೂಕವನ್ನು ಕಳೆದುಕೊಳ್ಳಲು ಅನೇಕ ಜನರು ನಿಂಬೆ ಪಾನಕವನ್ನು ಕುಡಿಯುತ್ತಾರೆ. ಏಕೆಂದರೆ ನಿಂಬೆ ಅನೇಕ ಔಷಧಿಯ ಗುಣಗಳನ್ನು ಹೊಂದಿದೆ. ವಾಸ್ತವವಾಗಿ ನಿಂಬೆಯಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ಇದರ ಸೇವನೆಯು ಪ್ರಯೋಜನಕಾರಿಯಾಗಿದೆ. ಇದು ಚಯಾಪಚಯವನ್ನು ಸಹ ಸುಧಾರಿಸುತ್ತದೆ.

ಇದನ್ನೂ ಓದಿ: Benefits Of Raw Papaya: ಕಚ್ಚಾ ಪಪ್ಪಾಯಿಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

ತೂಕ ನಷ್ಟಕ್ಕೆ ದಾಲ್ಚಿನ್ನಿ ರಾಮಬಾಣ

ಮಧುಮೇಹ ರೋಗಿಗಳು ದಾಲ್ಚಿನ್ನಿ ಬಳಸಿರುತ್ತಾರೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ದಾಲ್ಚಿನ್ನಿ ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಈ ಅಡುಗೆ ಮಸಾಲೆಯಲ್ಲಿ ಶಕ್ತಿಯುತವಾದ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕಂಡುಬರುತ್ತವೆ, ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. 

ಆಪಲ್ ಸೈಡರ್ ವಿನೆಗರ್

ಸೇಬುಹಣ್ಣನ್ನು ಹೆಚ್ಚಿನ ಜನರು ತಿನ್ನುತ್ತಾರೆ. ಆದರೆ ಅದರ ವಿನೆಗರ್ ಅನ್ನು ಸೇವಿಸುವುದು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ದೇಹದಿಂದ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಇದನ್ನು ಸೇವಿಸಬಹುದು.

ಹಸಿರು ಏಲಕ್ಕಿ ಕೂಡ ಪ್ರಯೋಜನಕಾರಿ

ಏಲಕ್ಕಿಯಿಂದ ತೂಕವನ್ನೂ ಕಡಿಮೆ ಮಾಡಬಹುದು. ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಹಸಿರು ಏಲಕ್ಕಿಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: ದೇಹದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಈ 4 ಡ್ರೈಫ್ರೂಟ್ ಗಳನ್ನು ಸೇವಿಸಿ

ನೆಲ್ಲಿಕಾಯಿ ತೂಕ ನಷ್ಟಕ್ಕೆ ಸಹಕಾರಿ

ನೆಲ್ಲಿಕಾಯಿ ತ್ವರಿತವಾಗಿ ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ ನೆಲ್ಲಿಕಾಯಿಯ ಸೇವನೆಯು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ತೂಕವೂ ಕಡಿಮೆಯಾಗುತ್ತದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News