Health Tips: ಈ ಡ್ರೈಫ್ರೂಟ್ ಸೇವನೆಯಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ!

Weight Loss Tips: ಗೋಡಂಬಿ ಸೇವನೆಯಿಂದ ತೂಕ ಕೂಡ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗುತ್ತದೆ. ಆದರೂ ಕೂಡ ಗೋಡಂಬಿ ಸೇವನೆಯಿಂದ ತೂಕ ಇಳಿಕೆಯಾಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಹಾಗಾದರೆ ಇದು ನಿಮ್ಮ ತೂಕವನ್ನು ಹೇಗೆ ಇಳಿಕೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.  

Written by - Nitin Tabib | Last Updated : Jul 5, 2023, 10:25 PM IST
  • ಗೋಡಂಬಿ ಸೇವನೆಯಿಂದ ನೀವು ತೂಕ ಇಳಿಕೆ ಮಾಡಿಕೊಳ್ಳಬಹುದು. ಆದರೆ, ಇದಕ್ಕೆ ಸಂಬಂಧಿಸಿದಂತೆ ಹಲವರ ಮನದಲ್ಲಿ ವಿಭಿನ್ನ ರೀತಿಯ ಗೊಂದಲಗಳನ್ನು ಹೊಂದಿದ್ದಾರೆ.
  • ಇಂತಹ ಪರಿಸ್ಥಿತಿಯಲ್ಲಿ, ಈ ಡ್ರೈಫ್ರೂಟ್ ಅನ್ನು ಸೇವಿಸಿ ಖಂಡಿತವಾಗಿಯೂ ನೀವು ನಿಮ್ಮ ತೂಕವನ್ನು ಇಳಿಕೆಮಾಡಿಕೊಳ್ಳಬಹುದು.
  • ಹೀಗಾಗಿ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ, ಕ್ರಮೇಣವಾಗಿ ನಿಮ್ಮ ದೇಹವು ಫಿಟ್ ಆಗುತ್ತದೆ.
Health Tips: ಈ ಡ್ರೈಫ್ರೂಟ್ ಸೇವನೆಯಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ! title=

Cashew Nut For Weight Loss: ಹೆಚ್ಚಿನ ಜನರು ಗೋಡಂಬಿಯನ್ನು ತಿನ್ನಲು ಇಷ್ಟಪಡುತ್ತಾರೆ ಮತ್ತು ಅದನ್ನು ಎಷ್ಟೇ ತಿಂದರೂ ಕೂಡ ಕಡಿಮೆಯೇ ಎನಿಸುತ್ತದೆ. ಇದಕ್ಕೆ ಕಾರಣ ಎಂದರೆ, ಬಹುತೇಕ ಜನರಿಗೆ ಅದರ ರುಚಿ ತುಂಬಾ ಹಿಡಿಸುತ್ತದೆ. ಇದೇ ಕಾರಣದಿಂದ ಅದನ್ನು ತಿನ್ನುತ್ತಲೇ ಇರಬೇಕು ಎನಿಸುತ್ತದೆ. ಇದೇ ವೇಳೆ ತೂಕ ಇಳಿಕೆ ಮಾಡಿಕೊಳ್ಳಲು ಬಯಸುವವರ ಮನದಲ್ಲಿ ಗೋಡಂಬಿ ಸೇವನೆ ತೂಕ ಇಳಿಕೆ ಮಾಡುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಹಾಗಾದರೆ, ಗೋಡಂಬಿ ಸೇವನೆಯಿಂದ ನೀವು ತೂಕವನ್ನು ಕಳೆದುಕೊಳ್ಳುತ್ತೀರೋ ಅಥವಾ ಇಲ್ಲವೋ ಎಂಬುದನ್ನೊಮ್ಮೆ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ, ಇದಲ್ಲದೆ ಗೋಡಂಬಿ ಸೇವನೆಯಿಂದ ಇತರ ಯಾವ ಯಾವ ಪ್ರಯೋಜನಗಳಿವೆ ಎಂಬುದನ್ನು ಕೂಡ ತಿಳಿಯೋಣ. 

ತೂಕ ಇಳಿಕೆಯಾಗುತ್ತದೆ
ಗೋಡಂಬಿ ಸೇವನೆಯಿಂದ ನೀವು ತೂಕ ಇಳಿಕೆ ಮಾಡಿಕೊಳ್ಳಬಹುದು. ಆದರೆ, ಇದಕ್ಕೆ ಸಂಬಂಧಿಸಿದಂತೆ ಹಲವರ ಮನದಲ್ಲಿ ವಿಭಿನ್ನ ರೀತಿಯ ಗೊಂದಲಗಳನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ಡ್ರೈಫ್ರೂಟ್ ಅನ್ನು ಸೇವಿಸಿ ಖಂಡಿತವಾಗಿಯೂ ನೀವು ನಿಮ್ಮ ತೂಕವನ್ನು ಇಳಿಕೆಮಾಡಿಕೊಳ್ಳಬಹುದು. ಹೀಗಾಗಿ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ, ಕ್ರಮೇಣವಾಗಿ ನಿಮ್ಮ ದೇಹವು ಫಿಟ್ ಆಗುತ್ತದೆ.

ಗೋಡಂಬಿ ಸೇವನೆಯಿಂದ ಆಗುವ ಲಾಭಗಳಿವು
ಗೋಡಂಬಿ ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಡ್ರೈ ಫ್ರೂಟ್ ಸೇವಿಸುವುದರಿಂದ ನಿಮಗೆ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುವುದಿಲ್ಲ. ಪದೇ ಪದೇ ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಖಂಡಿತವಾಗಿಯೂ ಗೋಡಂಬಿಯನ್ನು ಸೇವಿಸಬೇಕು. ಇದರಿಂದ ಹೊಟ್ಟೆ ಉಬ್ಬರದಂತಹ ಸಮಸ್ಯೆ ಕಾಡುವುದಿಲ್ಲ.

ಇದನ್ನೂ ಓದಿ-Diabetes New Symptom: ಚಿಂತೆ ಹೆಚ್ಚಿಸಿದ ಮಧುಮೇಹದ ಹೊಸ ಲಕ್ಷಣ, ಈ ಬದಲಾವಣೆ ಕಂಡ್ರೆ ತಕ್ಷಣ ಪರೀಕ್ಷೆಗೆ ಒಳಗಾಗಿ!

ಮೂಳೆಗಳು ದುರ್ಬಲವಾಗಿರುವವರು ಗೋಡಂಬಿಯನ್ನು ಸೇವಿಸಬಹುದು. ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಅಂದರೆ, ಇದನ್ನು ಸೇವಿಸುವುದರಿಂದ, ನಿಮ್ಮ ದೇಹಕ್ಕೆ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಸಿಗುತ್ತದೆ. ಆದ್ದರಿಂದ ನೀವು ಪ್ರತಿದಿನ ನಾಲ್ಕು ಅಥವಾ ಐದು ಗೋಡಂಬಿಗಳನ್ನು ತಿನ್ನಲು ಪ್ರಯತ್ನಿಸಿ.

ಇದನ್ನೂ ಓದಿ-Women Health: ಋತುಚಕ್ರದ ದಿನಾಂಕ ಸ್ಕಿಪ್ ಆಗಿದೆಯೇ? ಈ ಮನೆ ಉಪಾಯ ಅನುಸರಿಸಿ ನೋಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News