ಇಲಿಗಳಿಗೆ ವಿಷ ಹಾಕಿ ಪಾಪ ಕಟ್ಟಿಕೊಳ್ಳುವ ಬದಲು ಜಸ್ಟ ಹೀಗೆ ಮಾಡಿ..! ಒಂದು ಇಲಿ ಮನೆ ಹತ್ತಿರ ಬರಲ್ಲ

Rat problem in home : ಮನೆಯಿಂದ ಇಲಿಗಳನ್ನು ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ.. ನಿಮ್ಮ ಕಷ್ಟ ಏನು ಅಂತ ನಮಗೆ ಗೊತ್ತಾಗಿದೆ.. ಚಿಂತಿಸಬೇಡಿ.. ವಿಷವನ್ನು ಹಾಕಿ ಕೊಂದು ಪಾಪ ಕಟ್ಟಿಕೊಳ್ಳುವ ಬದಲು ಈ ಕೆಳಗೆ ನೀಡಿರುವ ಸರಳ ಉಪಾಯಗಳನ್ನು ಮಾಡಿ ನೋಡಿ..   

Written by - Krishna N K | Last Updated : Sep 4, 2024, 02:54 PM IST
    • ಇಲಿಗಳನ್ನು ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ..
    • ವಿಷ ಹಾಕಿ ಕೊಂದು ಪಾಪ ಕಟ್ಟಿಕೊಳ್ಳುವ ಬದಲು ಈ ಕೆಳಗೆ ನೀಡಿದಂತೆ ಮಾಡಿ
    • ಮನೆಯಲ್ಲಿ ಕೆಲವು ಉತ್ಪನ್ನಗಳನ್ನು ಬಳಸಿಕೊಂಡು ಇಲಿಗಳನ್ನು ಸುಲಭವಾಗಿ ಓಡಿಸಬಹದು.
ಇಲಿಗಳಿಗೆ ವಿಷ ಹಾಕಿ ಪಾಪ ಕಟ್ಟಿಕೊಳ್ಳುವ ಬದಲು ಜಸ್ಟ ಹೀಗೆ ಮಾಡಿ..! ಒಂದು ಇಲಿ ಮನೆ ಹತ್ತಿರ ಬರಲ್ಲ  title=

Get Rid of Rats : ಕೆಲವರು ಇಲಿಗಳ ಹಾವಳಿಯಿಂದ ಬೇಸತ್ತಿದ್ದಾರೆ.. ಮನೆಯಿಂದ ಇವುಗಳನ್ನು ಹೊರ ಹಾಕಲು ಎಷ್ಟೇ ಪ್ರಯತ್ನ ಪಟ್ಟರೂ ಫಲ ನೀಡುತ್ತಿಲ್ಲ. ಇದರಿಂದಾಗಿ ಇಲಿಗಳನ್ನು ಹಿಡಿದು ಕೊಲ್ಲಲು ವಿಷವನ್ನು ಬಳಸುತ್ತಾರೆ. ಈ ರೀತಿಯ ಔಷಧಗಳ ಬಳಕೆಯು ಮಕ್ಕಳ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ, ಔಷಧಿಗಳನ್ನು ಬಳಸದೆಯೇ, ಮನೆಯಲ್ಲಿ ಕೆಲವು ಉತ್ಪನ್ನಗಳನ್ನು ಬಳಸಿಕೊಂಡು ಇಲಿಗಳನ್ನು ಸುಲಭವಾಗಿ ಓಡಿಸಬಹದು.

ಮಾತ್ರೆಗಳು : ನ್ಯಾಫ್ತಲೀನ್ ಮಾತ್ರೆಗಳಿಂದ ಬರುವ ವಾಸನೆಯನ್ನು ಇಲಿಗಳು ಇಷ್ಟಪಡುವುದಿಲ್ಲ. ಹಾಗಾಗಿ, ಇಲಿಗಳು ಓಡಾಡುವ ಜಾಗದಲ್ಲಿ ಇವುಗಳನ್ನು ನೇರವಾಗಿ ಇಡಿ. ಹಾಗಾಗದಿದ್ದಲ್ಲಿ ಅವುಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಹೆಗ್ಗಣಗಳು ಓಡಿಹೋಗುತ್ತವೆ.

ಇದನ್ನೂ ಓದಿ:ಅಕಾಲಿಕ ಬೂದು ಕೂದಲಿಗೆ ಬೆಸ್ಟ್‌ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!

ಪುದೀನಾ ಎಣ್ಣೆ: ಮನೆಯ ಮೂಲೆಗಳಲ್ಲಿ ಪುದೀನಾ ಎಣ್ಣೆಯನ್ನು ಚಿಮುಕಿಸುವುದರಿಂದ, ಅದರಿಂದ ಹೊರಹೊಮ್ಮುವ ವಾಸನೆಯು ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಲವಂಗ ಮತ್ತು ಕಾಳುಮೆಣಸನ್ನು ಇಲಿಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಇಟ್ಟರೆ ಅದರಿಂದ ಬರುವ ಕ್ಷಾರೀಯ ವಾಸನೆಯು ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ.

ಅಡಿಗೆ ಸೋಡಾ, ಪುದೀನಾ: ಇಲಿಗಳನ್ನು ಹಿಮ್ಮೆಟ್ಟಿಸಲು ಮತ್ತೊಂದು ಸುಲಭ ಮಾರ್ಗ ಅಡಿಗೆ ಸೋಡಾ ಮತ್ತು ಪುದೀನಾ. ಮೊದಲು ಒಂದು ಕಪ್ ಮೈದಾ ತೆಗೆದುಕೊಳ್ಳಿ. ಇದಕ್ಕೆ ಪುದೀನಾ ಎಣ್ಣೆ ಮತ್ತು ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಈ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಮನೆಯಲ್ಲಿ ಇಲಿಗಳು ಬರುವ ಜಾಗಗಳಲ್ಲಿ ಇಟ್ಟರೆ ಆ ಜಾಗದಿಂದ ಇಲಿಗಳು ಓಡಿ ಹೋಗುತ್ತವೆ.

ಇದನ್ನೂ ಓದಿ:ಗೂಳಿ ಮಾತ್ರವಲ್ಲ.. ನಾಯಿಗೂ ಈ ಬಣ್ಣ ಕಂಡರೇ ಕೋಪ! ರಸ್ತೆಯಲ್ಲಿ ಓಡಾಡುವಾಗ ಹುಷಾರ್‌!!

ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಪುಡಿಮಾಡಿ ಕುದಿಯುವ ನೀರಿಗೆ ಹಾಕಿ, ಉಪ್ಪು ಮತ್ತು ಟೆಟಾಲ್ ಸೇರಿಸಿ ಮತ್ತು ಮೂಲೆಯಲ್ಲಿ ನೀರನ್ನು ಚಿಮುಕಿಸಿ. ಇದು ಇಲಿಗಳನ್ನು ದೂರವಿಡುತ್ತದೆ. ಅಲ್ಲದೆ, ಈರುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ ಇಡಿ, ಇಲಿಗಳು ಆ ಜಾಗಕ್ಕೆ ಬರುವುದೇ ಇಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News