ಈ ಎರಡು ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿಕೊಳ್ಳಿ Anti Dandruff Oil

How To Make Anti Dandruff Oil:ನೀವು ಮನೆಯಲ್ಲಿಯೇ ಸುಲಭವಾಗಿ ಆ್ಯಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.   

Written by - Ranjitha R K | Last Updated : Mar 10, 2023, 04:15 PM IST
  • ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ಕಾಡುವುದು ಸಾಮಾನ್ಯ.
  • ಸುಲಭವಾಗಿ ಆ್ಯಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು.
  • ಇದಕ್ಕಾಗಿ ಬೇಕಾಗಿರುವುದು ಎರಡೇ ವಸ್ತುಗಳು
ಈ ಎರಡು ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿಕೊಳ್ಳಿ  Anti Dandruff Oil  title=

How To Make Anti Dandruff Oil : ಇಂದಿನ ಕಾಲದಲ್ಲಿ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ಕಾಡುವುದು ಸಾಮಾನ್ಯ. ಇದರ್ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಆಂಟಿ-ಡ್ಯಾಂಡ್ರಫ್ ಶಾಂಪೂಗಳು ಲಭ್ಯವಿದೆ. ಆದರೆ ಅವುಗಳು ಅನೇಕ ರೀತಿಯ ರಾಸಾಯನಿಕಗಳಿಂದ ತುಂಬಿರುತ್ತವೆ. ಅವುಗಳು ಕೂದಲಿಗೆ ಹಾನಿಕಾರಕವಾಗುವುದರ ಜೊತೆಗೆ, ಸಂಪೂರ್ಣವಾಗಿ ತಲೆಹೊಟ್ಟು ತೆಗೆದುಹಾಕುವಲ್ಲಿ ಯಶಸ್ವಿಯಾಗುವುದು ಕೂಡಾ ಇಲ್ಲ. ಆದರೆ ನೀವು ಮನೆಯಲ್ಲಿಯೇ ಸುಲಭವಾಗಿ ಆ್ಯಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು.

ಆಲಿವ್ ಎಣ್ಣೆ ಮತ್ತು ಜೇನುತುಪ್ಪದ ಸಹಾಯದಿಂದ ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸಲಾಗುತ್ತದೆ. ಆಲಿವ್ ಎಣ್ಣೆ ಮತ್ತು ಜೇನುತುಪ್ಪ ಎರಡೂ ಆರ್ಧ್ರಕ ಗುಣಗಳನ್ನು ಹೊಂದಿದ್ದು, ನೆತ್ತಿಯ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಆಂಟಿ-ಡ್ಯಾಂಡ್ರಫ್ ಎಣ್ಣೆಯನ್ನು ಹಚ್ಚುವುದರಿಂದ  ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಬಹುದು. ಆಲಿವ್ ಎಣ್ಣೆಯಲ್ಲಿ ಆಂಟಿಫಂಗಲ್ ಗುಣಲಕ್ಷಣಗಳು ಕಂಡು ಬರುತ್ತವೆ. ಹಾಗಿದ್ದರೆ ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. 

ಇದನ್ನೂ ಓದಿ : ಈ ಖಾಯಿಲೆ ಇದ್ದವರು ʼಬಾಳೆಹಣ್ಣುʼ ತಿನ್ನಬಾರದು..! ತಿಳಿಯಿರಿ, ಬೇರೆಯವರಿಗೂ ತಿಳಿಸಿ

ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸಲು ಅಗತ್ಯವಿರುವ ಪದಾರ್ಥಗಳು :

1.ಆಲಿವ್ ಎಣ್ಣೆ 
2. ಜೇನು

ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸುವುದು  ಹೇಗೆ ? :
1.ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
2.ನಂತರ ಆಲಿವ್ ಎಣ್ಣೆ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ.
3.  ಈಗ ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇಷ್ಟಾದರೆ  ನಿಮಗೆ ಬೇಕಾಗಿರುವ ಆಂಟಿ ಡ್ಯಾಂಡ್ರಫ್ ಎಣ್ಣೆ ಸಿದ್ಧವಾಗುತ್ತದೆ. 

ಇದನ್ನೂ ಓದಿ : ಮಧುಮೇಹ ಸೇರಿದಂತೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತೇ ಮಾವಿನ ಎಲೆ

ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ಹೇಗೆ ಬಳಸುವುದು?  :
ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ನೆತ್ತಿಯ ಮೇಲೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. 
ನಂತರ ನಿಮ್ಮ ಬೆರಳುಗಳ ಸಹಾಯದಿಂದ ನೆತ್ತಿಯ ಮೇಲೆ ಮೃದುವಾಗಿ ಮಸಾಜ್ ಮಾಡಿ. 
ಇದಾದ ನಂತರ ನಿಮ್ಮ ಕೂದಲನ್ನು ಟವೆಲ್ ಅಥವಾ ಶವರ್ ಕ್ಯಾಪ್ನೊಂದಿಗೆ ಕಟ್ಟಿಕೊಳ್ಳಿ.
30 ನಿಮಿಷಗಳ ನಂತರ, ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News