Jamun Side Effects: ಈ ಸಮಸ್ಯೆಗಳಿದ್ದವರು ತಿನ್ನಲೇ ಬಾರದು ನೇರಳೆ ಹಣ್ಣು , ಬೀರುತ್ತದೆ ಭಾರೀ ಅಡ್ಡ ಪರಿಣಾಮ

Jamun Side Effects:  ಹೊಟ್ಟೆನೋವು, ಮಧುಮೇಹ ಮತ್ತು ಸಂಧಿವಾತಕ್ಕೆ ಇದು ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ ಜಾಮೂನ್ ಅಥವಾ ನೇರಳೆ ಹಣ್ಣು. ಹಣ್ಣುಗಳು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದು ಕೆಲವು ಅಡ್ಡ ಪರಿಣಾಮಗಳನ್ನು ಕೂಡಾ ಹೊಂದಿರುತ್ತದೆ.    

Written by - Ranjitha R K | Last Updated : May 18, 2022, 11:03 AM IST
  • ಕೆಲವೊಂದು ಸಮಸ್ಯೆಗಳಿದ್ದರೆ ತಿನ್ನಬಾರದು ನೇರಳೆ ಹಣ್ಣು
  • ಇದು ಸಿಜಿಜಿಯಮ್ ಕ್ಯುಮಿನಿ ಎಂಬ ಹೂವಿನ ಮರದ ಹಣ್ಣಾಗಿದೆ.
  • ಮಿತಿಮೀರಿದ ಸೇವನೆಯು ಹಾನಿಯನ್ನುಂಟುಮಾಡುತ್ತದೆ
Jamun Side Effects: ಈ ಸಮಸ್ಯೆಗಳಿದ್ದವರು  ತಿನ್ನಲೇ ಬಾರದು ನೇರಳೆ ಹಣ್ಣು , ಬೀರುತ್ತದೆ ಭಾರೀ ಅಡ್ಡ ಪರಿಣಾಮ  title=
Jamun Side Effects (file photo)

ಬೆಂಗಳೂರು : Jamun Side Effects: ಹಣ್ಣುಗಳ ವಿಷಯದಲ್ಲಿ ನಮ್ಮ ದೇಶವು ಬಹಳ ಶ್ರೀಮಂತವಾಗಿದೆ. ಮಾವು, ಅನಾನಸ್ ಮತ್ತು ಕಲ್ಲಂಗಡಿ ಎಲ್ಲರಿಗೂ ಅಚ್ಚುಮೆಚ್ಚಿನ ಹಣ್ಣುಗಳಾಗಿವೆ.  ಆದರೆ, ಬೇಸಿಗೆಯ ಋತುವಿನಲ್ಲಿ ರುಚಿಕರವಾದ ಮತ್ತು ತುಂಬಾ ಪ್ರಯೋಜನಕಾರಿಯಾದ ಇತರ ಹಣ್ಣುಗಳು ಕೂಡಾ ಸಿಗುತ್ತವೆ.  ಇದರಲ್ಲಿ ನೇರಳೆ ಹಣ್ಣು ಅಥವಾ ಜಾಮೂನ್ ಕೂಡಾ ಒಂದು.  ಇದು ಬೇಸಿಗೆಯಲ್ಲಿ ಸಿಗುವ ಹಣ್ಣು. ರುಚಿಯಲ್ಲಿ ಸಿಹಿ ಮತ್ತು ಹುಳಿ ಮಿಶ್ರಿತವಾಗಿರುತ್ತದೆ. 

 ಇದು ಸಿಜಿಜಿಯಮ್ ಕ್ಯುಮಿನಿ ಎಂಬ ಹೂವಿನ ಮರದ ಹಣ್ಣಾಗಿದೆ. ಮೇ ಮತ್ತು ಜೂನ್‌ನಲ್ಲಿ ಈ ಮರ ಫಲ ನೀಡುತ್ತದೆ. ಜಾಮೂನ್ ಅನೇಕ ಔಷಧೀಯ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೊಟ್ಟೆನೋವು, ಮಧುಮೇಹ ಮತ್ತು ಸಂಧಿವಾತಕ್ಕೆ ಇದು ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಹಣ್ಣುಗಳು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದು ಕೆಲವು ಅಡ್ಡ ಪರಿಣಾಮಗಳನ್ನು ಕೂಡಾ ಹೊಂದಿರುತ್ತದೆ. 

ಇದನ್ನೂ ಓದಿ : ಚಿನ್ನಾಭರಣ ಧರಿಸಿದರೆ ಸೌಂದರ್ಯ ವೃದ್ದಿ ಮಾತ್ರವಲ್ಲ , ಆರೋಗ್ಯಕ್ಕೂ ಸಿಗುತ್ತದೆ ಲಾಭ

ಮಿತಿಮೀರಿದ ಸೇವನೆಯು ಹಾನಿಯನ್ನುಂಟುಮಾಡುತ್ತದೆ  :
ಜಾಮೂನ್ ಅಥವಾ ನೇರಳೆ ಹಣ್ಣನ್ನು ಮಿತಿ ಮೀರಿ  ತಿಂದರೆ ಅದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಯುರ್ವೇದದ ಪ್ರಕಾರ, ಎಲ್ಲವನ್ನೂ ಸೀಮಿತ ಪ್ರಮಾಣದಲ್ಲಿ ಮತ್ತು ಔಷಧಿ ರೂಪದಲ್ಲಿ ಮಾತ್ರ ಸೇವಿಸಬೇಕು. ಈ ವಿಷಯ ಜಾಮೂನಿಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ. 

ಹಣ್ಣುಗಳ ಅತಿಯಾದ ಸೇವನೆಯಿಂದ ಉಂಟಾಗುವ ಅನಾನುಕೂಲಗಳು : 
ರಕ್ತದೊತ್ತಡ ಸಮಸ್ಯೆ  :
ವರದಿಯ ಪ್ರಕಾರ, ಅಧಿಕ ರಕ್ತದೊತ್ತಡ ರೋಗಿಗಳು ಈ ಹಣ್ಣನ್ನು ತಿಂದರೆ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಈ ಹಣ್ಣನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನೀವು ಸುಲಭವಾಗಿ ನಿಯಂತ್ರಿಸಬಹುದು. ರಕ್ತದೊತ್ತಡ ಕಡಿಮೆ ಮಾಡುವ ಸಲುವಾಗಿ ಈ ಹಣ್ಣನ್ನು ಅತಿಯಾಗಿ ತಿಂದರೆ ರಕ್ತದೊತ್ತಡ ತೀರಾ ಕಡಿಮೆಯಾಗಬಹುದು. ರಕ್ತದೊತ್ತಡ ಕಡಿಮೆಯಾದರೂ ಅದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ ಪ್ರಾಣಕ್ಕೇ ಕುತ್ತು ತರಬಹುದು. 

ಇದನ್ನೂ ಓದಿ : ಬೇಳೆ ಕಾಳುಗಳಲ್ಲಿ ಹುಳಗಳಾಗದಂತೆ ದೀರ್ಘ ಕಾಲದವರೆಗೆ ಸಂರಕ್ಷಿಸಲು ಇಲ್ಲಿದೆ ಸುಲಭ ಉಪಾಯ

ಮಲಬದ್ಧತೆ :

ಜಾಮೂನ್ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದರ ಅತಿಯಾದ ಸೇವನೆಯಿಂದ ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. 

ಮೊಡವೆ :
ಮುಖದ ಮೇಲೆ ಮೊಡವೆಗಳಿದ್ದರೆ ಖಂಡಿತವಾಗಿಯೂ ಈ ಹಣ್ಣಿನಿಂದ ಅಂತರ ಕಾಯ್ದುಕೊಳ್ಳಿ. ಇದು ಮೊಡವೆ ಸೇರಿದಂತೆ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News