Tulsi Plants: ಈ ದಿನ ಅಪ್ಪಿ-ತಪ್ಪಿ ಕೂಡ ತುಳಸಿ ಎಲೆಯನ್ನು ಕೀಳಬೇಡಿ, ಇಲ್ಲವೇ ಜೀವನದಲ್ಲಿ ದೊಡ್ಡ ಅನಾಹುತ ಸಂಭವಿಸಬಹುದು, ಎಚ್ಚರ!

Tulsi Plants: ತುಳಸಿಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ತುಳಸಿಯನ್ನು ದೇವರ ಪೂಜೆಯಲ್ಲಿಯೂ ಬಳಸಲಾಗುತ್ತದೆ. ಇದರೊಂದಿಗೆ ತುಳಸಿ ಎಲೆಗಳನ್ನು ಇತರ ಎಲ್ಲಾ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ.

Written by - Yashaswini V | Last Updated : Dec 22, 2021, 08:07 AM IST
  • ತುಳಸಿ ರಾಧಾ-ರಾಣಿಯ ರೂಪ
  • ತುಳಸಿ ವಿಷ್ಣುವಿಗೆ ಪ್ರಿಯ
  • ತುಳಸಿ ಗಿಡವನ್ನು ಅಂಗಳದಲ್ಲಿ ನೆಡಬಾರದು
Tulsi Plants: ಈ ದಿನ ಅಪ್ಪಿ-ತಪ್ಪಿ ಕೂಡ ತುಳಸಿ ಎಲೆಯನ್ನು ಕೀಳಬೇಡಿ, ಇಲ್ಲವೇ ಜೀವನದಲ್ಲಿ ದೊಡ್ಡ ಅನಾಹುತ ಸಂಭವಿಸಬಹುದು, ಎಚ್ಚರ! title=
Tulsi Leaves Benefits

Tulsi Plants: ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ಬಹುತೇಕ ಎಲ್ಲಾ ಹಿಂದೂ ಮನೆಗಳಲ್ಲಿ ಪೂಜಿಸಲಾಗುತ್ತದೆ. ತುಳಸಿಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ತುಳಸಿಯನ್ನು ದೇವರ ಪೂಜೆಯಲ್ಲಿಯೂ ಬಳಸಲಾಗುತ್ತದೆ. ಇದರೊಂದಿಗೆ ತುಳಸಿ ಎಲೆಗಳನ್ನು ಇತರ ಎಲ್ಲಾ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಕೆಲವೆಡೆ ತುಳಸಿ ಇಲ್ಲದೇ ಪೂಜೆ ಪೂರ್ಣಗೊಳ್ಳುವುದಿಲ್ಲ. ಧಾರ್ಮಿಕವಾಗಿ ಮಾತ್ರವಲ್ಲದೆ ತುಳಸಿಯ ಹಲವು ವೈಜ್ಞಾನಿಕ ಪ್ರಯೋಜನಗಳನ್ನೂ ಹೇಳಲಾಗಿದೆ. ಭಾನುವಾರದಂದು ತುಳಸಿಯನ್ನು ಏಕೆ ಕೀಳುವುದಿಲ್ಲ ಎಂದು ತಿಳಿಯಿರಿ. ಅಲ್ಲದೆ, ರಾತ್ರಿಯಲ್ಲಿ ತುಳಸಿ ಎಲೆಗಳನ್ನು ಕೀಳುವ ಮೊದಲು ಏಕೆ ಚಿಟಿಕೆ ಹೊಡೆಯಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಈ ಕಾರಣದಿಂದಾಗಿ ಭಾನುವಾರದಂದು ತುಳಸಿ ಎಳೆಯನ್ನು ಕೀಳುವುದಿಲ್ಲ:
ಭಾನುವಾರದಂದು ಅಪ್ಪಿ-ತಪ್ಪಿ ಕೂಡ ತುಳಸಿ ಎಲೆಯನ್ನು (Tulsi Leaves) ಕೀಳಬಾರದು ಎಂದು ಹೇಳಲಾಗುತ್ತದೆ. ಇದರ ಹಿಂದಿನ ಧಾರ್ಮಿಕ ಕಾರಣವೆಂದರೆ ಭಾನುವಾರ ವಿಷ್ಣುವಿಗೆ (Lord Vishnu) ಅತ್ಯಂತ ಪ್ರಿಯವಾದದ್ದು. ಇದಲ್ಲದೆ, ತುಳಸಿಯು ವಿಷ್ಣುವಿಗೆ ತುಂಬಾ ಪ್ರಿಯ. ಭಾನುವಾರದಂದು ತುಳಸಿಯನ್ನು ಕೀಳದಿರುವುದು ಇದೇ ಕಾರಣಕ್ಕೆ. ಭಾನುವಾರ ತುಳಸಿ ಎಲೆ ಕೀಳುವುದರಿಂದ ಧನಹಾನಿಯಾಗುತ್ತದೆ ಎಂಬ ನಂಬಿಕೆಯೂ ಇದೆ. 

ಇದನ್ನೂ ಓದಿ-  Ekadashi: 2022ರಲ್ಲಿ ಏಕಾದಶಿ ಯಾವಾಗ ಬರುತ್ತದೆ?, ಮಹತ್ವದ ದಿನಗಳ ಬಗ್ಗೆ ತಿಳಿದುಕೊಳ್ಳಿರಿ

ತುಳಸಿಗೆ ಸಂಬಂಧಿಸಿದ ಇತರ ನಂಬಿಕೆಗಳು: 
ತುಳಸಿಯ ಬಗ್ಗೆ ಇರುವ ಇನ್ನೊಂದು ನಂಬಿಕೆ ಎಂದರೆ ಅಂಗಳದ ಮಧ್ಯದಲ್ಲಿ ತುಳಸಿ ಗಿಡ (Tulsi Plant) ನೆಡಬಾರದು. ತುಳಸಿ ಗಿಡ ನೆಡಲು ಅತ್ಯಂತ ಪ್ರಶಸ್ತವಾದ ಮಾಸವೆಂದರೆ ಕಾರ್ತಿಕ ಮಾಸ. ತುಳಸಿ ಗಿಡ ನೆಡಲು ಗುರುವಾರವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಇದಲ್ಲದೆ ತುಳಸಿ ಎಲೆಗಳನ್ನು ಉಗುರುಗಳಿಂದ ಎಳೆದು ಕೀಳಬಾರದು. ಅಲ್ಲದೆ, ತುಳಸಿ ಎಲೆಗಳನ್ನು ಅಗಿಯಬಾರದು ಎಂದು ಕೂಡ ಹೇಳಲಾಗುತ್ತದೆ. 

ಇದನ್ನೂ ಓದಿ- Chandra Grahan 2022: ಹೊಸ ವರ್ಷದಲ್ಲಿ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ? ದಿನಾಂಕ & ಸಮಯ ತಿಳಿಯಿರಿ

ರಾತ್ರಿಯಲ್ಲಿ ತುಳಸಿ ಎಲೆಗಳನ್ನು ಕೀಳುವ ಮೊದಲು ಚಿಟುಕೆ ಹೊಡೆಯುವುದು:
ಧಾರ್ಮಿಕ ಗ್ರಂಥಗಳಲ್ಲಿ ತುಳಸಿಯನ್ನು ರಾಧಾ-ರಾಣಿಯ ರೂಪವೆಂದು ಪರಿಗಣಿಸಲಾಗಿದೆ. ಅವರು ಸಂಜೆ ಲೀಲೆ ಮಾಡುತ್ತಾರೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ತುಳಸಿ ಎಲೆಗಳನ್ನು ಸಂಜೆ ಕೀಳುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ, ಒಂದೊಮ್ಮೆ ರಾತ್ರಿವೇಳೆ ತುಳಸಿ ಎಲೆ ಕೀಳಬೇಕಾದರೆ ಮೊದಲು ಚಿಟುಕೆ ಹೊಡೆದು, ಸಸ್ಯವನ್ನು ಅಲುಗಾಡಿಸುವ ಮೂಲಕ ಎಲೆಗಳನ್ನು ಕಿತ್ತುಕೊಳ್ಳಬೇಕು ಎನ್ನಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News