ನಿಂಬೆ ಹಣ್ಣಿನಲ್ಲಿ ನಿಮ್ಮ ಮನೆಯ ಪ್ರತಿಯೊಂದು ಸಮಸ್ಯೆಗೆ ಸಮಾಧಾನ ಅಡಗಿದೆ!

Lemon Remedies: ನಿಂಬೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ.  ಆದರೆ ಈ ನಿಂಬೆಯಿಂದ ಮಾಡಲಾಗುವ ಜೋತಿಷ್ಯ ತಂತ್ರಗಳಿಂದಲೂ ಕೂಡ ಹಲವು ಲಾಭಗಳಿವೆ. ಕೆಟ್ಟ ದೃಷ್ಟಿ, ರೋಗಗಳ ನಿವಾರಣೆ, ಪ್ರಗತಿಯಲ್ಲಿನ ಅಡೆತಡೆ ನಿವಾರಣೆ ಇತ್ಯಾದಿಗಳು ನಿಂಬೆ ಹಣ್ಣಿನ ಕೆಲ ಪರಿಹಾರಗಳಾಗಿವೆ. ಬನ್ನಿ ಈ ಕುರಿತು ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ. (Lifestyle News In Kannada)

Written by - Nitin Tabib | Last Updated : Nov 16, 2023, 10:51 PM IST
  • ಇದಲ್ಲದೆ, ನಿಮ್ಮೊಂದಿಗೆ ಒಂದು ನಿಂಬೆ ಮತ್ತು 4 ಲವಂಗವನ್ನು ತೆಗೆದುಕೊಂಡು ಯಾವುದೇ ಹನುಮಾನ್ ದೇವಸ್ಥಾನಕ್ಕೆ ಹೋಗಿ ಮತ್ತು ಎಲ್ಲಾ ನಾಲ್ಕು ಲವಂಗಗಳನ್ನು ನಿಂಬೆಹಣ್ಣಿನಲ್ಲಿ ಹೂತುಹಾಕಿ
  • ಮತ್ತು ಹನುಮನ ಮುಂದೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸಿ.
  • ನಂತರ ನಿಂಬೆ ತೆಗೆದುಕೊಂಡು ನಿಮ್ಮ ಕೆಲಸವನ್ನು ಪ್ರಾರಂಭಿಸಿ. ಇದರಿಂದ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯುತ್ತದೆ.
ನಿಂಬೆ ಹಣ್ಣಿನಲ್ಲಿ ನಿಮ್ಮ ಮನೆಯ ಪ್ರತಿಯೊಂದು ಸಮಸ್ಯೆಗೆ ಸಮಾಧಾನ ಅಡಗಿದೆ! title=

ಬೆಂಗಳೂರು: ನಿಂಬೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ, ಇದರ ಜೊತೆಗೆ, ನಿಂಬೆಯನ್ನು ಜ್ಯೋತಿಷ್ಯ, ತಾಂತ್ರಿಕ ಮತ್ತು ವಾಸ್ತು ಶಾಸ್ತ್ರದಲ್ಲಿಯೂ ಬಳಸಲಾಗುತ್ತದೆ. ಸಾಮಾನ್ಯವಾಗಿ ನಾವು ಅಂಗಡಿಗಳು ಮತ್ತು ಮನೆಗಳ ಹೊರಗೆ ಬಾಗಿಲಿಗೆ ನಿಂಬೆ ಮತ್ತು ಮೆಣಸಿನಕಾಯಿಗಳನ್ನು ನೇತುಹಾಕುವುದನ್ನು ನೋಡುತ್ತೇವೆ. ಕೆಟ್ಟ ದೃಷ್ಟಿಯಿಂದ ಮನೆಯನ್ನು ರಕ್ಷಿಸಲು ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರಲು ಜನರು ಈ ಉಪಾಯ ಮಾಡಿರುತ್ತಾರೆ. ನಿಂಬೆಗೆ ಸಂಬಂಧಿಸಿದ ಅನೇಕ ಅದ್ಭುತ ತಂತ್ರಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ತಂತ್ರಗಳನ್ನು ಪ್ರಯತ್ನಿಸುವ ಮೂಲಕ, ಕೆಟ್ಟ ದೃಷ್ಟಿ, ವೈಫಲ್ಯ, ರೋಗಗಳನ್ನು ನೀವು ತೊಡೆದುಹಾಕಬಹುದು. ಇದರೊಂದಿಗೆ, ಜೀವನದ ದೊಡ್ಡ ಸಮಸ್ಯೆಗಳನ್ನೂ ಸಹ ಪರಿಹರಿಸಬಹುದು.

ನಕಾರಾತ್ಮಕತೆಯನ್ನು ತೊಡೆದುಹಾಕಲು ಈ ಉಪಾಯ ಮಾಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದುಷ್ಟ ಶಕ್ತಿಗಳು ಮನೆಯಲ್ಲಿ ಪ್ರವೇಶಿಸದಂತೆ ತಡೆಯಲು ಮನೆಯ ಹೊರಗೆ ನಿಂಬೆ ಗಿಡವನ್ನು ನೆಡಬೇಕು. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಇದರೊಂದಿಗೆ ವಾಸ್ತು ದೋಷಗಳೂ ದೂರಾಗಿ  ಮನೆಯಲ್ಲಿ ಐಶ್ವರ್ಯ ಬರುತ್ತದೆ.

ಈ ಉಪಾಯದಿಂದ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ವ್ಯವಹಾರವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದರೆ. ಲಾಭ ಇರದೆ ಇದ್ದಲ್ಲಿ, ಪದೇಪದೇ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ, ಶನಿವಾರದಂದು ನಿಂಬೆಹಣ್ಣು ತೆಗೆದುಕೊಂಡು ಅದನ್ನು ಅಂಗಡಿ ಅಥವಾ ಕಚೇರಿಯ ನಾಲ್ಕು ಗೋಡೆಗಳಿಗೆ ಸ್ಪರ್ಶಿಸಿ. ನಂತರ, ಅದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಮತ್ತು ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ತಲಾ ಒಂದು ತುಂಡು ಎಸೆಯಿರಿ.

ಇದಲ್ಲದೆ, ನಿಮ್ಮೊಂದಿಗೆ ಒಂದು ನಿಂಬೆ ಮತ್ತು 4 ಲವಂಗವನ್ನು ತೆಗೆದುಕೊಂಡು ಯಾವುದೇ ಹನುಮಾನ್ ದೇವಸ್ಥಾನಕ್ಕೆ ಹೋಗಿ ಮತ್ತು ಎಲ್ಲಾ ನಾಲ್ಕು ಲವಂಗಗಳನ್ನು ನಿಂಬೆಹಣ್ಣಿನಲ್ಲಿ ಹೂತುಹಾಕಿ ಮತ್ತು ಹನುಮನ ಮುಂದೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸಿ. ನಂತರ ನಿಂಬೆ ತೆಗೆದುಕೊಂಡು ನಿಮ್ಮ ಕೆಲಸವನ್ನು ಪ್ರಾರಂಭಿಸಿ. ಇದರಿಂದ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯುತ್ತದೆ.

ಅದೃಷ್ಟ ನಿಮ್ಮೊಂದಿಗೆ ಇರಲು ಈ ಉಪಾಯ ಮಾಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಕೆಲಸ ಮಾಡಲು ಹೋದರೆ ಅದು ಪೂರ್ಣಗೊಳ್ಳುತ್ತಿಲ್ಲ ಮತ್ತು ಪದೇ ಪದೇ ಅದರಲ್ಲಿ ವಿಘ್ನಗಳು ಎದುರಾಗುತ್ತಿದ್ದರೆ,  ನಿಂಬೆಯನ್ನು ತೆಗೆದುಕೊಂಡು ಅದನ್ನು ಏಳು ಬಾರಿ ತಲೆಯಿಂದ ಪಾದದವರೆಗೆ ತಿರುಗಿಸಿ, ನಂತರ ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ ಬಲಗೈಯ ತುಂಡನ್ನು ಎಡಕ್ಕೆ ಮತ್ತು ಎಡಭಾಗದ ತುಂಡನ್ನು ಬಲಭಾಗಕ್ಕೆ ಎಸೆಯಿರಿ. .

ಕೆಲಸದಲ್ಲಿ ಯಶಸ್ಸು ಸಿಗದೇ ಇದ್ದಲ್ಲಿ ಈ ಉಪಾಯ ಮಾಡಿ
ಜ್ಯೋತಿಷ್ಯದ ಪ್ರಕಾರ, ನಿಮ್ಮ ಮನಸ್ಸು ಕೆಲಸದಲ್ಲಿ ತೊಡಗದಿದ್ದರೆ. ಆಗಾಗ ಆಫೀಸಿನಲ್ಲಿ ಕೆಲಸಕ್ಕಾಗಿ ಬೈಗುಳ ಬೀಳುತ್ತಿದ್ದಾರೆ ಮತ್ತು ಪ್ರಮೋಷನ್ ಸಿಗದಿದ್ದರೆ.  ನಿಂಬೆಹಣ್ಣು ತೆಗೆದುಕೊಂಡು ಹಗಲಿನಲ್ಲಿ ಒಂದು ಅಡ್ಡರಸ್ತೆಗೆ ಹೋಗಿ ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ನಾಲ್ಕು ದಿಕ್ಕಿಗೆ ಎಸೆಯಿರಿ. ಇದರಿಂದ ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಕ್ಕುತ್ತದೆ. 

ಅನಾರೋಗ್ಯವನ್ನು ಗುಣಪಡಿಸಲು ಈ ಉಪಾಯ ಮಾಡಿ
ಮನೆಯಲ್ಲಿ ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ, ಔಷಧಿಗಳೂ ಕೂಡ ಪ್ರಯೋಜನಕ್ಕೆ ಬರುತ್ತಿಲ್ಲ ಎಂದಾದಲ್ಲಿ, ನಂತರ ಶನಿವಾರದಂದು ಕಪ್ಪು ಶಾಯಿಯೊಂದಿಗೆ 307 ಅನ್ನು ಬರೆಯಿರಿ, ಅದನ್ನು ಸಂತ್ರಸ್ತ ವ್ಯಾಕೀಯ ಮೇಲಿನಿಂದ ಕೆಳಕ್ಕೆ 7 ಬಾರಿ ನಿವಾಳಿಸಿ. ಈಗ ಅದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಎರಡು ದಿಕ್ಕುಗಳಲ್ಲಿ ಅವುಗಳನ್ನು ಎಸೆಯಿರಿ.  ಇದರಿಂದ ರೋಗ ಬೇಗನೆ ಗುಣಮುಖವಾಗುತ್ತದೆ.

ಇದನ್ನೂ ಓದಿ-ವರ್ಷಾರಂಭಕ್ಕೂ ಮುನ್ನ ಮಂಗಳನ ಅಂಗಳದಲ್ಲಿ ಗುರುವಿನ ನೇರನಡೆ ಆರಂಭ, ಲಕ್ಷ್ಮಿ ಕೃಪೆಯಿಂದ ಈ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳ!

ಕೆಟ್ಟ ದೃಷ್ಟಿ ನಿವಾರಿಸಲು ಈ ಕೆಲಸ ಮಾಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಟ್ಟ ದೃಷ್ಟಿ ತೆಗೆದುಹಾಕಲು ನಿಂಬೆಯನ್ನು ಬಳಸಲಾಗುತ್ತದೆ, ಒಬ್ಬ ವ್ಯಕ್ತಿ ಮೇಲೆ ಯಾರೊಬ್ಬರ ಕೆಟ್ಟ ದೃಷ್ಟಿ ಬಿದ್ದಿದ್ದರೆ, ಒಂದು ನಿಂಬೆಯನ್ನು ತೆಗೆದುಕೊಂಡು ಅದನ್ನು ಅರ್ಧದಷ್ಟು ಕತ್ತರಿಸಿ, ಕತ್ತರಿಸಿದ ಭಾಗದಲ್ಲಿ ಸ್ವಲ್ಪ ಕಪ್ಪು ಎಳ್ಳನ್ನು ಒತ್ತಿ ನಂತರ ಮೇಲಿನಿಂದ ಕಪ್ಪು ದಾರ ಸುತ್ತಿಕೊಳ್ಳಿ.  ಈಗ ಈ ನಿಂಬೆಯನ್ನು ದೃಷ್ಟಿ ಪೀಡಿದ ವ್ಯಕ್ತಿಯ ಅಡಿಯಿಂದ ಮುಡಿಯವರೆಗೆ ಏಳು ಬಾರಿ ನಿವಾಳಿಸಿ ಮಂಟೆಯಿಂದ ಅದನ್ನು ಹೊರಹಾಕಿ.

ಇದನ್ನೂ ಓದಿ-ಕೆಲವೇ ಗಂಟೆಗಳಲ್ಲಿ ಸ್ವರಾಶಿಗೆ ಮಂಗಳನ ಪ್ರವೇಶ, ಈ ಜನರ ಜೀವನದಲ್ಲಿ ಭಾರಿ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News