ಅದೃಷ್ಟವಂತರಾಗಿದ್ರೆ ಮಾತ್ರ ದೇಹದ ಈ ಭಾಗಗಳಲ್ಲಿ ಮಚ್ಚೆಗಳಿರುತ್ತೆ- ಗುರುಬಲ ಕೂಡ ಹುಟ್ಟಿನಿಂದಲೇ ಬಂದಿರುತ್ತೆ!

Lucky Moles on Male-Female Body: ಸಾಮುದ್ರಿಕಾ ಶಾಸ್ತ್ರದಲ್ಲಿ, ದೇಹದ ಮೇಲಿರುವ ಮಚ್ಚೆಗಳು ನೀಡುವ ಸೂಚನೆಗಳನ್ನು ವಿವರವಾಗಿ ನೀಡಲಾಗಿದೆ. ಈ ಮಚ್ಚೆಗಳ ಮೂಲಕ ವ್ಯಕ್ತಿಗೆ ಸಂಪತ್ತು, ಗೌರವ, ಉನ್ನತ ಸ್ಥಾನ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬಹುದು.

Written by - Bhavishya Shetty | Last Updated : Nov 30, 2023, 11:27 PM IST
    • ದೇಹದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ
    • ದೇಹದ ಮೇಲಿರುವ ಮಚ್ಚೆಗಳು ನೀಡುವ ಸೂಚನೆ ವಿವರ
    • ಮಚ್ಚೆ ಇದ್ದರೆ ಜೀವನವು ಸಮೃದ್ಧಿ ಮತ್ತು ಸಂತೋಷದಿಂದ ಕಳೆಯುತ್ತದೆ
ಅದೃಷ್ಟವಂತರಾಗಿದ್ರೆ ಮಾತ್ರ ದೇಹದ ಈ ಭಾಗಗಳಲ್ಲಿ ಮಚ್ಚೆಗಳಿರುತ್ತೆ- ಗುರುಬಲ ಕೂಡ ಹುಟ್ಟಿನಿಂದಲೇ ಬಂದಿರುತ್ತೆ!  title=
Lucky Moles

Lucky Moles on Male-Female Body: ದೇಹದ ಈ ಭಾಗಗಳಲ್ಲಿ ಮಚ್ಚೆಗಳಿದ್ದರೆ, ವ್ಯಕ್ತಿಯ ಅದೃಷ್ಟ, ವೃತ್ತಿ, ಆರ್ಥಿಕ ಸ್ಥಿತಿ ಇತ್ಯಾದಿಗಳ ಬಗ್ಗೆ ಪ್ರಮುಖ ವಿಷಯಗಳನ್ನು ಅವು ಸೂಚಿಸುತ್ತದೆ. ಈ ವರದಿಯಲ್ಲಿ ದೇಹದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟವಂತ ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೆಸ್ಟ್ ತಂಡಕ್ಕೆ ಹೊಸ ಕ್ಯಾಪ್ಟನ್ ನೇಮಿಸಿದ ಸಮಿತಿ: ಈ ಆಟಗಾರನೇ ನಾಯಕ

ಸಾಮುದ್ರಿಕಾ ಶಾಸ್ತ್ರದಲ್ಲಿ, ದೇಹದ ಮೇಲಿರುವ ಮಚ್ಚೆಗಳು ನೀಡುವ ಸೂಚನೆಗಳನ್ನು ವಿವರವಾಗಿ ನೀಡಲಾಗಿದೆ. ಈ ಮಚ್ಚೆಗಳ ಮೂಲಕ ವ್ಯಕ್ತಿಗೆ ಸಂಪತ್ತು, ಗೌರವ, ಉನ್ನತ ಸ್ಥಾನ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬಹುದು.

ಒಬ್ಬ ವ್ಯಕ್ತಿಯ ಮೂಗಿನ ಮೇಲೆ ಮಚ್ಚೆ ಇದ್ದರೆ ಅವನ ಜೀವನವು ಸಮೃದ್ಧಿ ಮತ್ತು ಸಂತೋಷದಿಂದ ಕಳೆಯುತ್ತದೆ ಎಂದು ಸೂಚಿಸುತ್ತದೆ. ಜೊತೆಗೆ ಖಂಡಿತವಾಗಿಯೂ ಯಶಸ್ಸು ಮತ್ತು ಮನ್ನಣೆಯನ್ನು ಪಡೆಯುತ್ತಾರೆ. ಮಹಿಳೆಯ ಮೂಗಿನ ಮುಂಭಾಗದಲ್ಲಿ ಮಚ್ಚೆ ಇದ್ದರೆ, ಅದು ಮಂಗಳಕರ ಎಂಬುದನ್ನು ಸೂಚಿಸುತ್ತದೆ.

ಎರಡೂ ಹುಬ್ಬುಗಳ ನಡುವೆ ಮಚ್ಚೆ ಇರುವವರು ತುಂಬಾ ಅದೃಷ್ಟವಂತರು. ಅಂತಹ ಜನರು ಬುದ್ಧಿವಂತರು ಮಾತ್ರವಲ್ಲ, ಅವರ ಬುದ್ಧಿವಂತಿಕೆ, ಕಠಿಣ ಪರಿಶ್ರಮ ಮತ್ತು ಅದೃಷ್ಟದ ಆಧಾರದ ಮೇಲೆ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.

ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಮುಖದ ಮೇಲೆ ಮಚ್ಚೆ ಇರುವುದು ಕೂಡ ಮಂಗಳಕರ. ಅದರಲ್ಲೂ ಮಹಿಳೆಯರಿಗೆ ಮುಖದ ಮೇಲೆ ಮಚ್ಚೆ ಇರುವುದು ಸೌಂದರ್ಯವನ್ನು ನೀಡುವುದರ ಜೊತೆಗೆ ಅದೃಷ್ಟವನ್ನೂ ತರುತ್ತದೆ. ತುಟಿಗಳ ಬಳಿ ಮತ್ತು ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ವ್ಯಕ್ತಿಯು ಶ್ರೀಮಂತನಾಗುತ್ತಾನೆ.

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾವುದೇ ಪುರುಷ ಅಥವಾ ಮಹಿಳೆಯ ಗಲ್ಲದ ಮೇಲೆ ಮಚ್ಚೆ ಇದ್ದರೆ, ಅದು ತುಂಬಾ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ವ್ಯಕ್ತಿಯು ತನ್ನ ಜೀವನದಲ್ಲಿ ಸಾಕಷ್ಟು ಖ್ಯಾತಿ ಮತ್ತು ಹಣವನ್ನು ಗಳಿಸುತ್ತಾನೆ. ಐಷಾರಾಮಿ ಜೀವನವನ್ನು ನಡೆಸುತ್ತಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ರೋಹಿತ್ ಶರ್ಮಾ ಬದಲು ಈತನಿಗೆ ನಾಯಕತ್ವ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News