ಬಿಳಿ ಕೂದಲನ್ನು ಬುಡ ಸಮೇತ ಕಪ್ಪಾಗಿಸಲು ತೆಂಗಿನೆಣ್ಣೆಗೆ ಈ ಎರಡು ವಸ್ತು ಬೆರೆಸಿ ಬಳಸಿ

White Hair Problem:ನೀವು ಕೂಡಾ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ತೆಂಗಿನ ಎಣ್ಣೆಗೆ ಈ  ಪದಾರ್ಥಗಳನ್ನು ಸೇರಿಸಿ ಈ ಮಿಶ್ರಣವನ್ನು ಬಳಸಿ. ಈ ಮೂಲಕ  ಸಮಸ್ಯೆಗೆ ತ್ವರಿತ ಪರಿಹಾರ  ಕಂಡುಕೊಳ್ಳಬಹುದು. 

Written by - Ranjitha R K | Last Updated : Mar 30, 2023, 03:34 PM IST
  • ಇಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯ
  • ಬಿಳಿ ಕೂದಲು ಮೂಡು ತ್ತಿದ್ದಂತೆಯೇ ಯುವಜನರ ಒತ್ತಡ ಹೆಚ್ಚಿಸುತ್ತದೆ.
  • ಅನುವಂಶಿಕ ಕಾರಣಗಳಿಂದ ಕೂಡಾ ಈ ಸಮಸ್ಯೆ ಕಾಣಿಸಿಕೊಳ್ಳಬಹುದು
ಬಿಳಿ ಕೂದಲನ್ನು ಬುಡ ಸಮೇತ ಕಪ್ಪಾಗಿಸಲು ತೆಂಗಿನೆಣ್ಣೆಗೆ ಈ ಎರಡು ವಸ್ತು ಬೆರೆಸಿ ಬಳಸಿ  title=

ಬೆಂಗಳೂರು : ಇಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ಬಿಳಿ ಕೂದಲು ಮೂಡು ತ್ತಿದ್ದಂತೆಯೇ ಯುವಜನರ ಒತ್ತಡ ಹೆಚ್ಚಿಸುತ್ತದೆ. ಅನುವಂಶಿಕ ಕಾರಣಗಳಿಂದ ಕೂಡಾ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ, ಮಾಲಿನ್ಯ ಸಹಾ ಈ ಸಮಸ್ಯೆಗೆ  ಮುಖ್ಯ ಕಾರಣಗಳಾಗಿರಬಹುದು. ಆದ್ದರಿಂದ ನೀವು ಕೂಡಾ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ತೆಂಗಿನ ಎಣ್ಣೆಗೆ ಈ  ಪದಾರ್ಥಗಳನ್ನು ಸೇರಿಸಿ ಈ ಮಿಶ್ರಣವನ್ನು ಬಳಸಿ. ಈ ಮೂಲಕ  ಸಮಸ್ಯೆಗೆ ತ್ವರಿತ ಪರಿಹಾರ  ಕಂಡುಕೊಳ್ಳಬಹುದು. 

ಕೂದಲನ್ನು ಶಾಶ್ವತವಾಗಿ  ಕಪ್ಪಾಗಿಸಲು ಹೀಗೆ ಮಾಡಿ : 
1. ತೆಂಗಿನ ಎಣ್ಣೆ ಮತ್ತು ಗೋರಂಟಿ :
ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.   ಇನ್ನು  ಗೋರಂಟಿ  ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. ಇದಕ್ಕಾಗಿ ಮೊದಲು ಗೋರಂಟಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ. ನಂತರ 4 ರಿಂದ 5 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ. ಈಗ ಈ ಎಣ್ಣೆಯಲ್ಲಿ ಗೋರಂಟಿ ಎಲೆಗಳನ್ನು ಕೂಡಾ ಹಾಕಿ. ಎಣ್ಣೆಯ ಬಣ್ಣ  ಬದಲಾಗಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ. ಈ ಎಣ್ಣೆ ತಣ್ಣಗಾದ ನಂತರ ಇದನ್ನು ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳವರೆಗೆ ಹಾಗೆಯೇ ಬಿಟ್ಟು ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ಕ್ರಮವನ್ನು ನಿಯಮಿತವಾಗಿ ಅನುಸರಿಸುವುದರಿಂದ  ಬಿಳಿ ಕೂದಲು ಕಪ್ಪಾಗುತ್ತದೆ. 

ಇದನ್ನೂ ಓದಿ :ಶುಗರ್ ಲೆಸ್ ಟೀ ಇಷ್ಟವಿಲ್ಲವೇ! ಮಧುಮೇಹಿ ತುಂಬಾ ಪ್ರಯೋಜನಕಾಗಿ ಈ ಸ್ಪೆಷಲ್ ಟೀ

2. ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ : 
ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ ಮಿಶ್ರಣ ಕೂಡಾ ಬಿಳಿ ಕೂದಲಿಗೆ  ಉತ್ತಮ ಪರಿಹಾರ. ನೆಲ್ಲಿಕಾಯಿ ಹಲವಾರು ರೀತಿಯ ಪೋಷಕಾಂಶ  ಮತ್ತು ಆಯುರ್ವೇದ ಗುಣಗಳನ್ನು ಹೊಂದಿವೆ. ಅದೇ ರೀತಿ ನೆಲ್ಲಿಕಾಯಿ ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಈ ಹಣ್ಣಿಗೆ ಕಾಲಜನ್ ಹೆಚ್ಚಿಸುವ ಶಕ್ತಿ ಇದೆ. ಅಷ್ಟೇ ಅಲ್ಲ, ನೆಲ್ಲಿಕಾಯಿಯಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. 

ಇದರ ಮಿಶ್ರಣಕ್ಕಾಗಿ 4 ಚಮಚ ತೆಂಗಿನ ಎಣ್ಣೆಯಲ್ಲಿ 2 ರಿಂದ 3 ಚಮಚ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ಈ ಮಿಶ್ರಣ ತಣ್ಣಗಾದ ನಂತರ ಈ ಪೇಸ್ಟ್ ಅನ್ನು ಕೂದಲಿಗೆ  ಹಚ್ಚಿ. ರಾತ್ರಿಯಿಡೀ ಈ ಮಿಶ್ರಣವನ್ನು ಕೂದಲಿನ ಮೇಲೆ ಹಾಗೆಯೇ ಬಿಟ್ಟು ಬೆಳಿಗ್ಗೆ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದರ ಫಲಿತಾಂಶಗಳು ಕೆಲವೇ ದಿನಗಳಲ್ಲಿ ಗೋಚರಿಸುತ್ತವೆ.

ಇದನ್ನೂ ಓದಿ : ಮೊದಲು ಕೇವಲ ವಯಸ್ಸಾದವರಲ್ಲಿ ಕಾಣಿಸುತ್ತಿದ್ದ ಈ ಕಾಯಿಲೆ ಇದೀಗ ಹದಿಹರೆಯದವರಿಗೆ ಹೆಚ್ಚು ಕಾಡುತ್ತಿದೆ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News