Thyroid Problem: ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಥೈರಾಯ್ಡ್ ಸಮಸ್ಯೆ (Thyroid Problem) ಕೂಡ ಪ್ರಮುಖವಾಗಿದೆ. ತಜ್ಞರ ಪ್ರಕಾರ, ಔಷಧಿಗಳೊಂದಿಗೆ ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನೀವು ಥೈರಾಯ್ಡ್ ಸಮಸ್ಯೆ ಅನ್ನು ಸುಲಭವಾಗಿ ನಿರ್ವಹಿಸಬಹುದು. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಖಂಡಿತವಾಗಿಯೂ ಹಸಿರು ಕೊತ್ತಂಬರಿ (Green Coriander) ಸೇರಿಸಿ. ಹಸಿರು ಕೊತ್ತಂಬರಿಯಲ್ಲಿ ಮೆಗ್ನೀಸಿಯಮ್, ಕಬ್ಬಿಣ, ಆಹಾರದ ನಾರು ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳಿವೆ. ಇದಲ್ಲದೇ ಇದರಲ್ಲಿ ವಿಟಮಿನ್ ಸಿ ಪ್ರಮಾಣವೂ ಇದೆ. ನೀವು ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇರಿಸಿದರೆ, ಅದು ಥೈರಾಯ್ಡ್ (Green coriander for Thyroid) ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಥೈರಾಯ್ಡ್ ನಿಯಂತ್ರಣದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೆ ಈ ಆಹಾರ:
ಸಾಮಾನ್ಯವಾಗಿ ಆಹಾರವನ್ನು ಸ್ವಾದಿಷ್ಟವನ್ನಾಗಿಸಲು ಹಲವು ಭಕ್ಷ್ಯಗಳಲ್ಲಿ ನಾವು ಕೊತ್ತಂಬರಿ ಸೊಪ್ಪನ್ನು (Green Coriander) ಬಳಸುತ್ತೇವೆ. ಆದರೆ ಕೊತ್ತಂಬರಿ ಸೊಪ್ಪಿನ ರಸರನ್ನು ಪ್ರತಿನಿತ್ಯ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಬಹುದಾಗಿದೆ.
ಇದನ್ನೂ ಓದಿ- Benefits Of Dosa: ದೋಸೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದರೆ ನಿಮಗೂ ಅಚ್ಚರಿಯಾಗಬಹುದು
ಇದಕ್ಕಾಗಿ ಎರಡು ಚಮಚ ಕೊತ್ತಂಬರಿ ಸೊಪ್ಪನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಸಿಡಿ. ಇದನ್ನು ಬೆಳಿಗ್ಗೆ 10 ನಿಮಿಷ ಕುದಿಸಿ ನಂತರ ಫಿಲ್ಟರ್ ಮಾಡಿ ಕುಡಿಯಿರಿ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ರಸವನ್ನು (Green coriander for Thyroid) ಕುಡಿಯುವುದು ಥೈರಾಯ್ಡ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಇದನ್ನು ಎರಡು ಮೂರು ವಾರಗಳವರೆಗೆ ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು.
ತೂಕ ನಷ್ಟಕ್ಕೆ ಸಹಕಾರಿ:
ಕೇವಲ ಜ್ಯೂಸ್ ರೂಪದಲ್ಲಿ ಮಾತ್ರವಲ್ಲದೆ ನಿತ್ಯ ನೀವು ಸೇವಿಸುವ ಆಹಾರದಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುವುದರಿಂದ ನಿಮಗೆ ಥೈರಾಯ್ಡ್ ಸಮಸ್ಯೆಯಿಂದ ಪರಿಹಾರ ಸಿಗುವುದು ಮಾತ್ರವಲ್ಲ, ತೂಕ ನಷ್ಟಕ್ಕೂ (Weight Loss) ಇದು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ, ಇದು ಮೂಳೆ ನೋವಿನಲ್ಲಿಯೂ ಪರಿಹಾರ ನೀಡುತ್ತದೆ.
ಇದನ್ನೂ ಓದಿ- ಈ ತರಕಾರಿಗಳನ್ನು ಹಸಿ ಅಥವಾ ಅರ್ಧ ಬೇಯಿಸಿ ತಿನ್ನುವುದು ವಿಷದಷ್ಟೇ ಅಪಾಯ
ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ಹಸಿರು ಕೊತ್ತಂಬರಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ, ಈ ಕಾರಣದಿಂದಾಗಿ ಥೈರಾಯ್ಡ್ ರೋಗಿಗಳಿಗೆ ಖಿನ್ನತೆಯ ಸಮಸ್ಯೆ ಇರುವುದಿಲ್ಲ. ಹೆಚ್ಚಿದ ರಕ್ತದಲ್ಲಿನ ಸಕ್ಕರೆಮಟ್ಟ ಹೆಚ್ಚಾಗುವುದರಿಂದ ಥೈರಾಯ್ಡ್ ಕೂಡ ಹೆಚ್ಚಾಗಬಹುದು. ಆದರೆ ನೀವು ಹಸಿರು ಕೊತ್ತಂಬರಿ ಸೊಪ್ಪನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಈ ಪ್ರಿಸ್ಕ್ರಿಪ್ಷನ್‌ಗಳನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ