Panchak Kaal 2021: ಇಂದಿನಿಂದ ಆರಂಭಗೊಂಡಿದೆ ಪಂಚಕ ಕಾಲ, ಮುಂದಿನ ಐದು ದಿನಗಳ ಕಾಲ ಜಾಗ್ರತೆ ವಹಿಸಿ

Panchak Kaal 2021 - ಕೆಲ ಕೆಲಸಗಳ ಪಾಲಿಗೆ ಪಂಚಕ ಕಾಲ ತುಂಬಾ ಅಶುಭ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಆ ಕೆಲಸಗಳನ್ನು ಮಾಡುವುದರಿಂದ ಕುಟುಂಬದಲ್ಲಿ ಸಂಕಷ್ಟ ಎದುರಾಗುತ್ತದೆ.

Written by - Nitin Tabib | Last Updated : Jun 28, 2021, 06:28 PM IST
  • ಇಂದಿನಿಂದ ಪಂಚಕ ಕಾಲ ಆರಂಭಗೊಂಡಿದೆ.
  • ಜುಲೈ 3ರವರೆಗೆ ಮನೆಯಲ್ಲಿ ಈ ಶುಭ ಕಾರ್ಯಗಳನ್ನು ನೆರವೆರಿಸಬೇಡಿ.
  • ಅಪ್ಪಿತಪ್ಪಿಯೂ ಕೂಡ ಬೆಡ್, ಸೋಫಾ ಇತ್ಯಾದಿಗಳನ್ನು ಖರೀದಿಸಬೇಡಿ.
Panchak Kaal 2021: ಇಂದಿನಿಂದ ಆರಂಭಗೊಂಡಿದೆ ಪಂಚಕ ಕಾಲ, ಮುಂದಿನ ಐದು ದಿನಗಳ ಕಾಲ ಜಾಗ್ರತೆ ವಹಿಸಿ title=
Panchak Kaal 2021 (Representational Image)

Panchak Kaal 2021 - ಜ್ಯೋತಿಷ್ಯ ಶಾಸ್ತ್ರ (Astrology)ದಲ್ಲಿ ಶುಭ-ಅಶುಭ ಕೆಲಸಗಳ ಜೊತೆಗೆ ಪಂಚಕ ಕಾಲದ ಕುರಿತು ವಿಶೇಷ ಗಮನಹರಿಸಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು, ಉದಾಹರಣೆಗೆ ವಿವಾಹಿತ ಮಗಳನ್ನು ಗಂಡನ ಮನೆಗೆ ಕಳುಹಿಸುವುದಾಗಲಿ ಅಥವಾ ಹೊಸ ಕಾರ್ಯಗಳ ಆರಂಭ, ಗೃಹ ಪ್ರವೇಶ ಇತ್ಯಾದಿಗಳನ್ನು ಮಾಡಬಾರದು. ಜೂನ್ 28 ಅಂದರೆ, ಇಂದಿನಿಂದಲೇ ಪಂಚಕ ಕಾರ್ಯ ಆರಂಭಗೊಂಡಿದೆ. ಇದು ಜುಲೈ 3 ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾದರೆ ಬನ್ನಿ ಪಂಚಕ ಕಾಲ ಎಂದರೇನು ಹಾಗೂ ಈ ಕಾಲದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ತಿಳಿದುಕೊಳ್ಳೋಣ.

ಪಂಚಕ ಕಾಲ ಯಾವಾಗ ಆರಂಭಗೊಳ್ಳುತ್ತದೆ
ಜೋತಿಷ್ಯಶಾಸ್ತ್ರದ (Jyotishya Shastra) ಪ್ರಕಾರ ಧನಿಷ್ಟ ನಕ್ಷತ್ರದ ತೃತೀಯ ಚರಣ ಹಾಗೂ ಶತಭಿಷಾ, ಪೂರ್ವ ಭಾದ್ರಪದ, ಉತ್ತರಾಭಾದ್ರಪದ ಹಾಗೂ ರೇವತಿ ನಕ್ಷತ್ರಗಳ ನಾಲ್ಕು ಚರಣಗಳಲ್ಲಿ ಚಂದ್ರ ಸಂಚರಿಸುವ ಕಾಲವನ್ನು ಪಂಚಕ ಕಾಲ ಎಂದು ಕರೆಯಲಾಗುತ್ತದೆ. ಕುಂಭ ರಾಶಿಯಿಂದ ಮೀನ ರಾಶಿಯವರೆಗೆ ಚಂದ್ರನ ಈ ರೀತಿಯ ಭ್ರಮಣ ಪಂಚಕಗಳಿಗೆ ಜನ್ಮ ನೀಡುತ್ತದೆ. ಬೇರೊಂದು ನಂಬಿಕೆಗಳ ಪ್ರಕಾರ, ರಾವಣನ ವಧೆ ನಡೆದ ತಿಥಿಯ ನಂತರದ ಐದು ದಿನಗಳನ್ನು ಪಂಚಕ ಕಾಲ (Panchak Kaal) ಎಂದು ಭಾವಿಸುವ ಪರಂಪರೆ ಕೂಡ ಇದೆ.

ಸಾವಿನ ಕುರಿತು ಈ ರೀತಿಯ ನಂಬಿಕೆಗಳಿವೆ
ಧಾರ್ಮಿಕ ನಂಬಿಕೆಗಳ ಪ್ರಕಾರ ಒಂದು ವೇಳೆ ಪಂಚಕ ಕಾಲದಲ್ಲಿ ಯಾವುದಾದರು ಓರ್ವ ಕುಟುಂಬ ಸದಸ್ಯನ ನಿಧನ ಪಂಚಕ ಕಾಲದಲ್ಲಿ ನಡೆದುಹೋದರೆ, ಅದೇ ಕುಟುಂಬದ ಮತ್ತೆ ಐದು ಸದಸ್ಯರ ಸಾವು ಕೂಡ ಸಂಭವಿಸುತ್ತದೆ. ಒಂದು ವೇಳೆ ಕುಟುಂಬದ ಐವರು ಸದಸ್ಯರ ಸಾವು ಸಂಭವಿಸದೆ ಇದ್ದಲ್ಲಿಯೂ ಕೂಡ, ಐವರು ಕುಟುಂಬ ಸದಸ್ಯರಿಗೆ ರೋಗ, ಶೋಕ ಅಥವಾ ಕಷ್ಟ ಇತ್ಯಾದಿಗಳು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಗರುಡ ಪುರಾಣದಲ್ಲಿ (Garud Puran) ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ವಿಶೇಷ ವಿಧಾನ ಸೂಚಿಸಲಾಗಿದೆ. ಈ ವಿಧಾನವನ್ನು ಅನುಸರಿಸಿ ಕುಟುಂಬದ ಇತರ ಸದಸ್ಯರಿಗೆ ಬಂದೊದಗಿರುವ ಅಪಾಯವನ್ನು ದೂರಮಾಡಬಹುದು. 

ಇದನ್ನೂ ಓದಿ-ಜುಲೈನಲ್ಲಿ ಈ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ ಮಹಾಲಕ್ಷ್ಮೀ

ಪಂಚಕ ಕಾಲದಲ್ಲಿ ಅಪ್ಪಿತಪ್ಪಿಯೂ ಕೂಡ ಈ ಕೆಲಸಗಳನ್ನು ಮಾಡಬೇಡಿ
ಸನಾತನ ಸಂಸ್ಕೃತಿಯಲ್ಲಿ (Sanatan Culture) ಪಂಚಕ ಕಾಲವನ್ನು ಅತ್ಯಂತ ಅಶುಭ ಕಾಲ ಎಂದು ಭಾವಿಸಲಾಗಿದೆ. ವೈದಿಕ ಜೋತಿಷ್ಯದ ಪ್ರಕಾರ ಈ ಐದು ದಯಾನಗಳಲ್ಲಿ ಕೆಲ ವಿಶೇಷ ಕೆಲಸಗಳನ್ನು ಮಾಡಬಾರದು ಎಂದು ಹೇಳಿದಲಾಗಿದೆ.

ಇದನ್ನೂ ಓದಿ-ಸಂಕಷ್ಟ ಚತುರ್ಥಿ ದಿನ ಮಾಡಲೇ ಬೇಡಿ ಈ ತಪ್ಪು, ಸಂಭವಿಸಬಹುದು ಭಾರೀ ನಷ್ಟ

>> ಪಂಚಕ ಕಾಲದಲ್ಲಿ ಕಟ್ಟಿಗೆಯನ್ನು ಖರೀದಿಸಬಾರದು.
>> ಒಂದು ವೇಳೆ ನೀವು ಮನೆ ನಿರ್ಮಾಣದ ಕೆಲಸ ಕೈಗೊಂಡಿದ್ದರೆ, ಪಂಚಕ ಕಾಲದಲ್ಲಿ ಅದರ ಮಹಡಿ ಹಾಕಿಸಬೇಡಿ. ಇಲ್ಲದಿದ್ದರೆ ಕುಟುಂಬದಲ್ಲಿ ದೊಡ್ಡ ಸಂಕಷ್ಟ ಎದುರಾಗುತ್ತದೆ.
>> ಮನೆಗಾಗಿ ಬೆಡ್, ಸೋಫಾ ಇತ್ಯಾದಿಗಳ ಖರೀದಿ ಮಾಡಬೇಡಿ.
>> ಪಂಚಕ ಕಾಲದಲ್ಲಿ ದಕ್ಷಿಣ ದಿಕ್ಕಿಗೆ ಪ್ರವಾಸ ಕೈಗೊಳ್ಳಬಾರದು ಎನ್ನಲಾಗಿದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ, ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ದೃಢಪಡಿಸುವುದಿಲ್ಲ. ಅನುಸರಿಸುವ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ತಪ್ಪದೆ ಪಡೆಯಿರಿ)

ಇದನ್ನೂ ಓದಿ -Oil Lamp : ಮನೆಯಲ್ಲಿ ಹಚ್ಚಿದ ದೀಪವನ್ನ ಬಾಯಿಯಿಂದ, ಕೈಯಿಂದ ಆರಿಸಬಾರದು ಯಾಕೆ? ಇಲ್ಲಿ ಓದಿ

Trending News