Paush Amavasya: ಪುಷ್ಯ ಅಮಾವಾಸ್ಯೆಯಂದು ಈ ಕೆಲಸ ಮಾಡಿದ್ರೆ ಎಲ್ಲಾ ನೋವು & ದುಃಖ ದೂರವಾಗುತ್ತವೆ

ಪುಷ್ಯ ಅಮವಾಸ್ಯೆ 2022: ಇಂದು(ಡಿ.23) ಪುಷ್ಯ ಅಮವಾಸ್ಯೆ. ಈ ದಿನ ಮಾಡಿದ ಕೆಲವು ಕೆಲಸಗಳು ಅಥವಾ ಕ್ರಮಗಳು ಜೀವನದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಅದೃಷ್ಟವನ್ನು ಬದಲಾಯಿಸುತ್ತದೆ. ಈ ಅಮವಾಸ್ಯೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Dec 23, 2022, 09:19 AM IST
  • ಪುಷ್ಯ ಅಮಾವಾಸ್ಯೆಯಂದು ಪೂರ್ವಜರಿಗೆ ತರ್ಪಣ-ಶ್ರದ್ಧ ಇತ್ಯಾದಿಗಳನ್ನು ಮಾಡುವುದರಿಂದ ಒಳಿತಾಗಲಿದೆ
  • ಪಿಂಡದಾನದಿಂದ ಪಿತೃದೋಷ ನಿವಾರಣೆಯಾಗಿ ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸಮೃದ್ಧಿ ಬರುತ್ತದೆ
  • ಪುಷ್ಯ ಅಮವಾಸ್ಯೆಯಂದು ಬಡವರಿಗೆ ದಾನ ಮಾಡಿದ್ರೆ ಪೂರ್ವಜರ ಋಣವು ದೂರವಾಗುತ್ತದೆ
Paush Amavasya: ಪುಷ್ಯ ಅಮಾವಾಸ್ಯೆಯಂದು ಈ ಕೆಲಸ ಮಾಡಿದ್ರೆ ಎಲ್ಲಾ ನೋವು & ದುಃಖ ದೂರವಾಗುತ್ತವೆ title=
ಪುಷ್ಯ ಅಮವಾಸ್ಯೆ 2022

ನವದೆಹಲಿ: ಪುಷ್ಯ ಅಮವಾಸ್ಯೆಯು 2022ರ ಕೊನೆಯ ಅಮವಾಸ್ಯೆಯಾಗಿದೆ. ಈ ದಿನ ಪೂರ್ವಜರ ಆಶೀರ್ವಾದ ಪಡೆಯುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪುಷ್ಯ ಅಮವಾಸ್ಯೆಯು ಕರ್ಮಗಳ ಅಮಾವಾಸ್ಯೆಯಾಗಿದೆ. ಮತ್ತೊಂದೆಡೆ ಶುಕ್ರವಾರದ ಅಮಾವಾಸ್ಯೆಯ ದಿನವು ತುಂಬಾ ವಿಶೇಷವಾಗಿದೆ. ತಾಯಿ ಲಕ್ಷ್ಮಿದೇವಿಯ ವಿಶೇಷ ಅನುಗ್ರಹ ಪಡೆಯುವ ವಿಷಯದಲ್ಲಿ ಇದು ತುಂಬಾ ವಿಶೇಷವಾಗಿದೆ.

ಪುಷ್ಯ ಅಮವಾಸ್ಯೆಯಂದು ಸ್ನಾನ-ದಾನ, ಪೂಜೆ ಮತ್ತು ಮಂಗಳಕರ ಸಮಯದಲ್ಲಿ ಮಾಡುವ ಕ್ರಮಗಳು ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ. ಪುಷ್ಯ ಮಾಸದ ಅಮಾವಾಸ್ಯೆಯಂದು ಭಗವಾನ್ ವಿಷ್ಣು, ಸೂರ್ಯದೇವ ಮತ್ತು ಪೂರ್ವಜರನ್ನು ಪೂಜಿಸುವುದರಿಂದ ವ್ಯಕ್ತಿಯು ಪರಲೋಕದಲ್ಲಿ ಉತ್ತಮ ಸ್ಥಾನ ಪಡೆಯುತ್ತಾನೆ ಎಂದು ನಂಬಲಾಗಿದೆ.

ಇದನ್ನೂ ಓದಿ: Today Horoscope : ಈ ರಾಶಿಯ ಜನರು ಕಚೇರಿಯಲ್ಲಿ ಜಾಗೃತರಾಗಿರಬೇಕು, ಇಲ್ಲದಿದ್ದರೆ ಭಾರೀ ನಷ್ಟವಾಗಬಹುದು

ಪುಷ್ಯ ಅಮವಾಸ್ಯೆಯ ಶುಭ ಸಮಯ

ಹಿಂದೂ ಕ್ಯಾಲೆಂಡರ್ ಪ್ರಕಾರ ಪುಷ್ಯ ಅಮವಾಸ್ಯೆಯು ಡಿಸೆಂಬರ್ 22ರಂದು ರಾತ್ರಿ 7.14ರಿಂದ ಪ್ರಾರಂಭವಾಗಿದೆ ಡಿ.23ರ ಮಧ್ಯಾಹ್ನ 3.47ರವರೆಗೆ ಇರುತ್ತದೆ. ಈ ರೀತಿ ಇಂದು ಮಧ್ಯಾಹ್ನದವರೆಗೆ ಸ್ನಾನ-ದಾನ, ಪೂಜೆಗೆ ಶುಭ ಮುಹೂರ್ತವಿರುತ್ತದೆ.

ಪುಷ್ಯ ಅಮವಾಸ್ಯೆಯಂದು ಈ ಕೆಲಸ ಮಾಡಬೇಕು

  • ಪುಷ್ಯ ಅಮಾವಾಸ್ಯೆಯಂದು ಪೂರ್ವಜರಿಗೆ ತರ್ಪಣ-ಶ್ರದ್ಧ ಇತ್ಯಾದಿಗಳನ್ನು ಮಾಡಬೇಕು. ಅರ್ಹ ಪಂಡಿತರ ಮಾರ್ಗದರ್ಶನದಲ್ಲಿ ಪಿಂಡ ದಾನ ಮಾಡಿ. ಇದರೊಂದಿಗೆ ಪಿತೃದೋಷ ನಿವಾರಣೆಯಾಗಿ ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸಮೃದ್ಧಿ ಬರುತ್ತದೆ.
  • ಪುಷ್ಯ ಅಮವಾಸ್ಯೆಯ ದಿನ ಪಕ್ಷಿಗಳಿಗೆ ಆಹಾರ ನೀಡಬೇಕು. ವಿಶೇಷವಾಗಿ ಕಾಗೆಗಳಿಗೆ ಧಾನ್ಯಗಳನ್ನು ತಿನ್ನಿಸುವುದರಿಂದ ರಾಹುದೋಷ ಮತ್ತು ಪಿತ್ರದೋಷ ನಿವಾರಣೆಯಾಗುತ್ತದೆ. ಅಂದಹಾಗೆ ಈ ಕೆಲಸವನ್ನು ಪ್ರತಿ ಅಮಾವಾಸ್ಯೆಯ ದಿನದಂದು ಮಾಡಬೇಕು.
  • ಪುಷ್ಯ ಅಮವಾಸ್ಯೆಯ ದಿನ ಬಡವರಿಗೆ ದಾನ ಮಾಡಬೇಕು. ಇದರಿಂದ ಪೂರ್ವಜರ ಋಣವು ದೂರವಾಗುತ್ತದೆ ಮತ್ತು ಅವರು ನಿಮ್ಮನ್ನು ಆಶೀರ್ವದಿಸುತ್ತಾರೆ.
  • ಅಮವಾಸ್ಯೆಯ ದಿನದಂದು ಹಸುವಿಗೆ ಮೇವು, ರೊಟ್ಟಿ ಮತ್ತು ಬೆಲ್ಲವನ್ನು ತಿನ್ನಿಸಬೇಕು.

ಇದನ್ನೂ ಓದಿShani Dev: ಶನಿವಾರದಂದು ಈ ಮಾಂತ್ರಿಕ ತಂತ್ರ ಮಾಡಿ, ಶನಿದೇವನ ಕೃಪೆಗೆ ಪಾತ್ರರಾಗಿ

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News