18 ವರ್ಷಗಳ ನಂತರ ಈ ರಾಶಿಗೆ ರಾಹು ಪ್ರವೇಶ, ನಾಲ್ಕು ರಾಶಿಯವರಿಗೆ ಆಗಲಿದೆ ಭಾರೀ ಧನ ಲಾಭ

ಈ ವರ್ಷ ರಾಹುವು ಯಾವುದೇ ರಾಶಿಯನ್ನು ಬದಲಾಯಿಸಲಿಲ್ಲ. ಆದರೆ ಮುಂದಿನ ವರ್ಷ ಏಪ್ರಿಲ್ 12 ರಂದು ರಾಹು ರಾಶಿಯನ್ನು ಬದಲಾಯಿಸಲಿದ್ದಾನೆ. ರಾಶಿ ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.

Written by - Ranjitha R K | Last Updated : Dec 16, 2021, 01:09 PM IST
  • ಏಪ್ರಿಲ್‌ನಲ್ಲಿ ರಾಶಿ ಬದಲಿಸಲಿರುವ ರಾಹು
  • 18 ವರ್ಷಗಳ ನಂತರ ಮೇಷ ರಾಶಿಗೆ ರಾಹು ಪ್ರವೇಶ
  • ಈ ರಾಶಿಯವರಿಗೆ ರಾಹು ಸಂಕ್ರಮಣ ಮಂಗಳಕರ
  18 ವರ್ಷಗಳ ನಂತರ ಈ ರಾಶಿಗೆ ರಾಹು ಪ್ರವೇಶ,  ನಾಲ್ಕು ರಾಶಿಯವರಿಗೆ ಆಗಲಿದೆ ಭಾರೀ ಧನ ಲಾಭ  title=
ಏಪ್ರಿಲ್‌ನಲ್ಲಿ ರಾಶಿ ಬದಲಿಸಲಿರುವ ರಾಹು

ನವದೆಹಲಿ : ಶನಿಯ ನಂತರ ಅತಿ ಹೆಚ್ಚು ಕಷ್ಟಗಳನ್ನು ನೀಡುವ ಗ್ರಹ ಅಂದರೆ ರಾಹು. ಜಾತಕದಲ್ಲಿ ರಾಹು (Rahu) ನೀಚ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೀವನವು ಬಹಳಷ್ಟು ದುಃಖದಲ್ಲಿ ಮುಳುಗಬೇಕಾಗುತ್ತದೆ. ರಾಹುವು ಒಂದೂವರೆ ವರ್ಷಗಳಲ್ಲಿ ರಾಶಿಚಕ್ರವನ್ನು (Zodiac sign) ಬದಲಾಯಿಸುತ್ತಾನೆ. ಈ ವರ್ಷ ರಾಹುವು ಯಾವುದೇ ರಾಶಿಯನ್ನು ಬದಲಾಯಿಸಲಿಲ್ಲ. ಆದರೆ ಮುಂದಿನ ವರ್ಷ ಏಪ್ರಿಲ್ 12 ರಂದು ರಾಹು ರಾಶಿಯನ್ನು (Rahu transit) ಬದಲಾಯಿಸಲಿದ್ದಾನೆ. ರಾಶಿ ಬದಲಾಯಿಸುವ ಮೂಲಕ ಮೇಷ ರಾಶಿಯನ್ನು (Aries) ಪ್ರವೇಶಿಸಲಿದ್ದಾನೆ. 18 ವರ್ಷಗಳ ನಂತರ ರಾಹು ಮೇಷ ರಾಶಿ ಪ್ರವೆಶಿಸಲಿದ್ದಾನೆ. ರಾಹುವಿನ ಈ ಸ್ಥಾನ ಬದಲಾವಣೆ,  4 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿ ಪರಿಣಮಿಸಲಿದೆ.  

ಈ ರಾಶಿಯವರಿಗೆ ರಾಹು ಸಂಕ್ರಮಣ ಮಂಗಳಕರ  :

ಮಿಥುನ : ಮೇಷ ರಾಶಿಗೆ (Aries) ರಾಹುವಿನ ಪ್ರವೇಶವು ಮಿಥುನ ರಾಶಿಯವರಿಗೆ (Gemini) ತುಂಬಾ ಶುಭಕರವಾಗಿರುತ್ತದೆ. ಅವರ ಆದಾಯ ಹೆಚ್ಚಾಗುತ್ತದೆ. ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಪ್ರತಿಯೊಂದು ಯೋಜನೆಯು ಯಶಸ್ವಿಯಾಗುತ್ತದೆ. ಒಟ್ಟಾರೆಯಾಗಿ, ಈ ಸಮಯದಲ್ಲಿ ಉತ್ತಮ ಪ್ರಗತಿಯಾಗಲಿದೆ.  

ಇದನ್ನೂ ಓದಿ:  ಈ ದಿನ ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಸಮೃದ್ದಿಗಾಗಿ ಒಂದು ಕೆಲಸ ಮಾಡಿದರೆ ಸಾಕು..! ತಪ್ಪಿದರೆ ಮತ್ತೆ ಒಂದು ವರ್ಷ ಕಾಯಬೇಕು

ಕರ್ಕ ರಾಶಿ : ಕರ್ಕಾಟಕ ರಾಶಿಯವರಿಗೆ (Cancer) ರಾಹುವಿನ ಸ್ಥಾನ ಬದಲಾವಣೆಯಿಂದ ಧನ ಮತ್ತು ಖರ್ಚು ವೆಚ್ಚವಾಗಲಿದೆ. ಆದಾಗ್ಯೂ, ಈ ವೆಚ್ಚಗಳು ನಿಮ್ಮ ಜೀವನಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಗೆ ಸಂತೋಷವನ್ನು ನೀಡುತ್ತದೆ. ವೃತ್ತಿಜೀವನ ಉತ್ತಮವಾಗಿರಲಿದೆ. ಆದರೆ ಶತ್ರುಗಳಿಂದ ದೂರವಿರಿ. 

ತುಲಾ : ರಾಹು ತುಲಾ ರಾಶಿಯವರಿಗೆ (Libra) ಹಠಾತ್ ಧನಲಾಭವನ್ನು ನೀಡಲಿದ್ದಾರೆ. ವೃತ್ತಿಜೀವನ ಉತ್ತಮವಾಗಿರಲಿದೆ. ತಮ್ಮ ಇಷ್ಟದ ಕೆಲಸವನ್ನು ಪಡೆಯಲು ಪ್ರಯತ್ನಗಳನ್ನು ಮಾಡುತ್ತಿದ್ದವರ ಇಚ್ಛೆಯನ್ನು ರಾಹು (Rahu) ನೆರವೇರಿಸಲಿದ್ದಾನೆ. 

ವೃಶ್ಚಿಕ :  ಈ ಸಂಚಾರವು ವೃಶ್ಚಿಕ ರಾಶಿಯ (Scorpio) ಜನರಿಗೆ ಕೆಲಸದ ಸ್ಥಳದಲ್ಲಿ ಅಪಾರ ಪ್ರಯೋಜನಗಳನ್ನು ನೀಡಲಿದೆ.   ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ. ಜನರು ನಿಮ್ಮ ಕೆಲಸದ ವಿಧಾನವನ್ನು ಪ್ರಶಂಸಿಸಲಿದ್ದಾರೆ. ಬಡ್ತಿ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ವ್ಯಾಪಾರದಲ್ಲಿಯೂ ದೊಡ್ಡ ಲಾಭವನ್ನು ಕಾಣಬಹುದು. 

ಇದನ್ನೂ ಓದಿ:  ಈ ರಾಶಿಚಕ್ರದ ಮಹಿಳೆಯರು ಹೆಚ್ಚಾಗಿ ವಿಶ್ವಾಸದ್ರೋಹಿಗಳಾಗಿರುತ್ತಾರೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News