Sankranti 2023: ಈ ಬಾರಿಯ ಮಕರ ಸಂಕ್ರಾಂತಿಯಂದು ಒಂದಲ್ಲ 3 ಶುಭಯೋಗಗಳ ನಿರ್ಮಾಣ, ಏನಿದರ ವಿಶೇಷತೆ?

Makar Sankranti 2023: ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದ ದಿನ ಹಲವು ವರ್ಷಗಳ ಬಳಿಕ ಒಂದು ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ಪ್ರಮುಖ ಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಈ ವರ್ಷದ ಮಕರ ಸಂಕ್ರಾಂತಿಯೂ ವಿಶೇಷವಾಗಲಿದೆ.  

Written by - Nitin Tabib | Last Updated : Jan 7, 2023, 10:51 PM IST
  • ಈ ವರ್ಷ, ಮಕರ ಸಂಕ್ರಾಂತಿ 2023 ರಂದು, ಸೂರ್ಯ, ಚಂದ್ರ, ಶನಿ, ಬುಧ ಮತ್ತು ಗುರು ಸಹ ಮಕರ ರಾಶಿಯಲ್ಲಿರಲಿದ್ದಾರೆ.
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ಮಕರ ಸಂಕ್ರಾಂತಿಯ ದಿನಾಂಕವು ಈ ಕಾರಣಕ್ಕಾಗಿ ತುಂಬಾ ಮಂಗಳಕರವಾಗಿರಲಿದೆ.
  • ಈ ದಿನ ಮಾಡಲಾಗುವ ಸ್ನಾನ, ದಾನ ಮತ್ತು ಪೂಜೆಯು ಉತ್ತಮ ಫಲಿತಾಂಶಗಳನ್ನು ನೀಡಲಿದೆ.
Sankranti 2023: ಈ ಬಾರಿಯ ಮಕರ ಸಂಕ್ರಾಂತಿಯಂದು ಒಂದಲ್ಲ 3 ಶುಭಯೋಗಗಳ ನಿರ್ಮಾಣ, ಏನಿದರ ವಿಶೇಷತೆ? title=
Sankranti 2023

Makar Sankranti 2023 Special Coincidences: ಹೊಸ ವರ್ಷದ ಆರಂಭದ ನಂತರ, ಮಕರ ಸಂಕ್ರಾಂತಿಯು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ, ಇದು ಸೂರ್ಯ ದೇವನಿಗೆ ಸಂಬಂಧಿಸಿದ ಪರ್ವವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಆದರೆ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಬರುವ ದಿನ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಸೂರ್ಯನು ಜನವರಿ 14 ರ ರಾತ್ರಿ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ, ಆದ್ದರಿಂದ ಜನವರಿ 15 ರಂದು ಮಕರ ಸಂಕ್ರಾಂತಿ ಅಥವಾ ಉತ್ತರಾಯಣವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಆದರೆ ಅಸ್ಸಾಂನಲ್ಲಿ ಇದನ್ನು ಬಿಹು ಎಂದು ಮತ್ತು ದಕ್ಷಿಣದಲ್ಲಿ ಪೊಂಗಲ್ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಮಕರ ಸಂಕ್ರಾಂತಿ ಹಬ್ಬವು ಹಲವು ವಿಧಗಳಲ್ಲಿ ವಿಶೇಷವಾಗಿರಲಿದೆ, ಏಕೆಂದರೆ ಈ ವರ್ಷ ಮಕರ ಸಂಕ್ರಾಂತಿಯಂದು ಒಂದಲ್ಲ ಮೂರು ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. ಈ ವಿಶೇಷ ಯೋಗದಿಂದ ಮಕರ ಸಂಕ್ರಾಂತಿಯ ಹಬ್ಬ ಹೇಗೆ ವಿಶೇಷವಾಗಲಿದೆ  ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಈ ಮೂರು ಯೋಗಗಳು ಮಕರ ಸಂಕ್ರಾಂತಿ ದಿನ ನಿರ್ಮಾಣಗೊಳ್ಳುತ್ತಿವೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ವರ್ಷ 2023, ಮಕರ ಸಂಕ್ರಾಂತಿಯಂದು ರೋಹಿಣಿ ನಕ್ಷತ್ರದ ವಿಶೇಷ ಕಾಕತಾಳೀಯ ಇರಲಿದೆ. ಈ ದಿನ ರೋಹಿಣಿ ನಕ್ಷತ್ರವು ರಾತ್ರಿ 8:18 ರವರೆಗೆ ಇರಲಿದೆ. ರೋಹಿಣಿ ನಕ್ಷತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತಿದೆ. ಈ ರಾಶಿಯಲ್ಲಿ ಮಕರ ಸಂಕ್ರಾಂತಿಯ ದಿನದಂದು ಸ್ನಾನ, ದಾನ, ಪೂಜೆ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ಇದರೊಂದಿಗೆ ಮಕರ ಸಂಕ್ರಾಂತಿಯ ದಿನದಂದು ಆನಂದಾದಿ ಮತ್ತು ಬ್ರಹ್ಮಯೋಗದ ಮಂಗಳಕರ ಸಂಯೋಜನೆಯೂ ನೆರವೇರಲಿದೆ.

ಆನಂದಾದಿ ಮತ್ತು ಬ್ರಹ್ಮ ಯೋಗ ಎಂದರೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಕೆಲಸಕ್ಕೆ ಬ್ರಹ್ಮ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಯೋಗದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸುವುದರಿಂದ ಅದು ಯಶಸ್ವಿಯಾಗುತ್ತದೆ. ಮತ್ತೊಂದೆಡೆ, ಆನಂದಾದಿ ಯೋಗದಲ್ಲಿ ಮಾಡಲಾಗುವ ಪೂಜೆ ಪುನಸ್ಕಾರಗಳಿಂದ ನೀವು ಮಾಡುವ ಕೆಲಸಗಳು ಹಲವು ರೀತಿಯ ಸುಖ ಸೌಕರ್ಯಗಳನ್ನು ತರುತ್ತವೆ ಮತ್ತು ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಶುಭ ಯೋಗದಲ್ಲಿ ಮಾಡುವ ಕೆಲಸದಲ್ಲಿ ಯಾವುದೇ ಅಡೆತಡೆಗಳು ಬರುವುದಿಲ್ಲ ಎಂದು ನಂಬಲಾಗಿದೆ.

ಇದನ್ನೂ ಓದಿ-Samudra Shastra: ಇಂತಹ ಕೂದಲು ಉಳ್ಳವರು ಗೆಳೆತನದಲ್ಲಿ ಚಿನ್ನದಂತಿರುತ್ತಾರೆ

ಮಕರ ಸಂಕ್ರಾಂತಿ 2023 ರಂದು ಗ್ರಹಗಳ ಯೋಗ
ಈ ವರ್ಷ, ಮಕರ ಸಂಕ್ರಾಂತಿ 2023 ರಂದು, ಸೂರ್ಯ, ಚಂದ್ರ, ಶನಿ, ಬುಧ ಮತ್ತು ಗುರು ಸಹ ಮಕರ ರಾಶಿಯಲ್ಲಿರಲಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ಮಕರ ಸಂಕ್ರಾಂತಿಯ ದಿನಾಂಕವು ಈ ಕಾರಣಕ್ಕಾಗಿ ತುಂಬಾ ಮಂಗಳಕರವಾಗಿರಲಿದೆ.  ಈ ದಿನ ಮಾಡಲಾಗುವ ಸ್ನಾನ, ದಾನ ಮತ್ತು ಪೂಜೆಯು ಉತ್ತಮ ಫಲಿತಾಂಶಗಳನ್ನು ನೀಡಲಿದೆ.

ಇದನ್ನೂ ಓದಿ-Chanakya Niti: ನೀವು ನಿಮ್ಮ ಮನೆಗೆ ಯಜಮಾನನಾಗಿದ್ದರೆ, ಈ ಸಂಗತಿ ನಿಮಗೆ ತಿಳಿದಿರಲಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News