Shani Gochar 2023 : ಶನಿ ಗೋಚಾರದಿಂದ ಕುಂಭ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ!

ಜನವರಿ 17 ರಿಂದ ಶನಿಯು ನಿಮ್ಮ ಲಗ್ನವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷದಿಂದ ಕುಂಭ ರಾಶಿಯಲ್ಲಿತ್ತು, ಇದೀಗ ಎರಡನೇ ಹಂತ ಆರಂಭವಾಗಿದ್ದು, ಉಚ್ಛ್ರಾಯ ಸ್ಥಿತಿಯಲ್ಲಿದೆ. ಶನಿಯು ನಿಮ್ಮ ಅಧಿಪತಿಯೂ ಹೌದು, ಆದರೆ ಸಾಡೇ ಸತಿಯ ಕಾರಣ, ನೀವು ತುಂಬಾ ಜಾಗರೂಕರಾಗಿರಬೇಕು.

Written by - Channabasava A Kashinakunti | Last Updated : Jan 21, 2023, 02:48 PM IST
  • ಜನವರಿ 17 ರಿಂದ ಶನಿಯು ನಿಮ್ಮ ಲಗ್ನವನ್ನು ಪ್ರವೇಶಿಸಿದ್ದಾನೆ
  • ಶನಿದೇವನು ಈ ರಾಶಿಯವಾರ ಮೇಲೆ ಏನು ಮತ್ತು ಯಾವ ಪರಿಣಾಮ?
  • ಕೆಲಸವನ್ನು ಪೂರ್ಣಗೊಳಿಸಲು ಅಗತ್ಯಕ್ಕಿಂತ ಹೆಚ್ಚು ಶ್ರಮಿಸಬೇಕಾಗುತ್ತದೆ
Shani Gochar 2023 : ಶನಿ ಗೋಚಾರದಿಂದ ಕುಂಭ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ! title=

Shani Rashi Parivartan 2023 : ಜನವರಿ 17 ರಿಂದ ಶನಿಯು ನಿಮ್ಮ ಲಗ್ನವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷದಿಂದ ಕುಂಭ ರಾಶಿಯಲ್ಲಿತ್ತು, ಇದೀಗ ಎರಡನೇ ಹಂತ ಆರಂಭವಾಗಿದ್ದು, ಉಚ್ಛ್ರಾಯ ಸ್ಥಿತಿಯಲ್ಲಿದೆ. ಶನಿಯು ನಿಮ್ಮ ಅಧಿಪತಿಯೂ ಹೌದು, ಆದರೆ ಸಾಡೇ ಸತಿಯ ಕಾರಣ, ನೀವು ತುಂಬಾ ಜಾಗರೂಕರಾಗಿರಬೇಕು. ಈಗ ನಿಮ್ಮ ಸ್ವಂತ ತಂದೆ ಅಂದರೆ ಶನಿದೇವ ನಿಮ್ಮ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಲಗ್ನದಲ್ಲಿ ಕುಳಿತಿರುವ ಶನಿ ಮಹಾರಾಜನು ಸಾರ್ವಜನಿಕ ಸಂಪರ್ಕ, ವೈವಾಹಿಕ ಜೀವನ ಮತ್ತು ಜೀವನೋಪಾಯದ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಾನೆ, ಅಂದರೆ, ಅವನ ಸಂಪೂರ್ಣ ಗಮನವು ಈ ಸ್ಥಳಗಳ ಮೇಲೆ ಇರುತ್ತದೆ. ಕುಂಭ ರಾಶಿಯನ್ನು ಪ್ರವೇಶಿಸಿದ ನಂತರ ಶನಿದೇವನು ಈ ರಾಶಿಯವಾರ ಮೇಲೆ ಏನು ಮತ್ತು ಯಾವ ಪರಿಣಾಮವನ್ನು ಬೀರುತ್ತಾನೆ? ಎಂದು ಈ ಕೆಳಗೆ ತಿಳಿಯಿರಿ..

ವೃತ್ತಿ

ಕುಂಭ ರಾಶಿಯವರು ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಅಗತ್ಯಕ್ಕಿಂತ ಹೆಚ್ಚು ಶ್ರಮಿಸಬೇಕಾಗುತ್ತದೆ. ನಿಮ್ಮ ಕ್ರಿಯೆಗಳಿಗೆ ಅನುಗುಣವಾಗಿ ನೀವು ಫಲಿತಾಂಶವನ್ನು ಪಡೆಯುತ್ತೀರಿ, ಅಂತಹ ಪರಿಸ್ಥಿತಿಯಲ್ಲಿ ಪ್ರಯತ್ನಗಳನ್ನು ಮುಂದುವರೆಸಬೇಕು ಮತ್ತು ಮನಸ್ಸಿನಿಂದ ಕೆಲಸ ಮಾಡಬೇಕು. ಮುಂಬರುವ ಎರಡೂವರೆ ವರ್ಷಗಳಲ್ಲಿ, ಇತರ ಜನರ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಬೇಕಾಗುತ್ತದೆ, ಅವರು ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ವಿದೇಶ ಪ್ರವಾಸಕ್ಕೆ ಸಮಯ ಸೂಕ್ತವಾಗಿರುತ್ತದೆ.

ಇದನ್ನೂ ಓದಿ : Vastu Tips : ಮನೆಯ ಬಳಿ ಈ ಗಿಡ ನೆಡುವುದರಿಂದ, ಸಂಪತ್ತು - ಅದೃಷ್ಟ ನಿಮ್ಮದಾಗುವುದು

ಅಹಂಕಾರವನ್ನು ಬಿಡಿ

ಕಛೇರಿಯಲ್ಲಿ ಕೆಲಸವು ಡೌನ್ ಟು ಅರ್ಥ್ ಆಗಿರಬೇಕು. ಅನಗತ್ಯ ಅಹಂಕಾರದ ಘರ್ಷಣೆಯು ಉದ್ಯೋಗದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು. ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ ಆದರೆ ಇತರರೊಂದಿಗೆ ನಿಮ್ಮ ಪ್ರಾಮಾಣಿಕತೆ ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ. ನೀವು ಅದೃಷ್ಟದ ಬೆಂಬಲವನ್ನು ಪಡೆಯಬೇಕಾದರೆ, ಇದಕ್ಕಾಗಿ ನೀವು ದಾನ ಮಾಡಬೇಕು.

ಆರೋಗ್ಯ

ತಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಇರುವವರಿಗೆ ಸಮಯವು ಕಠಿಣವಾಗಿರುತ್ತದೆ. ವಾಹನ ಅಪಘಾತಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಈ ಸಮಯದಲ್ಲಿ ದೀರ್ಘಕಾಲದ ಕಾಯಿಲೆಗಳು ಮುನ್ನೆಲೆಗೆ ಬರಬಹುದು.ಯಾವುದೇ ಕಾರಣಕ್ಕೂ ಔಷಧಿ ಸೇವಿಸುವವರು ನಿರ್ಲಕ್ಷ್ಯ ವಹಿಸಬಾರದು. ಒಂದು ವೇಳೆ ಆಪರೇಷನ್ ದೀರ್ಘ ಕಾಲ ತಡವಾದರೆ ವೈದ್ಯರ ಸಲಹೆ ಪಡೆದು ಮಾಡಿಸಿಕೊಳ್ಳುವುದು ಸೂಕ್ತ.

ಕುಟುಂಬ

ಕಿರಿಯ ಸಹೋದರರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ವೈವಾಹಿಕ ಜೀವನದ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ. ಸಂಬಂಧದಲ್ಲಿ ಉದ್ವಿಗ್ನತೆ ನಡೆಯುತ್ತಿದ್ದರೆ, ಅವರನ್ನು ಹಾಗೆ ಬಿಡಬೇಡಿ, ಬದಲಿಗೆ ಒಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಿ.

ಇದನ್ನೂ ಓದಿ : Shani Gochar 2023: ಶನಿಯ ಸಂಕ್ರಮಣದಿಂದ ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ನಷ್ಟ!

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News