Surya Gochar April 2023: ಶೀಘ್ರದಲ್ಲೇ ಮೇಷ ರಾಶಿಗೆ ಸೂರ್ಯನ ಪ್ರವೇಶ, ಭಾರಿ ಧನ ಪ್ರಾಪ್ತಿಯಿಂದ 3 ರಾಶಿಗಳ ಜನರ ಭಾಗ್ಯೋದಯ!

Surya Gochar In Aries 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಗ್ರಹಗಳ ರಾಜನಾಗಿರುವ ಸೂರ್ಯ ದೇವ ತನ್ನ ಉಚ್ಛ ರಾಶಿಯಾಗಿರುವ ಮೇಷರಾಶಿಗೆ ಪ್ರವೇಶ ನೀಡಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ್ ಭಾಗ್ಯೋದಯವಾಗಲಿದ್ದು, ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಬನ್ನಿ ಆ ಅದೃಷ್ಟವಂತ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ,  

Written by - Nitin Tabib | Last Updated : Mar 27, 2023, 05:04 PM IST
  • ಶೀಘ್ರದಲ್ಲೇ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಮೀನ ರಾಶಿಯನ್ನು ತೊರೆದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ.
  • ಸೂರ್ಯನ ಈ ಗೋಚರ ಏಪ್ರಿಲ್ 14 ರಂದು ನೆರವೇರಲಿದೆ.
  • ಹಾಗೆ ನೋಡಿದರೆ ಮೇಷ ರಾಶಿಯನ್ನು ಸೂರ್ಯನ ಉಚ್ಛ ರಾಶಿ ಎಂದೇ ಭಾವಿಸಲಾಗುತ್ತದೆ.
Surya Gochar April 2023: ಶೀಘ್ರದಲ್ಲೇ ಮೇಷ ರಾಶಿಗೆ ಸೂರ್ಯನ ಪ್ರವೇಶ, ಭಾರಿ ಧನ ಪ್ರಾಪ್ತಿಯಿಂದ 3 ರಾಶಿಗಳ ಜನರ ಭಾಗ್ಯೋದಯ! title=
ಶೀಘ್ರದಲ್ಲೇ ಮೇಷ ರಾಶಿಯಲ್ಲಿ ಸೂರ್ಯ!

Sun Transit April 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನವನ್ನು ಪರಿವರ್ತಿಸುವ ಮೂಲಕ ತಮ್ಮ ಉಚ್ಛ ಮತ್ತು ನೀಚ ರಾಶಿಯನ್ನು ಪ್ರವೇಶಿಸುತ್ತವೆ. ಇದರ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಶೀಘ್ರದಲ್ಲೇ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಮೀನ ರಾಶಿಯನ್ನು ತೊರೆದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಗೋಚರ ಏಪ್ರಿಲ್ 14 ರಂದು ನೆರವೇರಲಿದೆ. ಹಾಗೆ ನೋಡಿದರೆ ಮೇಷ ರಾಶಿಯನ್ನು ಸೂರ್ಯನ ಉಚ್ಛ ರಾಶಿ ಎಂದೇ ಭಾವಿಸಲಾಗುತ್ತದೆ. ಅಂದರೆ ಈ ರಾಶಿಯಲ್ಲಿ ಸೂರ್ಯ ತನ್ನ ಸಂಪೂರ್ಣ ಹಾಗೂ ಶುಭ ಫಲಗಳನ್ನು ನೀಡಲಿದ್ದಾನೆ ಎಂದರ್ಥ. ಹೀಗಾಗಿ ಈ ಗೋಚರದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲಿರಲಿದೆ. ಆದರೆ ಮೂರು ರಾಶಿಗಳ ಜಾತಕದವರಿಗೆ ಸೂರ್ಯನ ಈ ಗೋಚರ ವಿಶೇಷ ಫಲಗಳನ್ನು ನೀಡಲಿದ್ದು, ಈ ಜನರಿಗೆ ಸೂರ್ಯ ಗೋಚಾರದ ಅವಧಿಯಲ್ಲಿ ಅಪಾರ ಧನಲಾಭ ಹಾಗೂ ಭಾಗ್ಯೋದಯವಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ಸೂರ್ಯನ ಈ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಸೂರ್ಯ ದೇವ ನಿಮ್ಮ ರಾಶಿಯ ಆದಾಯ ಹಾಗೂ ಲಾಭದ ಸ್ಥಾನವನ್ನು ಪ್ರವೇಶಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಾಣಿಸಿಕೊಳ್ಳಲಿದೆ. ಆದಾಯದ ಹೊಸ-ಹೊಸ ಮೂಲಗಳು ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನೀವು ಆಸ್ತಿಪಾಸ್ತಿಯನ್ನು ಖರೀದಿಸಬಹುದು. ನಿಮ್ಮ ಸಾಮಾಜಿಕ ಚೌಕಟ್ಟು ವಿಸ್ತರಿಸಲಿದೆ. ಈ ಅವಧಿಯಲ್ಲಿ ಆಕಸ್ಮಿಕ ಧನಲಾಭದ ಯೋಗ ಕೂಡ ಗೋಚರಿಸುತ್ತಿದೆ. ಷೇರು ಮಾರುಕಟ್ಟೆ ಲಾಟರಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವವರಿಗೆ ಸಮಯ ಅನುಕೂಲಕರವಾಗಿದ್ದು, ಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ.

ಸಿಂಹ ರಾಶಿ: ಮಂಗಳನ ಅಂಗಳಕ್ಕೆ ಗ್ರಹಗಳ ರಾಜನ ಎಂಟ್ರಿ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಸೂರ್ಯದೇವ ನಿಮ್ಮ ರಾಶಿಯ ಅದೃಷ್ಟ, ಕರ್ಮ ಹಾಗೂ ವಿದೇಶ ಸ್ಥಾನದಲ್ಲಿ ಗೋಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಬೆಂಬಲ ಸಿಗಲಿದೆ. ಕೆಲಸ-ಕಾರ್ಯದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಆಧ್ಯಾತ್ಮದತ್ತ ಒಲವು ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಬೆಂಬಲ ಸಿಗಲಿದೆ. ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಇದನ್ನೂ ಓದಿ-Budh Gochar 2023: ಪರಮ ನೀಚ ಅವಸ್ಥೆ ತಲುಪಿದ ಗ್ರಹಗಳ ರಾಜಕುಮಾರ, 'ಧನ ಸಾಮ್ರಾಜ್ಯ ಯೋಗ' ನಿರ್ಮಾಣ, 4 ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

ಕರ್ಕ ರಾಶಿ: ಸೂರ್ಯನ ಈ ರಾಶಿ ಪರಿವರ್ತನೆ ನಿಮ್ಮ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಕೋನದಿಂದ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಸೂರ್ಯ ನಿಮ್ಮ ಗೋಚರ ಕುಂಡಲಿಯ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ನೌಕರವರ್ಗದ ಜನರಿಗೆ ಹೊಸ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಪ್ರಮೋಷನ್-ಇಂಕ್ರಿಮೆಂಟ್ ಕೂಡ ಕಾರ್ಡ್ ನಲ್ಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಅಪಾರ ಧನಲಾಭವಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ಹೊಸ ಕೆಲಸ ಆರಂಭಿಸಲು ಈ ಸಮಯ ಅನುಕೂಲಕರವಾಗಿದೆ. ನಿಮ್ಮ ಎಲ್ಲಾ ಇಚ್ಚೆಗಳು ಈಡೇರಲಿವೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟವಿರುವುದರಿಂದ ಸಾಕಷ್ಟು ಯೋಚಿಸಿ ಮುಂದಕ್ಕೆ ಸಾಗಿ ಮತ್ತು ಆರೋಗ್ಯದ ಕಾಳಜಿವಹಿಸಿ.

ಇದನ್ನೂ ಓದಿ-ನಾಳೆ ಚಂದ-ಭೂಮಿ ಪುತ್ರ ಮಂಗಳ ಮೈತ್ರಿಯಿಂದ 'ಮಹಾ ಲಕ್ಷ್ಮಿ ರಾಜಯೋಗ' ನಿರ್ಮಾಣ, ಈ 3 ರಾಶಿಗಳ ಜನರಿಗೆ ಭಾರಿ ಆಕಸ್ಮಿಕ ಧನಲಾಭ-ಬಡ್ತಿ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News