Low Calorie Diet: ಈ ನಾಲ್ಕು ಭಾರತೀಯ ಆಹಾರಗಳು ಕಡಿಮೆ ಕ್ಯಾಲೊರಿ ಹೊಂದಿವೆ, ಇದರ ಅದ್ಭುತ ಪ್ರಯೋಜನಗಳು ಇಲ್ಲಿವೆ

ಈ 4 ಭಾರತೀಯ ಆಹಾರಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿವೆ. ನಿಮ್ಮ ಕಡಿಮೆ ಕ್ಯಾಲೋರಿ ಆಹಾರದಲ್ಲಿ ಇಲ್ಲಿ ಉಲ್ಲೇಖಿಸಿರುವ 4 ಭಾರತೀಯ ಆಹಾರವನ್ನು ನೀವು ಸುಲಭವಾಗಿ ಸೇರಿಸಬಹುದು.   

Written by - Ranjitha R K | Last Updated : Oct 16, 2021, 03:00 PM IST
  • ಭಾರತದಲ್ಲಿ ಕಡಿಮೆ ಕ್ಯಾಲೋರಿ ಇರುವ ಆಹಾರಗಳಿಗೆ ಬೇಡಿಕೆ ಹೆಚ್ಚಾಗಿದೆ.
  • ಕಡಿಮೆ ಕ್ಯಾಲೋರಿ ಇರುವ 4 ಭಾರತೀಯ ಆಹಾರಗಳಿವೆ.
  • ಇವುಗಳು ತಿನ್ನಲು ರುಚಿಕರವಾಗಿರುತ್ತವೆ, ತೂಕ ನಿಯಂತ್ರಿಸಲು ಕೂಡಾ ಸಹಕಾರಿ.
Low Calorie Diet: ಈ  ನಾಲ್ಕು ಭಾರತೀಯ ಆಹಾರಗಳು ಕಡಿಮೆ ಕ್ಯಾಲೊರಿ ಹೊಂದಿವೆ, ಇದರ  ಅದ್ಭುತ ಪ್ರಯೋಜನಗಳು ಇಲ್ಲಿವೆ  title=
Low Calorie Diet foods(File photo)

ನವದೆಹಲಿ : Low Calorie Indian Food: ಭಾರತದಲ್ಲಿ ಕಡಿಮೆ ಕ್ಯಾಲೋರಿ ಇರುವ ಆಹಾರಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ತೂಕವನ್ನು ಕಡಿಮೆ ಮಾಡಲು ಅಥವಾ ತೂಕವನ್ನು ನಿಯಂತ್ರಿಸಲು (Weight lose) ಬಹಳಷ್ಟು ಸಹಾಯ ಮಾಡುತ್ತದೆ. ಆದರೆ, ಭಾರತೀಯರ ಸಮಸ್ಯೆಯೆಂದರೆ ಕಡಿಮೆ ಕ್ಯಾಲೋರಿ ಆಹಾರದಿಂದಾಗಿ (Low Calorie food), ಅವರು ತಮ್ಮ ನೆಚ್ಚಿನ ಭಾರತೀಯ ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಆದರೆ ಕಡಿಮೆ ಕ್ಯಾಲೋರಿ ಇರುವ  4 ಭಾರತೀಯ ಆಹಾರಗಳಿವೆ. ಇವುಗಳು ತಿನ್ನಲು ರುಚಿಕರವಾಗಿರುತ್ತವೆ. ಮತ್ತು ದೇಹ ತೂಕ ನಿಯಂತ್ರಿಸಲು ಕೂಡಾ ಸಹಕಾರಿಯಾಗಿರುತ್ತವೆ.

ಕಡಿಮೆ ಕ್ಯಾಲೋರಿ ಆಹಾರ: ಈ 4 ಭಾರತೀಯ ಆಹಾರಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿವೆ.
ನಿಮ್ಮ ಕಡಿಮೆ ಕ್ಯಾಲೋರಿ ಆಹಾರದಲ್ಲಿ ಇಲ್ಲಿ ಉಲ್ಲೇಖಿಸಿರುವ 4 ಭಾರತೀಯ ಆಹಾರವನ್ನು ನೀವು ಸುಲಭವಾಗಿ ಸೇರಿಸಬಹುದು. 

ಇದನ್ನೂ ಓದಿ : Benefits of Amla : ಪುರುಷರೆ ನಿಮ್ಮ ಆರೋಗ್ಯಕ್ಕೆ ಸೇವಿಸಿ 1 ನೆಲ್ಲಿಕಾಯಿ : ಇದರಿಂದ ದೂರವಾಗುತ್ತೆ ನಿಮ್ಮ ನಿರಾಶೆ!

ಮೊಳಕೆಯೊಡೆದ ಧಾನ್ಯ ಚಾಟ್ :
 ಕಡಿಮೆ ಕ್ಯಾಲೋರಿ ಆಹಾರಗಳ (Low Calorie food) ಪಟ್ಟಿಯಲ್ಲಿ ಮೊದಲ ಹೆಸರು ಮೊಳಕೆಯೊಡೆದ ಧಾನ್ಯಗಳದ್ದು.  ಇದು ಕಡಿಮೆ ಕ್ಯಾಲೋರಿ ಮಾತ್ರವಲ್ಲ,  ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ (Fiber) ಅನ್ನು ಒಳಗೊಂಡಿರುತ್ತವೆ. ಮೊಳಕೆಯೊಡೆದ ಧಾನ್ಯಗಳನ್ನು ಬೆಳಗ್ಗೆ ಎದ್ದು (benefits of sprouts) ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. 

ಹೆಸರುಬೇಳೆಯ ದೋಸೆ : 
 ಹೆಸರುಬೇಳೆ ದೋಸೆಯನ್ನು (moong dal dosa) ಬಹಳ ಬೇಗ ಮಾಡಬಹುದು. ಇದು ತಿನ್ನಲು ಕೂಡಾ ಬಹಳ ರುಚಿಯಾಗಿರುತ್ತದೆ.  ಹೆಸರುಬೇಳೆ ದೋಸೆಯಲ್ಲಿ ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿದ್ದು,  ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುತ್ತದೆ. ಹೆಸರುಬೇಳೆಯನ್ನು ರಾತ್ರಿ ನೆನೆಸಿಟ್ಟು ಮರುದಿನ ರುಬ್ಬಿಕೊಳ್ಳಿ. ನಂತರ ಅದಕ್ಕೆ ಉಪ್ಪು(salt) ಮತ್ತು ಮಸಾಲೆಗಳನ್ನು ಸೇರಿಸಿ ದೋಸೆ ಮಾಡಿಕೊಳ್ಳಬಹುದು. 

ಇದನ್ನೂ ಓದಿ : Food Day 2021 : ತಂಗಳ ರೊಟ್ಟಿ ತಿನ್ನುವುದರಿಂದ ಈ ರೋಗಗಳು ಬರುವುದಿಲ್ಲ : ಸರಿಯಾದ ಸಮಯ ಮತ್ತು ವಿಧಾನ ಇಲ್ಲಿದೆ

ಸೌತೆಕಾಯಿ :
ಸೌತೆಕಾಯಿ (Cucumber) ಮೊಸರು ಬಜ್ಜಿ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದ್ದು ಅದು ಹೊಟ್ಟೆಯನ್ನು ತಂಪಾಗಿಸುತ್ತದೆ. ಸೌತೆಕಾಯಿಯಲ್ಲಿರುವ ನೀರು ದೇಹಕ್ಕೆ ಅಗತ್ಯವಾಗಿರುವ ನೀರನ್ನು ಪೂರೈಸುತ್ತದೆ. ಮೊಸರು (benefits of Curd)ಹೊಟ್ಟೆ ಮತ್ತು ಕರುಳಿಗೆ ಪ್ರಯೋಜನಕಾರಿಯಾಗಿರುತ್ತದೆ. ಸೌತೆಕಾಯಿ ಮೊಸರು ಬಜ್ಜಿಗೆ  ಕಪ್ಪು ಉಪ್ಪು ಮತ್ತು ಕರಿಮೆಣಸು ಸೇರಿಸಿ ರುಚಿಯನ್ನು ಹೆಚ್ಚಿಸಬಹುದು.

ಉಪ್ಪಿಟ್ಟು : 
ಉಪ್ಪಿಟ್ಟನ್ನು ರವೆಯಿಂದ ತಯಾರಿಸಲಾಗುತ್ತದೆ. ಈ ಭಾರತೀಯ ಆಹಾರವು ತುಂಬಾ ಆರೋಗ್ಯಕರವಾಗಿರುವಂಥದ್ದು. ಇದರಲ್ಲಿ  ಅತಿ ಕಡಿಮೆ ಕ್ಯಾಲೊರಿಗಳಿರುತ್ತವೆ. ಇದನ್ನು ಹಸಿರು ತರಕಾರಿಗಳು (green vegetables), ಕ್ಯಾರೆಟ್, ಕ್ಯಾಪ್ಸಿಕಂ, ಕಡಲೆಕಾಯಿ ಇತ್ಯಾದಿಗಳನ್ನು ಸೇರಿಸಿ ಮತ್ತಷ್ಟು ಪೌಷ್ಟಿಕವಾಗಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News