ಯಾವಾಗ ಗೋಚರಿಸಲಿದೆ ಈ ವರ್ಷದ ಮುಂದಿನ ಗ್ರಹಣ, ದಿನಾಂಕ ಸಮಯ ತಿಳಿಯಿರಿ

ಈ ವರ್ಷದ ಮುಂದಿನ ಗ್ರಹಣ ನವೆಂಬರ್‌ನಲ್ಲಿ ನಡೆಯಲಿದೆ. ಇದು ವರ್ಷದ ಎರಡನೇ ಚಂದ್ರ ಗ್ರಹಣವಾಗಲಿದೆ. ನವೆಂಬರ್ 19 ರಂದು ನಡೆಯಲಿರುವ ಈ ಚಂದ್ರ ಗ್ರಹಣವು ಈ ಸೂರ್ಯಗ್ರಹಣದಂತೆ ದೇಶದಲ್ಲಿ ಭಾಗಶಃ ಗೋಚರಿಸುತ್ತದೆ. 

Written by - Ranjitha R K | Last Updated : Jun 11, 2021, 05:55 PM IST
  • ಯಾವಾಗ ನಡೆಯಲಿದೆ ಮುಂದಿನ ಗ್ರಹಣ
  • ನವೆಂಬರ್ ನಲ್ಲಿ ಮುಂದಿನ ಚಂದ್ರಗ್ರಹಣ ಗೋಚರ
  • ಡಿಸೆಂಬರ್ ನಲ್ಲಿ ಸೂರ್ಯಗ್ರಹಣ
ಯಾವಾಗ  ಗೋಚರಿಸಲಿದೆ ಈ ವರ್ಷದ ಮುಂದಿನ ಗ್ರಹಣ, ದಿನಾಂಕ ಸಮಯ ತಿಳಿಯಿರಿ title=
ಯಾವಾಗ ನಡೆಯಲಿದೆ ಮುಂದಿನ ಗ್ರಹಣ (photo zee news)

ನವದೆಹಲಿ : ಖಗೋಳವಿಜ್ಞಾನ ಮತ್ತು ಜ್ಯೋತಿಷ್ಯ (Astrology) ಎರಡರಲ್ಲೂ ಸೂರ್ಯ ಮತ್ತು ಚಂದ್ರ ಗ್ರಹಣಗಳಿಗೆ (Eclipse) ವಿಶೇಷ ಸ್ಥಾನವಿದೆ. ಜೂನ್ 10 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ (Solar eclipse) ಗೋಚರಿಸಿದೆ. ಇದಕ್ಕೆ ಕೆಲ ದಿನಗಳ ಹಿಂದೆ ಅಂದರೆ ಮೇ 26 ರಂದು, ವರ್ಷದ ಮೊದಲ ಚಂದ್ರಗ್ರಹಣ (Lunar eclipse) ನಡೆಯಿತು. ಈ ವರ್ಷ ಒಟ್ಟು 4 ಗ್ರಹಣಗಲು ಗೋಚರಿಸಲಿವೆ. ಈ ಪೈಕಿ 2 ಗ್ರಹಣಗಳು ಈಗಾಗಲೇ ಗೋಚರಿಸಿವೆ. ಮುಂದಿನ ಗ್ರಹಣ ನವೆಂಬರ್‌ನಲ್ಲಿ ನಡೆಯಲಿದೆ. 

ಈ ವರ್ಷದ ಮುಂದಿನ ಗ್ರಹಣ ನವೆಂಬರ್‌ನಲ್ಲಿ ನಡೆಯಲಿದೆ. ಇದು ವರ್ಷದ ಎರಡನೇ ಚಂದ್ರ ಗ್ರಹಣವಾಗಲಿದೆ (Lunar ecpilse). ನವೆಂಬರ್ 19 ರಂದು ನಡೆಯಲಿರುವ ಈ ಚಂದ್ರ ಗ್ರಹಣವು ಈ ಸೂರ್ಯಗ್ರಹಣದಂತೆ (Solar eclipse) ದೇಶದಲ್ಲಿ ಭಾಗಶಃ ಗೋಚರಿಸುತ್ತದೆ. ಇದನ್ನು ಯುರೋಪಿನ ಹೆಚ್ಚಿನ ಭಾಗಗಳಲ್ಲಿ, ಏಷ್ಯಾ, ಆಸ್ಟ್ರೇಲಿಯಾ, ವಾಯುವ್ಯ ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್‌ನ ಹೆಚ್ಚಿನ ಭಾಗಗಳಲ್ಲಿ ಕಾಣಬಹುದು.

ಇದನ್ನೂ ಓದಿ : Vastu Tips : ಪೊರಕೆ ವಿಚಾರದಲ್ಲಿ ಈ ತಪ್ಪು ಆಗದಿರಲಿ ; ಹಣಕಾಸಿನ ಸಮಸ್ಯೆ ಎದುರಾಗಬಹುದು

ಡಿಸೆಂಬರ್ ನಲ್ಲಿ ಮುಂದಿನ ಸೂರ್ಯಗ್ರಹಣ : 
ನವೆಂಬರ್ 19 ರ ಚಂದ್ರ ಗ್ರಹಣದ ನಂತರ, ವರ್ಷದ ಎರಡನೇ ಸೂರ್ಯಗ್ರಹಣ ಮತ್ತು ಕೊನೆಯ ಗ್ರಹಣ 4 ಡಿಸೆಂಬರ್ 2021 ರಂದು  ನಡೆಯಲಿದೆ. ಇದನ್ನು ದಕ್ಷಿಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಮೆರಿಕದ ದಕ್ಷಿಣ ಭಾಗಗಳು, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಕ್ಟಿಕಾದಲ್ಲಿ ಕಾಣಬಹುದು. 

ಇದನ್ನೂ ಓದಿ : Vastu Tips: ಬೇಗ ಕಂಕಣ ಬಲ ಕೂಡಿ ಬರಲು ಮಲಗುವಾಗ ಈ ದಿಕ್ಕಿನೆಡೆ ತಲೆ ಇಟ್ಟು ಮಲಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News