Tulsi Plant Remedies : ಈ ನಾಲ್ಕು ದಿನ ಅಪ್ಪಿ ತಪ್ಪಿಯೂ ತುಳಸಿ ಗಿಡಕ್ಕೆ ನೀರು ಅರ್ಪಿಸಬೇಡಿ, ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ

Tulsi Plant Remedies: ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿದರೆ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಆಶೀರ್ವಾದ ಕರುಣಿಸುತ್ತಾಳೆ ಎನ್ನಲಾಗಿದೆ. ಆದರೆ ಈ 4 ದಿನಗಳು ಮಾತ್ರ ಮರೆತು ಕೂಡಾ ತುಳಸಿಗೆ ನೀರು ಹಾಕಬಾರದು ಎನ್ನಲಾಗಿದೆ.  

Written by - Ranjitha R K | Last Updated : May 13, 2022, 09:26 AM IST
  • ತುಳಸಿ ಸಸ್ಯವನ್ನು ಮಹಾಲಕ್ಷ್ಮೀಯ ರೂಪ ಎಂದು ಕರೆಯಲಾಗುತ್ತದೆ.
  • ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿದರೆ ಲಕ್ಷ್ಮೀ ದೇವಿಯು ಸಂತುಷ್ಟಳಾಗುತ್ತಾಳೆ
  • ತುಳಸಿಗೆ ನೀರು ಅರ್ಪಿಸಿದರೆ ಲಕ್ಷ್ಮೀಯ ಆಶೀರ್ವಾದ ಸದಾ ಇರುತ್ತದೆ
Tulsi Plant Remedies : ಈ ನಾಲ್ಕು ದಿನ ಅಪ್ಪಿ ತಪ್ಪಿಯೂ ತುಳಸಿ ಗಿಡಕ್ಕೆ ನೀರು ಅರ್ಪಿಸಬೇಡಿ, ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ  title=
Tulsi Plant Remedies (file photo)

ಬೆಂಗಳೂರು  : Tulsi Plant Remedies: ತುಳಸಿ ಸಸ್ಯವನ್ನು ಮಹಾಲಕ್ಷ್ಮೀಯ ರೂಪ ಎಂದು ಕರೆಯಲಾಗುತ್ತದೆ. ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿದರೆ ಲಕ್ಷ್ಮೀ ದೇವಿಯು ಸಂತುಷ್ಟಳಾಗುತ್ತಾಳೆ ಎನ್ನುವುದು ನಂಬಿಕೆ. ಅಲ್ಲದೆ ತುಳಸಿಗೆ ನೀರು ಅರ್ಪಿಸಿದರೆ ಲಕ್ಷ್ಮೀಯ ಆಶೀರ್ವಾದ ಸದಾ ಇರುತ್ತದೆ ಎನ್ನಲಾಗುತ್ತದೆ. ಆದರೂ ತುಲೈಗೆ ನೀರು ಅರ್ಪಿಸುವ ಬಗ್ಗೆಯೂ ಕೆಲವು ನಿಯಮಗಳಿವೆ. ಕೆಲವೊಂದು ದಿನಗಳಲ್ಲಿ ತುಳಸಿಗೆ ನೀರು ಅರ್ಪಿಸಬಾರದು.  ಈ ನಾಲ್ಕು ದಿನಗಳಲ್ಲಿ ತುಳಸಿಗೆ ನೀರು ಹಾಕಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಆಗಲಿದೆ. ಹಾಗಿದ್ದರೆ ಆ ವಿಶೇಷ ದಿನಗಳು ಯಾವುವು ನೋಡೋಣ .. 

ಈ 4 ದಿನಗಳ ತುಳಸಿಗೆ ನೀರು ಹಾಕುವುದು ನಿಷಿದ್ಧ : 
ಪ್ರತಿ ಭಾನುವಾರ, ಏಕಾದಶಿ, ಚಂದ್ರಗ್ರಹಣ ಮತ್ತು ಸೂರ್ಯಗ್ರಹಣದಂದು ತುಳಸಿಗೆ ನೀರನ್ನು ಅರ್ಪಿಸಬಾರದು ಎಂದು ಸನಾತನ ಧರ್ಮದಲ್ಲಿ ಹೇಳಲಾಗಿದೆ. ಒಂದು ವೇಳೆ ಈ ನಾಲ್ಕು ದಿನ ತುಳಸಿಗೆ ನೀರು ಅರ್ಪಿಸಿದರೆ ದೋಷ ಸಿಗುತ್ತದೆ ಎನ್ನಲಾಗಿದೆ. ಇಷ್ಟು ಮಾತ್ರವಲ್ಲ, ಸಂಜೆಯ ವೇಳೆ ತುಳಸಿಯ ಎಲೆಗಳನ್ನು ಕೂಡಾ ಮುರಿಯಬಾದರು. 

ಇದನ್ನೂ ಓದಿ :  Vastu Tips: ಮನೆಯ ಈ ದಿಕ್ಕಿನಲ್ಲಿ ಲಾಫಿಂಗ್ ಬುದ್ಧನನ್ನು ಅಪ್ಪಿತಪ್ಪಿ ಇಟ್ಟರೂ ಅಪಾಯ ತಪ್ಪಿದ್ದಲ್ಲ!

ಒಣ ಸಸ್ಯವನ್ನು ನೀರಿನಲ್ಲಿ ಬಿಡಿ : 
ಒಣಗಿದ ತುಳಸಿ ಗಿಡವನ್ನು ಮನೆಯಲ್ಲಿ ಇಡಬಾರದು ಎನ್ನುವುದು ನಂಬಿಕೆ. ಮನೆಯಲ್ಲಿ ಒಣಗಿಡ ತುಳಸಿಯನ್ನು ಇಡುವುದು ಅಶುಭ ಎಂದು ಹೇಳಲಾಗಿದೆ.  ಹೀಗೆ ಮಾಡಿದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ತುಳಸಿ ಗಿಡವು ಒಣಗಿದರೆ, ಅವುಗಳನ್ನು ನದಿ ಅಥವಾ ಕಾಲುವೆಯಲ್ಲಿ ಅಂದರೆ ಹರಿಯುವ ನೀರಿನಲ್ಲಿ ಬಿಡಬೇಕು.  ಒಣಗಿದ ಗಿಡದ ಜಾಗದಲ್ಲಿ ಹೊಸ ತುಳಸಿ ಗಿಡವನ್ನು ನೆಡಬೇಕು. 

ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ :
ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು ಎಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ತುಳಸಿಯು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಜೀವನದಲ್ಲಿ ಅನೇಕ ವಿಪತ್ತುಗಳು ಬರುತ್ತವೆ. ಅಷ್ಟೇ ಅಲ್ಲ ತುಳಸಿ ಗಿಡವನ್ನುಯಾವಾಗಲೂ ಕುಂಡದಲ್ಲಿ ನೆಡಬೇಕು. ಉತ್ತರ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದು ಉತ್ತಮ ಎಂದು ಹೇಳಲಾಗುತ್ತದೆ. 

ಇದನ್ನೂ  ಓದಿ : ಈ ಎರಡು ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ರಾಹು, ಸೂಕ್ತ ಸಮಯದಲ್ಲಿ ಪರಿಹಾರ ಅಗತ್ಯ

ಗುರುವಾರ ತುಳಸಿಗೆ ಹಾಲು ಅರ್ಪಿಸಿ : 
ಲಕ್ಷ್ಮೀ  ದೇವಿಯು ಪ್ರಸನ್ನಳಾಗಬೇಕಾದರೆ, ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಜೆ ತುಳಸಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ ಎಂದು ಸನಾತನ ಧರ್ಮದಲ್ಲಿ ಹೇಳಲಾಗಿದೆ. ಹಾಗೆಯೇ ಗುರುವಾರ ತುಳಸಿ ಗಿಡಕ್ಕೆ ಹಸಿ ಹಾಲನ್ನು ಅರ್ಪಿಸಿದರೆ ಇಷ್ಟಾರ್ಥ ನೆರವೇರುತ್ತದೆಯಂತೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News